ಮಡಿಕೇರಿ, ಜೂ. ೧೮: ಮಡಿಕೇರಿ ಕಾನ್ವೆಂಟ್ ಜಂಕ್ಷನ್‌ನಲ್ಲಿ ಅನುಮತಿ ಪಡೆಯದೆ ಭೂಮಿ ಅಗೆದು ನೀರಿನ ಕೊಳವೆಗೆ ಹಾನಿ ಮಾಡಿದ ಏರ್‌ಟೆಲ್ ಸಿಬ್ಬಂದಿಗೆ ನಗರಸಭೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ನಗರಸಭೆ ಸದಸ್ಯ ಅರುಣ್ ಶೆಟ್ಟಿ ಅವರು ಅನಧಿಕೃತ ಕಾಮಗಾರಿ ತಡೆ ಹಿಡಿದು, ನಗರಸಭಾ ಅಧ್ಯಕ್ಷರಿಗೆ ದೂರಿತ್ತರು. ಸ್ಥಳಕ್ಕೆ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಇಂಜಿನಿಯರ್ ಆಗಮಿಸಿ ಪರಿಶೀಲಿಸಿದರು.

ಕಛೇರಿಗೆ ಕರೆಸಿ ಏರ್‌ಟೆಲ್ ಸಿಬ್ಬಂದಿಗೆ ದಂಡ ವಿಧಿಸಿ, ಅನುಮತಿ ಪಡೆದು ಕೆಲಸ ನಿರ್ವಹಿಸಲು ಸೂಚಿಸಿದರು.