ಚೆಯ್ಯಂಡಾಣೆ, ಜೂ. ೧೮: ಎಡಪಾಲದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸ್ಥಳೀಯ ಮದರಸದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಎನ್‌ಹೆಚ್‌ವೈಎ) ಎಡಪಾಲದ ನಜ್ಮುಲ್ ಹುದಾ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಲಿಕೆಗೆ ಬೇಕಾಗುವ ನೋಟ್ ಪುಸ್ತಕ ಹಾಗೂ ಇತರ ಪರಿಕರಗಳನ್ನು ಸಂಘದ ಕಚೇರಿಯಲ್ಲಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ವಹಿಸಿದ್ದರು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶೈಖುನಾ ಅಬ್ದುಲ್ಲ ಫೈಝಿ ಎಡಪಾಲ ನೆರವೇರಿಸಿದರು.

ನೋಟ್ ಪುಸ್ತಕ ಹಾಗೂ ಪರಿಕರಗಳನ್ನು ಸ್ಥಳೀಯ ಮಸೀದಿಯ ಮುದರ್ರಿಸ್ ನಿಝಾರ್ ಫೈಝಿ ವಿತರಿಸಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಹಾರಿಸ್ ಬಾಖವಿ, ನಿರ್ದೇಶಕ ಹಂಸ ಕುಪ್ಪೊಡಂಡ, ಕೋಶಾಧಿಕಾರಿ ರೌಫ್, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ಸಂಘದ ಸದಸ್ಯ ರಷೀದ್, ಸ್ಥಳೀಯ ಜಮಾಅತ್ ಉಪಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್, ಉಮ್ಮರ್ ಸಿಆರ್‌ಪಿ, ಮಾಮು ಹಾಜಿ, ಜಮಾಅತ್ ಕಾರ್ಯದರ್ಶಿ ಮುಹಮ್ಮದ್, ಬಶೀರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ರಶೀದ್ ಕೆ.ಎ. ಹಾಗೂ ವಂದನೆಯನ್ನು ಷಂಶುದ್ದೀನ್ ನೆರವೇರಿಸಿದರು.