ಮಡಿಕೇರಿ, ಜೂ. ೧೮: ಬೆಂಗಳೂರಿನ ವೀಣಾಧರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಮತ್ತು ಫೈನ್ ಆರ್ಟ್ಸ್ ನಡೆಸಿದ ಆನ್‌ಲೈನ್ ಅಂತ ರ‍್ರಾಷ್ಟಿçÃಯ ಮಟ್ಟದ ಫಿಲಂ ಮ್ಯೂಸಿಕ್ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಕೊಡಗಿನ ಬಾಳೆಲೆಯ ಅನ್ವಿತ್ ಕುಮಾರ್ ಸಿ.ವಿ. ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಇವರು ಬಾಳೆಲೆಯ ಗಣೇಶ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಮತ್ತು ಚಂದ್ರಕಲಾ ದಂಪತಿ ಪುತ್ರರಾಗಿದ್ದು, ಗೋಣಿ ಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿ. ವತ್ಸಲ ನಾರಾಯಣ್ ಅವರ ಶಿಷ್ಯ.