*ಗೋಣಿಕೊಪ್ಪ, ಜೂ. ೧೯: ೨೦೦೬ ರ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಆದಿವಾಸಿ ಜನಾಂಗದವರ ಹಕ್ಕುಗಳನ್ನೊಳಗೊಂಡAತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ತಮ್ಮ ಹೋರಾಟವನ್ನು ಮುಂದುವರಿಸಿದೆ.

ನಾಗರಹೊಳೆ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಎದುರು ಹೋರಾಟಕ್ಕೆ ಆದಿವಾಸಿಗಳು ಮುಂದಾಗಿದ್ದಾರೆ. ಅಭಯಾರಣ್ಯದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಮೂಲನಿವಾಸಿ ಆದಿವಾಸಿ ಜನರು ತಮ್ಮ ಸಂವಿಧಾನ ಬದ್ಧ ಹಕ್ಕಾಗಿರುವ ೨೦೦೬ರ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಬರುವ ವೈಯಕ್ತಿಕ ಹಕ್ಕು ಸಮುದಾಯ ಹಕ್ಕು, ಸಮುದಾಯ ಸಂಪನ್ಮೂಲದ ಹಕ್ಕುಗಳನ್ನೊಳಗೊಂಡAತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಮಾರ್ಚ್ ೧೫ ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರವೂ ಅಹೋರಾತ್ರಿ ನಿರಂತರ ಜಮ್ಮ-ಪಾಳೆ ಹಕ್ಕೋತ್ತಾಯ ಹೋರಾಟವನ್ನು ಮಾಡುತ್ತಿದ್ದ ಆದಿವಾಸಿಗಳ ಮನವೊಲಿಸಿದ ಜಿಲ್ಲಾಡಳಿತ ಭರವಸೆಯನ್ನು ಮೇ ೧೫ರ ನಂತರ ಈಡೇರಿಸುವುದಾಗಿ ಭರವಸೆ ನೀಡಿತು.

ಆದರೆ, ಮೇ ೧೫ರ ನಂತರ ಜಿಲ್ಲಾಡಳಿತವು ಯಾವುದೇ ರೀತಿಯಲ್ಲಿ ಗಮನಹರಿಸದೆ ಇರುವುದನ್ನು ಕಂಡು ಸಮಿತಿಯು ಮತ್ತೊಮ್ಮೆ ಅಹೋರಾತ್ರಿ ಹೋರಾಟವನ್ನು ಮುಂದುವರೆಸಿದೆ.

ಹೋರಾಟದ ಸುಳಿವು ಸಿಕ್ಕುತ್ತಿದ್ದಂತೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬAಧಪಟ್ಟ ಅಧಿಕಾರಿಗಳು ಮತ್ತು ಆದಿವಾಸಿ ಮುಖಂಡರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಇನ್ನೂ ಒಂದು ತಿಂಗಳ ಒಳಗೆ ಎಲ್ಲಾ ಹಕ್ಕುಗಳನ್ನು ಬಗೆ ಹರಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಜೊತೆಯಲ್ಲಿ ಮುಷ್ಕರವನ್ನು ಹಿಂಪಡೆಯುವAತೆ ಒತ್ತಾಯಿಸಿದ್ದಾರೆ. ಆದರೆ, ಆದಿವಾಸಿ ಜನರು ಲಿಖಿತ ಆಧಾರವಿಲ್ಲದ ಭರವಸೆಯನ್ನು ನಂಬುವುದಿಲ್ಲ.

ಹಕ್ಕು ಮನ್ನಣೆ ಮಾಡಿದಾಗ ಮಾತ್ರ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಪಟ್ಟು ಹಿಡಿದಿದ್ದಾರೆ, ನಮ್ಮ ಬಗ್ಗೆ ಕಾಳಜಿ ವಹಿಸದೆ ಹೋರಾಟದ ಸಂದರ್ಭ ಯಾವುದೇ ಅನಾಹುತಗಳು ಆದಲ್ಲಿ ಅದಕ್ಕೆ ಜಿಲ್ಲಾಡಳಿತವೇ ಜವಾಬ್ದಾರಿ ಎಂದು ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಕೆ. ತಿಮ್ಮ ಎಚ್ಚರಿಸಿದ್ದಾರೆ.