ಸ್ಫೂರ್ತಿಯ ಮೂಲ ನನ್ನ ತಂದೆ
ಮೊದಲ ದಿನದಿಂದಲೂ ನನಗೆ ಸ್ಪೂರ್ತಿಯ ಮೂಲವಾಗಿರುವ ನನ್ನ ತಂದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಬೇರೆ ರೀತಿಯಲ್ಲಿ ಹೇಳುವುದಾದರೆ ನನ್ನ ತಂದೆಯೇ ನನಗೆ ಸರ್ವಸ್ವ. ನನ್ನ ತಂದೆ ನಾನು ಏನು ಕೇಳಿದರೂ ಇಲ್ಲ ಎನ್ನುವುದಿಲ್ಲ. ದಿನದ ಕೆಲಸವನ್ನು ಮುಗಿಸಿ ಮನೆಗೆ ಬಂದು ಆಯಾಸ ಗೊಂಡಿದ್ದರೂ ನನ್ನೊಂದಿಗೆ ಸಮಯವನ್ನು ಕಳೆಯುತ್ತಾರೆ. ಆಟ ವಾಡುತ್ತಾರೆ. ಆಟವಾಡಿಸುತ್ತಾರೆ. ಓದಿಸುತ್ತಾರೆ. ಆದರೆ ಅಪ್ಪಂದಿರ ದಿನದಂದು ಮಾತ್ರ ನಾವು ಅವರನ್ನು ಹಾಡಿ ಹೊಗಳುತ್ತೇವೆ. ನನ್ನ ಪ್ರಕಾರ ವರ್ಷದ ಎಲ್ಲಾ ದಿನಗಳು, ಗಂಟೆಗಳು ಹಾಗೂ ನಿಮಿಷಗಳು ಅಪ್ಪಂದಿರ ದಿನವಾಗಬೇಕು.
- ಹರ್ಷಿತ್ ಪೊನ್ನಪ್ಪ, ೮ನೇ ತರಗತಿ, ಸಂತ ಜೋಸೆಫರ ಕಾನ್ವೆಂಟ್ ಶಾಲೆ, ಮಡಿಕೇರಿ.ಅಪ್ಪಾ... ಅಂದ್ರೆ ಆಕಾಶ
ಹೆತ್ತದ್ದು ಅಮ್ಮನಾದರೂ
ಒಳಗೊಳಗೇ ಅತ್ತದ್ದು ಅಪ್ಪ...
ಹುಟ್ಟಿದಾಗ ಕೂಗಿದ್ದೂ ಅಮ್ಮನನ್ನಾದರೂ
ಬಿಗಿದಿಟ್ಟ ಉಸಿರು ಬಿಟ್ಟಿದ್ದು ಅಪ್ಪ...
ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ
ಹೊಟ್ಟೆ ಕಟ್ಟಿ ದುಡಿದು ಹಾಕಿದ್ದು ಅಪ್ಪ...
ಕೇಳಿ ಕೇಳಿದ್ದು ಕೊಟ್ಟಿದ್ದು ಅಮ್ಮನಾದರೂ
ಅದರಿಂದಿರುವ ಕಾಣದ ಕೈಗಳು ಅಪ್ಪ...
ವಿದ್ಯೆ ತಲೆಗೆ ಹತ್ತಿಸಿದ್ದು ಅಮ್ಮನಾದರೂ
ಪ್ರತಿ ದಿನವೂ ದಾರಿದೀಪವಾಗಿದ್ದುದ್ದು ಅಪ್ಪ...
ಹರಸಿ ಹಾರೈಸಿ ಮುತ್ತಿಡುತ್ತಿದ್ದ ಅಮ್ಮ
ಪ್ರೀತಿ ವ್ಯಕ್ತಪಡಿಸದೇ ಮೂಕನಾಗಿದ್ದು ಅಪ್ಪ...
ಎಲ್ಲಕ್ಕಿಂತ ಮಿಗಿಲು ಅಮ್ಮನಾದರೂ
ಮಿಗಿಲೆನ್ನುವ ಪದವೇ ಸಾಲುತ್ತಿಲ್ಲ ನಿನಗೆ ಅಪ್ಪ...
ನಾ ಕಂಡ ದೇವರು ಅಮ್ಮನಾದರೂ
ಆ ದೇವರಿಗೆ ದೇವರಾಗಿದ್ದವನು ನೀನಪ್ಪ...
- ಅಮೃತ ಬಿ.ಹೆಚ್., ೫ನೇ ತರಗತಿ, ಹೊಸ್ಕೇರಿ ಗ್ರಾಮ, ಮರಗೋಡು.ಅಪ್ಪಾ ನೀನೇ ನನ್ನ ಜಗತ್ತು
ಸೋಲಲ್ಲಿ ಬಲವಾಗಿ, ಗೆಲುವಲ್ಲಿ ಜೊತೆಯಾಗಿ ನಿಲ್ಲುವ ಜೀವ ಅಪ್ಪ. ಮನೆಯ ಭಾರ ಎಷ್ಟಿದ್ದರೂ ತಾನೇ ಹೊರುತ್ತಿದ್ದು, ನಮಗೆ ಕಷ್ಟಗಳು ಬರಬಾರದೆಂದು ತಾನೇ ಶ್ರಮಿಸುತ್ತಿದ್ದ. ನಮ್ಮ ಖುಷಿಯನ್ನು ನೋಡುತ್ತಾ ತನ್ನ ಖುಷಿಯನ್ನು ಮರೆತ್ತಿದ್ದ ಅಪ್ಪ. ಅರಮನೆಯಲ್ಲಿ ಸೈನ್ಯ, ಸಿಪಾಯಿಗಳು, ಮಂತ್ರಿಗಳಿದ್ದರು ಅರಮನೆಯ ರಾಜ ಇಲ್ಲದಿದ್ದರು ಆ ಇಡೀ ಸೈನ್ಯವೇ ದುರ್ಬಲ. ಹೌದು ಅಪ್ಪ ನೀನೇ ನಮ್ಮ ರಾಜ. ನಮ್ಮ ಶಕ್ತಿ. ನಮ್ಮ ಧೈರ್ಯ. ನೀ ಇಲ್ಲದೆ ದುರ್ಬಲ ಅಪ್ಪ. ನೀ ಅದ್ಭುತ. ನೀ ನನ್ನ ಆನಂದ. ನೀನು ನನ್ನ ಜಗತ್ತು. ನನ್ನ ಮೊದಲ ಸ್ನೇಹಿತ ನೀನು. ನನ್ನ ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ನೀನು. ಬಾಲ್ಯದಲ್ಲಿ ಹೆಗಲ ಮೇಲೆ ಕೂರಿಸಿ ಪ್ರಪಂಚವನ್ನು ತೋರಿಸಿದ ಹೃದಯವಂತ ನೀನು. ನಿನ್ನ ಕಷ್ಟಗಳನ್ನು ಬಚ್ಚಿಟ್ಟು ಹಗಲು - ರಾತ್ರಿ ದುಡಿದು ನನ್ನ ಅಗತ್ಯಗಳನ್ನು, ನನ್ನ ಎಲ್ಲಾ ಆಸೆಗಳÀನ್ನು ಪೂರೈಸಿ ನನಗೆ ಕಷ್ಟಗಳನ್ನು ತೋರಿಸದೆ ಸುಖ ನೀಡಿದ ಮಹಾನುಭಾವ ನೀನು ಅಪ್ಪ. ನೀ ನನ್ನ ಸುಖ, ನೀ ನನ್ನ ಪ್ರಾಣ. ತಾನು ಪಟ್ಟ ಕಷ್ಟಗÀಳನ್ನು ತನ್ನ ಮಕ್ಕಳು ಪಡಬಾರದೆಂದು ಹಗಲು-ರಾತ್ರಿ ನೋಡದೆ, ದುಡಿದು ನಮ್ಮ ಭವಿಷ್ಯವನ್ನು ಉಜ್ವಲ ಮಾಡಲು ತನ್ನ ನಿದ್ದೆಯನ್ನು ತ್ಯಾಗ ಮಾಡಿದವನು ಅಪ್ಪ. ತಪ್ಪು ಹೆಜ್ಜೆಯಿಟ್ಟಾಗ ತಿದ್ದಿ ಸರಿದಾರಿ ತೋರಿಸಿದೆ. ಅಪ್ಪಾ ನೀನೇ ನನ್ನ ಹೆಮ್ಮೆ... ನೀನೇ ನನ್ನ ಜಗತ್ತು...
- ಟಿ.ಆರ್. ರಶ್ಮಿ, ಮದಲಾಪುರ, ಸೋಮವಾರಪೇಟೆ.
ನನ್ನ ಮೊದಲ ಶಿಕ್ಷಕ ತಂದೆ
ನನ್ನ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ನನಗೆ ಕಲಿಸಿದ ಮೊದಲ ಶಿಕ್ಷಕನೇ ನನ್ನ ತಂದೆ. ನನ್ನ ಪ್ರತಿಯೊಂದು ರೀತಿಯ ಸಮಸ್ಯೆಗೆ ಪರಿಹಾರದೊಂದಿಗೆ ಸಿದ್ಧನಾಗಿ ನಿಂತಿರುತ್ತಾರೆ. ನನ್ನ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ನನ್ನ ತಂದೆ ನನ್ನ ಕುಟುಂಬದ ಶಕ್ತಿಯ ಸ್ತಂಭವಾಗಿದ್ದು, ಪ್ರೀತಿ ಪರ್ವತದಂತಹ ತಂದೆಗೆ ಧನ್ಯವಾದ ಹೇಳಲು, ನಮ್ಮ ಬದುಕನ್ನು ರೂಪಿಸಲು ಅವರು ಪಟ್ಟ ಕಷ್ಟವನ್ನು ಗೌರವಿಸಲು ಇದೊಂದು ಒಳ್ಳೆಯ ಅವಕಾಶ ದಿನ ನನಗೆ. ನನ್ನ ಒಳಿತಿಗಾಗಿ ನೀವು ಸದಾ ಶ್ರಮಿಸಿದ್ದೀರಿ, ನನ್ನ ಖುಷಿಗೆ ನಿಮ್ಮ ಸಮಯವನ್ನು ನೀಡಿದ್ದೀರಿ. ನಿಮ್ಮ ಪ್ರೀತಿಯೇ ನನಗೆ ಸುಂದರ. ಅಪ್ಪ ನಿಮ್ಮ ಬಗ್ಗೆ ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ನೀವೇ ನನ್ನ ನಿಧಿ, ಮಮತೆಯ ಗಣಿ, ನೀವೇ ನನ್ನ ಬದುಕಿನ ಹೀರೋ... ಐ ಲವ್ ಯೂ ಅಪ್ಪ... ಅಪ್ಪ ನಿಮಗೆ ನಿಮ್ಮ ದಿನದ ಶುಭಾಶಯಗಳು.
- ಬಿ.ಎಸ್. ಸುವೀಕ್ಷ ರೈ, ೮ನೇ ತರಗತಿ, ಲಯನ್ಸ್ ಶಾಲೆ, ಗೋಣಿಕೊಪ್ಪಲು.ಮೊದಲ ಸೂಪರ್ ಹೀರೋ
ಎಲ್ಲರಿಗೂ ಜೀವನದ ಮೊದಲ ಸೂಪರ್ ಹೀರೋ ತನ್ನ ಅಪ್ಪ. ಹಾಗೆಯೇ ನನಗೂ ನನ್ನ ಸೂಪರ್ ಹೀರೋ ನನ್ನ ಅಪ್ಪ. ನಾನು ಅವರನ್ನು ಪ್ರೀತಿಯಿಂದ ಪಪ್ಪಾ ಎಂದು ಕರೆಯುತ್ತೇನೆ. ನನ್ನ ಅಪ್ಪ ನೆರೆಹೊರೆಯವರ ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ನನ್ನ ಅಪ್ಪನಿಗೆ ಯಾರೊಂದಿಗೂ ಜಗಳವಾಡುವುದು, ಇನ್ನೊಬ್ಬರ ಮನಸ್ಸನ್ನು ನೋಯಿಸುವುದು ಇಷ್ಟವಾಗುವುದಿಲ್ಲ. ನನ್ನ ಅಪ್ಪ ಅವರ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡಿರುತ್ತಾರೆ ಮತ್ತು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿ ಬೆಳೆದಿರುತ್ತಾರೆ. ಆ ಕಷ್ಟಗಳು ನನ್ನ ಜೀವನದಲ್ಲಿ ಬರಬಾರದೆಂದು ನನ್ನನ್ನು ತಂದೆ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನ್ನ ಅಪ್ಪ ನನಗೆ ಇವತ್ತಿನವರೆಗೂ ಒಂದು ಏಟು ಕೂಡ ಹೊಡೆದಿರುವುದಿಲ್ಲ. ನಾನು ಏನು ತಪ್ಪು ಮಾಡಿದರೂ ನನಗೆ ಪ್ರೀತಿಯಿಂದ ತಿಳಿಹೇಳುತ್ತಾರೆ. ಅಪ್ಪ ಮನೆಯಲ್ಲಿ ನಾನು ಚಿಕ್ಕವಳೆಂದು ಎಲ್ಲರಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಾರೆ. ನಾನು ಏನು ಕೇಳಿದರೂ ತಂದುಕೊಡುತ್ತಾರೆ. ನನ್ನ ಎಲ್ಲಾ ಆಟಗಳಲ್ಲಿಯೂ ನನ್ನೊಂದಿಗೆ ಭಾಗಿಯಾಗುತ್ತಾರೆ. ನನ್ನ ಮನೆಯನ್ನು ಕಾಯುವವರೇ ನನ್ನ ಅಪ್ಪ. ನನಗೋಸ್ಕರ ಹಗಲು-ರಾತ್ರಿ ದುಡಿದು ಕಷ್ಟಪಡುತ್ತಿರುವ ನನ್ನ ಮುದ್ದಿನ ಅಪ್ಪನಿಗೋಸ್ಕರ ನಾನು ನನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ನನ್ನ ಅತ್ಯಂತ ದೊಡ್ಡ ಕನಸು.
- ಎಂ.ಬಿ. ತೀರ್ಥಪ್ರಿಯ, ೭ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು.ಭರವಸೆಯ ಬೆಳಕು... ಅಪ್ಪ
ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿರಲ್ಲ. ಅಪ್ಪನ ಬಗ್ಗೆ ಏನು ಹೇಳಿದರೂ ಕಮ್ಮಿನೇ. ಅಪ್ಪನನ್ನು ವರ್ಣಿಸಲು ಪದಗಳು ಸಾಲದು. ನಮ್ಮ ಬೆನ್ನ ಹಿಂದೆ ನಿಂತು ಭರವಸೆ ತುಂಬುವ ಏಕೈಕ ವ್ಯಕ್ತಿ ಅಪ್ಪ. ನನ್ನ ಅಪ್ಪ ನನಗೆ ಕೇಳಿದ ಎಲ್ಲವನ್ನು ತಂದು ಕೊಡುತ್ತಾರೆ. ಪ್ರೀತಿನ ಎದೆಯೊಳಗೆ ಬಚ್ಚಿಟ್ಟು ಕಾಪಾಡುತ್ತಾರೆ. ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ಎಲ್ಲವನ್ನು ಕೊಡಿಸುತ್ತಾರೆ. ನನಗೆ ಹುಷಾರಿಲ್ಲ ಅಂದರೆ ತನಗೆ ಏನೋ ಆಗಿದೆ ಎನ್ನುವ ಹಾಗೇ ನೋವು ಪಡುವರು. ನನ್ನ ಜೊತೆ ಮಾತು ಕಡಿಮೆ ಆಡಿದರು ಮೌನವಾಗಿದ್ದುಕೊಂಡೆ ನನ್ನ ಅರ್ಥ ಮಾಡಿಕೊಳ್ಳುವರು. ನನ್ನ ಅಪ್ಪ ನನ್ನ ಮೊದಲ ಹೀರೋ. ಅವರು ಮನೆಯಲ್ಲಿರುವ ಪ್ರತಿಯೊಬ್ಬರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ. ಅಮ್ಮ ಕನಸು ಹುಟ್ಟಿಸುತ್ತಾರೆ. ಆದರೆ ಅಪ್ಪ... ಕಂಡ ಕನಸನ್ನು ನನಸು ಮಾಡುವ ಭರವಸೆ ಹುಟ್ಟಿಸುತ್ತಾರೆ. ನಾನು ಕಂಡ ಕನಸನ್ನು ನನಸು ಮಾಡಲು ನನ್ನ ಜೊತೆನಿಂತ ಮೊದಲ ವ್ಯಕ್ತಿ ಅಪ್ಪಾ... ನಾನು ಅಪ್ಪನನ್ನು ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇನೆ.
- ದೀಕ್ಷ ಸಿ.ವೈ., ೫ನೇ ತರಗತಿ, ಕಾಪ್ಸ್ ಶಾಲೆ, ಗೋಣಿಕೊಪ್ಪಲು.ಅಪ್ಪ ಎಂದರೆ ಆಕಾಶ
ಹರಕು ಬಟ್ಟೆಯ ತೊಟ್ಟು
ಕನಸಿಗೆ ಕಣ್ಣನು ಕೊಟ್ಟು
ದಾರಿಯಲಿ ದೀಪವ ನಿಟ್ಟವರಲ್ಲವೇ||
ನನ್ನ ಪ್ರೀತಿಯ ಅಪ್ಪ ತುಂಬಾ ಜೋರು ಹಾಗೂ ನನ್ನ ತಂಗಿ ಮತ್ತು ನನಗೆ ನನ್ನ ಅಪ್ಪನೇ ಮುದ್ದು. ನಮಗೆ ಏನೇ ಕಷ್ಟ ಆದರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಶಾಲೆಗೆ ಚಕ್ಕರ್ ಹಾಕಿದರೆ ಪೆಟ್ಟು ಗ್ಯಾರಂಟಿ. ನನಗೆ ಪುಸ್ತಕ, ಪೆನ್ನು ಎಲ್ಲವನ್ನು ಇವರೇ ತೆಗೆದು ಕೊಡುವುದು. ಬಟ್ಟೆ ತೆಗೆದು ಕೊಡುವುದರಲ್ಲಿ ನಮ್ಮ ಅಪ್ಪ ತುಂಬಾ ಸೂಪರು ಎಂದರೆ ನಮಗೆ ಯಾವ ಕಲರ್ ತುಂಬಾ ಇಷ್ಟ ಎಂದು ನಮ್ಮ ಅಪ್ಪನಿಗೆ ಗೊತ್ತು.
ಓದುವುದರಲ್ಲಿ ನಮ್ಮ ಅಪ್ಪ ತುಂಬಾ ಜೋರು. ಚೆನ್ನಾಗಿ ಓದಬೇಕು ಉತ್ತಮ ಅಂಕ ಪಡೆಯಬೇಕು ಎಂದು ತುಂಬಾ ಹೇಳುತ್ತಾರೆ. ನಮ್ಮ ಹಾಗೆ ತೋಟ ಕೆಲಸಕ್ಕೆ ಹೋಗ ಬಾರದು. ಉತ್ತಮ ಕೆಲಸಕ್ಕೆ ಹೋಗಬೇಕು. ನಿಮ್ಮ ಭವಿಷ್ಯವನ್ನು ನೀವು ನೋಡಿಕೊಳ್ಳುವ ಹಾಗೆ ಆಗಬೇಕು ಎಂದು ಮನವರಿಕೆ ಮಾತುಗಳನ್ನಾಡುವರು.
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
- ಎಂ.ಕೆ. ಕೃತಿಕ, ೬ನೇ ತರಗತಿ, ಸಾ.ಹಿ.ಪ್ರಾ. ಶಾಲೆ, ಚೇರಂಬಾಣೆ.ನನ್ನ ಮುದ್ದು ಅಪ್ಪ
ಅಮ್ಮ ಹೇಳಿದ್ದನ್ನು ನಾ ಹುಟ್ಟಿದ ದಿನ
ನೀವೆಷ್ಟು ಖುಷಿಯಾಗಿದ್ದರೆಂದು ಮತ್ತೆ ಮತ್ತೆ ಅಮ್ಮನಲ್ಲಿ
ಕೇಳುವಾಸೆ ನನಗೆ ಅಪ್ಪ ನನ್ನ ಅಪ್ಪ ನನ್ನ ಎಷ್ಟು
ಪ್ರೀತಿಸುವರೆಂದು...!
ಅಮ್ಮ ವರ್ಣಿಸಿದಳಿಂದು ನಿಮ್ಮ ಅಪ್ಪ
ರಾಜ ಮಹಾರಾಜರು ಹೇಗೆ ರಾಜಕುಮಾರ
ಜನಿಸಿದಾಗ ಸಂಭ್ರಮ ಪಡುವನೋ ಅದಕ್ಕಿಂತ
ಹೆಚ್ಚು ಸಂಭ್ರಮದಿAದ ಇಡೀ ಊರಿಗೆ ಸಿಹಿ ಹಂಚಿದ್ದರೆAದು
ನಾನೆAದರೆ ನಿಮಗಷ್ಟು ಪ್ರೀತಿ. ನಾನೇ ನಿಮ್ಮ ಮಗನಾಗಿ ಪ್ರತಿ
ಜನ್ಮವೂ ಹುಟ್ಟುವ ಭಾಗ್ಯ
ಆ ದೇವರು ನನಗೆ ಕೊಡಲಿ
ನೀವೇ ನನ್ನ ಅಪ್ಪ ನನ್ನ ಮುದ್ದು ಅಪ್ಪ...
- ಕುಶಾಲ್, ೫ನೇ ತರಗತಿ, ಪೂರ್ಣಪ್ರಜ್ಞ ಶಾಲೆ, ಆಲ್ದೂರು, ಚಿಕ್ಕಮಗಳೂರು.ಅಪ್ಪ ಮರೆಯದ ಮಾಣಿಕ್ಯ
ಅಕ್ಕರೆಯ ಪ್ರೀತಿಯ ಕೊಟ್ಟು
ಸಕ್ಕರೆಯಂತಹ ಮುತ್ತನ್ನು ಇಟ್ಟು
ಜಗತ್ತನ್ನೇ ತನ್ನ ಹೆಗಲಲ್ಲಿ ಪರಿಚಯಿಸಿದ ಅಪ್ಪ
ನೀ ಪರಮಾತ್ಮನ ಪ್ರತಿರೂಪ.
ಮುಖದಲ್ಲಿ ಕೋಪದ ಭಾವವಿದ್ದರೂ
ಮನದಲ್ಲಿ ಪ್ರೀತಿ ತುಂಬಿರುವ ಸೊಗಸುಗಾರ
ನೋವನ್ನು ಮರೆಸುವ ಜಾದೂಗಾರ
ಕೇಳಿದ್ದನ್ನೆಲ್ಲಾ ಕೊಡಿಸುವ ಸಾಹುಕಾರ.
ಸೋಲಿನಲ್ಲಿ ಬಲವಾಗಿ
ಗೆಲುವಿನಲ್ಲಿ ಭಾಗಿಯಾಗಿ
ಎಂದಿಗೂ ಆಸರೆ ಕೊಡುವ ಆಪ್ತ
ಜಗತ್ತಿನಲ್ಲಿ ನಿನ್ನಂಥಹವರು ಅಪರೂಪ
ಅಪ್ಪ ನೀ ಮರೆಯದ ಮಾಣಿಕ್ಯ.
ನೀ ನನ್ನ ತಂದೆಯಾದರೆ
ನಾ ಬೇಡುವೆ ಇನ್ನೊಂದು ಜನ್ಮ
ನಿನ್ನ ಆದರ್ಶ ಸಂಗದಲಿ
ನಾ ಸಮಯ ಕಳೆಯುವೆ ಹಾಯಾಗಿ
ಎಂದಿಗೂ ಜೊತೆಯಾಗಿ ನಿನಗೆ ಚಿರಋಣಿಯಾಗಿ
- ಕೊಂಬAಡ ತನ್ಮಯ ಚಂದ್ರಕಾAತ್, ೧೦ನೇ ತರಗತಿ, ಫಾತಿಮಾ ಕಾನ್ವೆಂಟ್ ಶಾಲೆ, ಕುಶಾಲನಗರ.ಅಪ್ಪ ಮರೆಯದ ಮಾಣಿಕ್ಯ
ಅಕ್ಕರೆಯ ಪ್ರೀತಿಯ ಕೊಟ್ಟು
ಸಕ್ಕರೆಯಂತಹ ಮುತ್ತನ್ನು ಇಟ್ಟು
ಜಗತ್ತನ್ನೇ ತನ್ನ ಹೆಗಲಲ್ಲಿ ಪರಿಚಯಿಸಿದ ಅಪ್ಪ
ನೀ ಪರಮಾತ್ಮನ ಪ್ರತಿರೂಪ.
ಮುಖದಲ್ಲಿ ಕೋಪದ ಭಾವವಿದ್ದರೂ
ಮನದಲ್ಲಿ ಪ್ರೀತಿ ತುಂಬಿರುವ ಸೊಗಸುಗಾರ
ನೋವನ್ನು ಮರೆಸುವ ಜಾದೂಗಾರ
ಕೇಳಿದ್ದನ್ನೆಲ್ಲಾ ಕೊಡಿಸುವ ಸಾಹುಕಾರ.
ಸೋಲಿನಲ್ಲಿ ಬಲವಾಗಿ
ಗೆಲುವಿನಲ್ಲಿ ಭಾಗಿಯಾಗಿ
ಎಂದಿಗೂ ಆಸರೆ ಕೊಡುವ ಆಪ್ತ
ಜಗತ್ತಿನಲ್ಲಿ ನಿನ್ನಂಥಹವರು ಅಪರೂಪ
ಅಪ್ಪ ನೀ ಮರೆಯದ ಮಾಣಿಕ್ಯ.
ನೀ ನನ್ನ ತಂದೆಯಾದರೆ
ನಾ ಬೇಡುವೆ ಇನ್ನೊಂದು ಜನ್ಮ
ನಿನ್ನ ಆದರ್ಶ ಸಂಗದಲಿ
ನಾ ಸಮಯ ಕಳೆಯುವೆ ಹಾಯಾಗಿ
ಎಂದಿಗೂ ಜೊತೆಯಾಗಿ ನಿನಗೆ ಚಿರಋಣಿಯಾಗಿ
- ಕೊಂಬAಡ ತನ್ಮಯ ಚಂದ್ರಕಾAತ್, ೧೦ನೇ ತರಗತಿ, ಫಾತಿಮಾ ಕಾನ್ವೆಂಟ್ ಶಾಲೆ, ಕುಶಾಲನಗರ.ನನ್ನ ಪ್ರೀತಿಯ ತಂದೆ
ಇAದಿಗೂ ಎಂದೆAದಿಗೂ ನನ್ನ ಅತ್ಯಾಪ್ತ ಸ್ನೇಹಿತನಾಗಿರುವಿರಿ ಅಪ್ಪಾ. ನನ್ನ ಬದುಕಿನಲ್ಲಿ ನೀವೇ ನನ್ನ ನಿಜವಾದ ‘ಹೀರೋ’. ಎಷ್ಟೇ ಕಷ್ಟವಿದ್ದರೂ ನನ್ನ ಜೊತೆ ಚಿಕ್ಕಂದಿನಿದAಲೂ ಮತ್ತು ಇಂದಿನವರೆಗೂ ನಗುನಗುತ್ತಾ ಪ್ರೀತಿಯನ್ನು ತುಂಬಿದ್ದೀರಿ. ಏನೇ ಕೇಳಿದರೂ ಇಲ್ಲವೆನ್ನದೆ ಎಲ್ಲವನ್ನು ಕೊಡಿಸುವ ವಿಶಾಲವಾದ ಹೃದಯ ನಿಮ್ಮದು. ನಾನು ಆಟವಾಡುತ್ತ ಬಿದ್ದರೆ ತಟ್ಟನೆ ಬಂದು ಮೇಲೆಬ್ಬಿಸಿ, ನಗು ನಗುತ್ತಾ ಧೈರ್ಯವನ್ನು ತುಂಬಿದ್ದೀರಾ. ನಾನು ಸಂಕಷ್ಟಕ್ಕೆ ಸಿಲುಕಿದಾಗ ನೆನಪಾಗುವುದೇ ನೀವೇ. ಸರಿಯಾದ ಉಪಾಯವನ್ನು ಭೋದಿಸಿ ಎಲ್ಲವೂ ಸರಿ ಮಾಡುತ್ತೀರ. ಆದರಿಂದ ನೀವೇ ನನ್ನ ರಕ್ಷಾಕವಚವಿದ್ದಂತೆ. ನೀವು ನನಗೆ ಆಟ, ಪಾಠ, ಪ್ರೀತಿ, ಸಂಸ್ಕಾರ ಎಲ್ಲವನ್ನು ಕಲಿಸಿದ್ದೀರ. ನಿಮ್ಮ ಹೆಸರೇ ಜಿತೇಂದ್ರ ಎಂಬAತೆ ನನಗೂ ಜಯಶಾಲಿಯಾಗಲು ಸ್ಫೂರ್ತಿಯನ್ನು ನೀಡಿದ್ದೀರ. ಅಪ್ಪ ನಿಮಗೆ ನಾನು ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು. ದೇವರು ನಿಮಗೆ ಆರೋಗ್ಯ ಮತ್ತು ಸಂತೋಷವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಎಂದೆAದಿಗೂ ನಗುನಗುತ್ತಾ ಖುÄಶಿಯಾಗಿರಿ.
- ತನ್ವಿ ಜಿತೇಂದ್ರ, ೧೦ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.ಅಪ್ಪ ಎಂಬ ಭರವಸೆ
ನನ್ನ ತಂದೆಯ ಹೆಸರು ಸುಬ್ರಮಣಿ. ಅಪ್ಪ ಎಂದರೆ ನನಗೆ ತುಂಬಾ ಇಷ್ಟ. ತಂದೆ ಆಕಾಶದ ಎತ್ತರ. ಭೂಮಿಗಿಂತ ವಿಶಾಲ ಮನಸ್ಸು. ಅಪ್ಪ ಇದ್ದರೆ ಎಲ್ಲವನ್ನು ಜಯಿಸುತ್ತೇವೆ ಎಂಬ ಧೈರ್ಯ. ಅಪ್ಪನನ್ನು ಪಡೆಯಲು ನಾನು ಸಾವಿರ ಸಾವಿರ ಪುಣ್ಯ ಮಾಡಿದ್ದೇವೆ. ಯಾಕೆಂದರೆ ಎಲ್ಲಾ ಕಷ್ಟವನ್ನು ತಾನು ಹೊತ್ತು ಇಡೀ ಜೀವನವನ್ನು ತನ್ನ ಮಕ್ಕಳಿಗೆ ಮೀಸಲಾಗಿ ಇಡುತ್ತಾರೆ. ತಂದೆ-ತಾಯಿ ಎರಡು ಕಣ್ಣುಗಳು ಇದ್ದಂಗೆ. ಅಪ್ಪನಿಗೆ ಎಷ್ಟು ಕಷ್ಟ ಇದ್ದರೂ ಅಪ್ಪ ಮಕ್ಕಳಿಗೋಸ್ಕರ ಕಷ್ಟಪಡುತ್ತಾರೆ.
ತಾಯಿ ಜನ್ಮ ನೀಡಿದರೆ, ಅಪ್ಪ ತುಂಬಾ ಕಷ್ಟಪಟ್ಟು ಬೆಳೆಸುತ್ತಾರೆ. ನಾನು ಕೇಳಿದನ್ನು ಕೊಡಿಸುತ್ತಾರೆ. ನನ್ನ ಅಪ್ಪ ರೈತ ಕೆಲಸ ಮಾಡುತ್ತಾರೆ. ಅದಕ್ಕೆ ನನಗೆ ತುಂಬಾ ಇಷ್ಟ. ನಾನು ಅವರ ಜೊತೆ ಗದ್ದೆಗೆ ಹೋಗುತ್ತೇನೆ. ನನ್ನ ಉಸಿರು ಇರುವವರೆಗೂ ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ಈ ದಿನ ಅಪ್ಪನಿಗೋಸ್ಕರ ಮೀಸಲಾಗಿ ಇಡುತ್ತೇನೆ. ನಾನು ನನ್ನ ತಂದೆಯನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ತಂದೆಯಿAದ ತುಂಬಾ ಕಲಿತಿದ್ದೇನೆ. ಅವರು ನನಗೆ ವಿನಯ, ಭಕ್ತಿ, ಮೌಲ್ಯಗಳು, ಅತ್ಯುತ್ತಮ ವ್ಯಕ್ತಿ ಆಗುವ ಭರವಸೆ ನನಗೆ ನೀಡಿದ್ದಾರೆ. ನಾನು ದೊಡ್ಡವಳಾದ ಮೇಲೆ ನನ್ನ ಅಪ್ಪನ ಹಾಗೆ ಆಗುತ್ತೇನೆ.
- ಮಾನ್ಯ ಮಾಚಮ್ಮ, ೭ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಅಪ್ಪ ಎಂದರೆ ವಿಶೇಷ
ಜನುಮದಾತರು ಎಂದರೆ ಅಪ್ಪ ಅಮ್ಮ. ಅದರಲ್ಲೂ ಅಪ್ಪ ಎಂದರೆ ವಿಶೇಷ, ನನ್ನ ಅಪ್ಪ ನೇಗಿಲ ಯೋಗಿ, ಮರಗಳೊಡನೆ ಗಿಡಗಳೊಡನೆ, ಹಸು ಕರುಗಳೊಡನೆ ಆತ್ಮೀಯವಾಗಿ ಮಾತನಾಡಬಲ್ಲ ಶಕ್ತಿಯುಳ್ಳವರು. ಹೊರಗಿನ ವಾತಾವರಣವನ್ನು ನೋಡಿ ಮಳೆಯ, ಚಳಿಯ, ಬಿಸಿಲಿನ, ನಾಡಿ ಮಿಡಿತವನ್ನು ಹೇಳಬಲ್ಲ ಹವಾಮಾನ ತಜ್ಞ ನನ್ನಪ್ಪ.
ಎತ್ತುಗಳು ನೊಗದ ಭಾರವನ್ನು ಹೊತ್ತು ಉಳುಮೆ ಮಾಡಿದರೆ, ನನ್ನಪ್ಪ ಕುಟುಂಬದ ಜವಾಬ್ದಾರಿಯ ನೊಗವನ್ನು ಹೊತ್ತು ನಮ್ಮೆಲ್ಲರ ಜೀವನ ರೂಪಿಸುತ್ತಾರೆ. ನನ್ನಪ್ಪ ಇದ್ದ ಜಾಗದಲ್ಲಿ ನಗುವಿಗೆ ಬರವಿಲ್ಲ, ಎಂತಹ ಗಂಭೀರ ವಾತಾವರಣದಲ್ಲೂ ಸಹ ನಗುವನ್ನು ಉಕ್ಕಿಸಬಲ್ಲ ರೀತಿಯಲ್ಲಿ ಮಾತನಾಡುವವರು ನನ್ನಪ್ಪ. ನನ್ನಪ್ಪನ ತೋಳಿನ ಮೇಲೆ ಕೈ ಹಾಕಿ ಇರುವಾಗ ನನಗೆ ಭದ್ರತೆ ಮತ್ತು ರಕ್ಷಣೆಯ ಭಾವ. ನೋವನ್ನು ಉಂಡು ನಲಿವನ್ನು ಎಲ್ಲರೊಡನೆ ಹಂಚಿಕೊಳ್ಳುವ ಸ್ವಭಾವ ನನ್ನಪ್ಪನದು. ದುಡಿಮೆಯಿಂದ ಸಂತೋಷ ಸಂತೋಷದಿAದ ನಗುವನ್ನು ಪಡೆಯುವ ನನ್ನಪ್ಪನ ಹೆಸರು ಸಹ ಸಂತೋಷ. ನನ್ನಪ್ಪನ ಜೀವನ ಹೆಸರಿಗೆ ತಕ್ಕಂತೆ ಸಂತೋಷವಾಗಿ ಇರಬೇಕೆಂದು ಬಯಸುವವನು ನಾನು, ಆ ಸಂತೋಷಕ್ಕೆ ನಾನು ಕಾರಣವಾದರೆ, ಅದಕ್ಕಿಂತ ದೊಡ್ಡ ಸಾಧನೆ ಯಾವುದು ಇಲ್ಲ.
- ಕಿಶನ್ ಗೌಡ, ೬ನೇ ತರಗತಿ, ಅಂಜಲ ವಿದ್ಯಾನಿಕೇತನ ಶಾಲೆ, ಕೂಡಿಗೆ.ನನ್ನ ತಂದೆಯೇ ನನಗೆ ನಾಯಕ
ಮಕ್ಕಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಶಕ್ತಿಮೀರಿ ಕೆಲಸ ಮಾಡುತ್ತಾ ಕೈಮೀರಿ ಸಾಲ ಮಾಡುತ್ತಾ ಮಕ್ಕಳ ಸುಖ ನಿದ್ರೆಗಾಗಿ ನಿದ್ದೆಗೆಡುವ ಶ್ರಮಜೀವಿ ಅಪ್ಪ. ಮಕ್ಕಳ ಅಗತ್ಯವನ್ನು ಅರಿಯುವ ಅಪ್ಪ ಅವಧಿಗೂ ಮೀರಿ ಮೊದಲೇ ಒದಗಿಸುವ ಪ್ರಯತ್ನ ಮಾಡುತ್ತಾನೆ. ತಾನು ಸಾಧಾರಣ ಬಟ್ಟೆ ಧರಿಸಿದರೂ ಮಕ್ಕಳು ಒಳ್ಳೆಯ ಬಟ್ಟೆ ಧರಿಸಲಿ ಎಂದು ಬಯಸುತ್ತಾನೆ. ಮಕ್ಕಳು ಸಾಮಾಜಿಕವಾಗಿ ತನ್ನ ಕುಟುಂಬಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡರೂ ತನ್ನ ಮನದಲ್ಲಿ ಹಾಗೂ ಮನೆಯಲ್ಲಿ ಆಶ್ರಯ ಕೊಡಲು ಸಾಧ್ಯವಾಗುವುದು ಅಪ್ಪನಿಗೆ ಮಾತ್ರ. ತಾನು ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಏನನ್ನು ಬಯಸದೇ ಕೇವಲ ಮಕ್ಕಳಿಂದ ಪ್ರೀತಿಯನ್ನು ಬಯಸುವ ಹೃದಯವಂತ ಅಪ್ಪ. ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ತಂದೆ. ಅಮ್ಮನನ್ನು ಹೊಗಳುವ ಭರದಲ್ಲಿ ಅಪ್ಪ ಮರೆಯಾಗದಿರಲಿ. ಹಿಂದೆ ಉಳಿಯದಿರಲಿ ಎಂದು ಆಶಿಸುತ್ತೇನೆ. ತನಗಿಂತ ತನ್ನ ಮಕ್ಕಳು ಮೇಲಿನ ಸ್ಥಾನಕ್ಕೆ ಏರಬೇಕು ಎಂದು ಬಯಸಲು ಸಾಧ್ಯವಾಗುವುದು ಅಪ್ಪನಿಗೆ ಮಾತ್ರ. ‘ನನ್ನ ತಂದೆಯೇ ನನಗೆ ನಾಯಕ’. ನಾನು ನನ್ನ ತಂದೆಯನ್ನು ತುಂಬಾ ಪ್ರೀತಿಸುತ್ತೇನೆ.
- ಐಚೆಟ್ಟಿರ ಕವನ್ ಕುಶಾಲಪ್ಪ, ೮ನೇ ತರಗತಿ, ಲಯನ್ಸ್ ಶಾಲೆ, ಗೋಣಿಕೊಪ್ಪ.ತಪ್ಪು ತಿದ್ದುವ ಗುರಿಕಾರ
ನಲುಮೆಯಲಿ ನಲಿವಾಗಿ
ಒಲವಿನಲಿ ಬಲವಾಗಿ
ಸಿರಿತನದ ಹಂಗಿರದೆ ರಂಗಾಗಿ
ಬಡತನವ ಮರೆಸುವ ಬೆವರಾಗಿ
ಬಂಧು ಮಿತ್ರನಾಗಿ ಪ್ರೀತಿಯಾಗಿ
ತವರಾಗಿ ನಮಗಾಗಿ ಎಲ್ಲರಿಗಾಗಿ
ಇರು ಎಂದೆAದಿಗೂ ಜೊತೆಯಾಗಿ...
ಅಪ್ಪ... ಅಪ್ಪ ಎಂದರೆ ಗಾಂಭಿರ್ಯತೆ, ಗತ್ತು, ಗಮ್ಮತ್ತು ಮತ್ತು ಸ್ನೇಹ. ತಾಯಿ ವಾತ್ಸಲ್ಯದ ಸಂಕೇತವಾದರೆ, ತಂದೆ ತ್ಯಾಗದ ಸಂಕೇತ. ಅಪ್ಪ ಕೇವಲ ಎರಡಕ್ಷರದ ಪದವಲ್ಲ, ಅವರು ಪ್ರೀತಿ, ಮಮತೆ, ಕರುಣೆ ಮತ್ತು ಔದಾರ್ಯದ ಸಂಕೇತ. ತನಗಾಗಿ ತಾನು. ಏನು ಬಯಸದೆ ತನ್ನ ಪ್ರೀತಿ ಪಾತ್ರರಿಗಾಗಿ ಬದುಕಿ ಬಾಳುವ ಜೀವ. ತನ್ನ ಕೈಯಲ್ಲಿ ಒಂದು ಕಾಸು ಇಲ್ಲದಿದ್ದರೂ ತನ್ನ ಮಕ್ಕಳಿಗಾಗಿ ತನ್ನೆಲ್ಲ ಬಯಕೆಗಳನ್ನು ಬದಿಗೊತ್ತಿ ನಮಗಾಗಿ ದುಡಿದು-ದಣಿದು ಬರುವ ಹೋರಾಟಗಾರ ತನ್ನೆಲ್ಲ ಪ್ರೀತಿಯನ್ನು ಮಕ್ಕಳಿಗಾಗಿ ಧಾರೆಯೆರೆಯುವ ತ್ಯಾಗಮಯಿ. ತಾಯಿಯಿಲ್ಲದ ಮನೆ ಜಡವಾಯಿತು. ತಂದೆಯಿಲ್ಲದ ಮನೆ ಬಡವಾಯಿತು ಎಂಬAತೆ ತಂದೆಯಿಲ್ಲದ ಮನೆ ನೀರಿರದ ಕೆರೆಯಂತೆ ಅಪ್ಪ. ಕೇವಲ ಘನತೆ, ಗಾಂಭೀರ್ಯತೆ ಮಾತ್ರವಲ್ಲ ಅವರ ನಡವಳಿಕೆ, ವಿಚಾರ, ಆಚಾರ ಮತ್ತು ಜ್ಞಾನವೇ ನಮ್ಮಲ್ಲಿ ಅವರನ್ನು ಪ್ರತಿಬಿಂಬಿಸುತ್ತದೆ. ತಾಯಿ ಮೊದಲ ಗುರುವಾದರೆ ತಂದೆ ನಿರಂತರ ಗುರು ಮತ್ತು ಗುರಿ.
ಅಪ್ಪ... ಕೆಲವರಿಗೆ ಸ್ನೇಹ, ಕೆಲವರಿಗೆ ಭಾವನೆ, ಕೆಲವರಿಗೆ ಆಶ್ರಯ, ಕೆಲವರಿಗೆ ಪ್ರೀತಿ, ಇನ್ನೂ ಕೆಲವರಿಗೆ ವಿಶ್ವ ಮಾನವ. ಆದರೆ ನನಗೆ ಅಪ್ಪ ಎಂದರೆ ತಿಳುವಳಿಕೆ. ಜ್ಞಾನ-ವಿಜ್ಞಾನದ ದಾರಿ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಗುರು, ನನ್ನ ಸರಿ-ತಪ್ಪುಗಳನ್ನು ಸಮಯೋಚಿತವಾಗಿ ತಿಳುವಳಿಕೆ ನೀಡಿ ತಿದ್ದುವ ಗುರಿಕಾರ. ನನ್ನ ಆತ್ಮ ಸಮ್ಮಾನ ಮತ್ತು ನನ್ನ ರಕ್ಷಕ ಕೂಡ ಹೌದು.
ಅಪ್ಪ... ಅಪ್ಪಂದಿರ ದಿನದ ಶುಭಾಶಯಗಳು ನಿಮಗೆ.
- ಆರುಷ್ ಶೇಖರ್ ಬಿ.ಸಿ., ೫ನೇ ತರಗತಿ, ಸಂತ ಜೋಸೆಫರ ಕಾನ್ವೆಂಟ್, ಮಡಿಕೇರಿ.ಹೆಮ್ಮೆಪಡುವ ಮಗಳು ನಾನು...
ನೀನು ನಮಗಾಗಿ ಹರಿಸುವ ಒಂದೊAದು ಬೆವರಿನ ಹನಿಯ ಋಣ ಹೇಗಪ್ಪ ತೀರಿಸಲಿ., ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್. ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್ ಅಪ್ಪಾ... ನೀನು ಹೆಮ್ಮೆ ಪಡುವ ಮಗಳು ನಾನಾಗುವೆ ಇದು ನನ್ನ ಪ್ರಾಮಿಸ್. ಹ್ಯಾಪಿ ಫಾದರ್ಸ್ ಡೇ ಅಪ್ಪ. ಐ ಲವ್ ಯೂ ಪಪ್ಪಾ.
- ಬಿ.ಆರ್. ಪ್ರಜ್ಞಾ, ಬಿ.ಜಿ.ಎಸ್. ಪಬ್ಲಿಕ್ ಶಾಲೆ, ಮದೆ.ನನ್ನ ತಂದೆಯೇ ನನಗೆ ನಾಯಕ
ಮಕ್ಕಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತ