ಕುಶಾಲನಗರ, ಜೂ. ೧೯ : ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಟ್ರಸ್ಟ್ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ನೂತನ ಶಾಸಕ ಡಾ. ಮಂಥರ್ ಗೌಡ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗೌಡ ಸಮುದಾಯಕ್ಕೆ ಸೇರಿದ ರಾಷ್ಟçಕವಿ ಕುವೆಂಪು, ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದಿಚುಂಚನಗಿರಿ ಮಠ ಸಮಾಜಕ್ಕೆ ತನ್ನದೇ ಆದ ಬಹುದೊಡ್ಡ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಹೇಳಿದರು.

ಗೌಡ ಸಮುದಾಯದ ಪ್ರತಿಯೊಂದು ಸಂಘಟನೆಗಳು ಸರ್ವವ್ಯಾಪಿಯಾಗಿ ಸಮಾಜಮುಖಿ ಚಿಂತನೆ ಹೊಂದಬೇಕಿದೆ ಎಂದು ಹೇಳಿದರು. ಶುದ್ಧ ಚಿಂತನೆಗಳ ಮೂಲಕ ಗೌಡ ಸಂಘಟನೆ ಬೆಳೆದು ಇತರೆ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಮಂಥರ್ ಗೌಡ ಸಂಘ ಸಂಸ್ಥೆಗಳ ಮೂಲಕ ಸಮುದಾಯದ ಏಳಿಗೆ ಸಾಧ್ಯ ಎಂದರು. ಇಂದಿನ ಯುವ ಪೀಳಿಗೆಗೆ ಸಮಾಜವನ್ನು ಕಟ್ಟಿ ಬೆಳೆಸುವ ವಿಚಾರಧಾರೆಗಳನ್ನು ತಿಳಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದರು.

ಆದಿಚುAಚನಗಿರಿ ಕೊಡಗು-ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ಪ್ರತಿಯೊಬ್ಬರು ಅದರ ಬಗ್ಗೆ ಅಭಿಮಾನ ಹೊಂದುವುದು ಸಹಜ. ಸಮುದಾಯ ಬಾಂಧವರು ಅವಕಾಶಗಳಿಂದ ವಂಚಿತರಾಗಬಾರದೆAಬ ಉದ್ದೇಶ ದಿಂದ ಆರಂಭಗೊAಡ ಟ್ರಸ್ಟ್ನ ಉದ್ದೇಶಗಳ ಈಡೇರಿಕೆಗೆ ಕಾರ್ಯ ಯೋಜನೆ ರೂಪಿಸುವಂತಾಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಟ್ರಸ್ಟ್ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ .ಎಸ್.ಜಿ. ಮೇದಪ್ಪ, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್, ಕೊಡಗು ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥಕುಮಾರ್, ಗೌಡಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ಆರ್. ಸುರೇಶ್, ಕೊಡಗು ಜಿ.ಪಂ. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕುಶಾಲನಗರ ತಾಲೂಕು ಗೌಡ ಸಮಾಜದ ಅಧ್ಯಕ್ಷ ಸಿ.ಎಂ. ಗಣಿಪ್ರಸಾದ್, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಪಿ. ಜಯಾನಂದ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಂ. ರಂಗಸ್ವಾಮಿ, ಖಜಾಂಚಿ ಹಂಡ್ರAಗಿ ನಾಗರಾಜ್, ಗೌರವಾಧ್ಯಕ್ಷ ಸಿ.ಕೆ. ಮಲ್ಲಪ್ಪ, ಉಪಾಧ್ಯಕ್ಷರುಗಳಾದ ಪಿ.ಎಸ್. ಜನಾರ್ಧನ್, ಎಸ್.ಎ. ಯೋಗೇಶ್, ಡಿ. ಚಂದನ ಮತ್ತು ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಇದ್ದರು.