ಸೋಮವಾರಪೇಟೆ, ಜೂ. ೧೯: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬAಧಿಸಿದAತೆ, ವಿಚಾರಣೆಗೆ ಹಾಜರಾಗದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾಗಿರುವ ಎಸ್.ಡಿ. ತಮ್ಮಯ್ಯ ಅವರನ್ನು ಮುಂದಿನ ೫ ವರ್ಷಗಳ ಅವಧಿಯವರೆಗೆ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ತಮ್ಮಯ್ಯ ಅವರು ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘದ ನಿರ್ದೇಶಕ ಜಿ.ಕೆ. ತೇಜಕುಮಾರ್ ಸೇರಿದಂತೆ ಇತರರು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಡಿ.ಎಸ್. ತಮ್ಮಯ್ಯ ಅವರಿಗೆ ವಿಚಾರಣಾ ನ್ಯಾಯಪೀಠ ನೋಟೀಸ್ ನೀಡಿದ್ದರೂ ಯಾವುದೇ ಸಮಜಾಯಿಷಿಕೆ ನೀಡದೆ, ಆಕ್ಷೇಪಣೆಯನ್ನೂ ಸಲ್ಲಿಸದೇ ಅಗೌರವ ತೋರಲಾಗಿದೆ ಎಂಬ ವಾದವನ್ನು ಮುಂದಿಟ್ಟುಕೊAಡು, ಮುಂದಿನ ೫ ವರ್ಷದ ಅವಧಿಯವರೆಗೆ ತಮ್ಮಯ್ಯ ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಮಡಿಕೇರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದಾರೆ.