ಶನಿವಾರಸಂತೆ, ಜೂ. ೧೮: ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೨ ವರ್ಷಗಳಿಂದ ನಡೆಸುತ್ತಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಪಂಚಾಯಿತಿ ಸದಸ್ಯರಾದ ಡಿ.ಪಿ. ಬೋಜಪ್ಪ, ದೇವರಾಜ್, ಎಸ್.ಪಿ. ಭಾಗ್ಯ, ಭವಾನಿ, ಜಾನಕಿ, ರಜನಿ ನಾಗರತ್ನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚಾಯಿತಿ ಯಲ್ಲಿ ನಡೆಯುವ ಸಾಮಾನ್ಯ ಸಭೆಗಳಲ್ಲಿ ಅವ್ಯವಹಾರಗಳ ಬಗ್ಗೆ ಪ್ರಶ್ನಿ ಸಿದರೂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಮೌನ ವಹಿಸಿ ಯಾವುದೇ ಉತ್ತರ ನೀಡಿರುವುದಿಲ್ಲ. ಈ ಬಗ್ಗೆ ಸದಸ್ಯರ ಮಾತಿಗೆ ಬೆಲೆ ಕೊಡದೇ ಅಧ್ಯಕ್ಷರು ಅಧಿಕಾರ ದರ್ಪದಿಂದ ಏಕ ಪಕ್ಷೀಯವಾಗಿ ದುರುಪಯೋಗ ಮಾಡಿ ರುತ್ತಾರೆ. ೨೦೨೨ರ ನವಂಬರ್ ೧೬ ರಂದು ನಡೆದ ಸಭೆಯಲ್ಲಿ ಜಮಾ ಖರ್ಚಿನ ಚರ್ಚೆ ನಡೆದ ಸಮಯದಲ್ಲಿ ಖರ್ಚಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಎಲ್ಲಾ ಖರ್ಚಿನ ಬಗ್ಗೆ ತನಿಖೆ ನಡೆಸುವಂತೆ ನಡಾವಳಿ ಪುಸ್ತಕದಲ್ಲಿ ಠರಾವು ಸಂಖ್ಯೆ ೭ರಲ್ಲಿ ದಾಖಲಿಸಿರು ತ್ತೇವೆ. ಆದರೆ, ಈ ಬಗ್ಗೆ ಯಾವುದೇ ತನಿಖೆ ನಡೆಸಿರುವುದಿಲ್ಲ. ಅಲ್ಲದೆ, ಬಹುತೇಕ ಖರ್ಚಿನ ಬಗ್ಗೆ ಕೊಟೇಷನ್ ಆಗಲಿ, ಟೆಂಡರ್ ಆಗಲಿ ಪಡೆದುಕೊಂಡಿ ರುವುದಿಲ್ಲ. ಈ ಖರ್ಚಿನ ಬಗ್ಗೆ ಸ್ಥಳೀಯ ವಾಗಿ ಬಿಲ್ಲುಗಳನ್ನು ಪಡೆದುಕೊಂಡಿ ದ್ದರೂ ದಾಸ್ತಾನು ಪುಸ್ತಕದಲ್ಲಿ ನಮೂ ದಿಸಿರುವುದಿಲ್ಲ. ೨ ವರ್ಷಗಳಿಂದಲೂ ಇದೇ ಪರಿಪಾಠ ಮಾಡಿಕೊಂಡು ಬಂದಿದ್ದು ಈ ಎಲ್ಲಾ ಖರ್ಚಿನ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪಂಚಾಯಿತಿಯ ಕೆಲವು ಕಾಮ ಗಾರಿಗಳು ಸಹ ಯಾವುದೇ ನಡಾ ವಳಿಗಳು ಇಲ್ಲದೇ ಕೆಲಸ ಮಾಡಿರು ವುದು ಕಂಡು ಬಂದಿದೆ. ಎರಡು ವರ್ಷಗಳ ಅವಧಿಯಲ್ಲಿ ೧೫ ನೇ ಹಣಕಾಸು ಮತ್ತು ಮಹಾತ್ಮ ಗಾಂಧೀಜಿ ನರೇಗ ಯೋಜನೆಯಲ್ಲಿ ಪಂಚಾಯಿತಿಗೆ ಸಂಬAಧಪಟ್ಟವರೇ ಬೇನಾಮಿಯಾಗಿ ಕೆಲಸ ಮಾಡಿರು ತ್ತಾರೆ. ವಿದ್ಯುತ್ ಬಲ್ಬ್ಗಳು ಕಡಿಮೆ ಬೆಲೆಯಲ್ಲಿ ಸಿಕ್ಕರೂ ಸಹ ಅಧಿಕ ಬೆಲೆ ನೀಡಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುತ್ತಾರೆ. ಸದಸ್ಯರ ಯಾವುದೇ ಬೇಡಿಕೆಗಳನ್ನು ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸದೆ ಉಡಾಫೆ ಉತ್ತರ ನೀಡು ತ್ತಾರೆ. ಆದ್ದರಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯವರು ಗ್ರಾಮ ಪಂಚಾ ಯಿತಿ ಹಿತದೃಷ್ಟಿಯಿಂದ ಎಲ್ಲಾ ಕಾಮ ಗಾರಿಗಳಲ್ಲಿ ಆಗುತ್ತಿರುವ ದುರುಪಯೋಗ ಗಳ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕು ಎಂದು ಸದಸ್ಯರಾದ ಡಿ.ಪಿ. ಬೋಜಪ್ಪ, ದೇವರಾಜ್, ಎಸ್.ಪಿ.ಭಾಗ್ಯ, ಭವಾನಿ, ಜಾನಕಿ, ರಜನಿ ನಾಗರತ್ನಾ ಲಿಖಿತ ಹೇಳಿಕೆ ನೀಡಿ ಆಗ್ರಹಿಸಿದ್ದಾರೆ.