ಕಣಿವೆ, ಜೂ. ೧೮ : ಬೇಸಿಗೆಯ ಬಿಸಿಲಿಗೆ ಕಂಗೆಟ್ಟ ಹಲವು ಬೆಳೆಗಳು ಒಣಗುತ್ತಿರುವ ಹೊತ್ತಿನಲ್ಲಿ ಇಲ್ಲೊಬ್ಬ ಕೃಷಿಕ ತಮ್ಮ ಅಡಿಕೆ ತೋಟದೊಳಗೆ ಬೆಳೆದಿರುವ ಕುಂಬಳ ಕೃಷಿ ಹುಲುಸಾಗಿ ಬೆಳೆದು ನಿಂತಿದೆ.

ಸ್ವಾಭಾವಿಕವಾಗಿ ಅಡಿಕೆ ತೋಟದಲ್ಲಿ ನೆರಳಿರುತ್ತದೆ. ಇಂತಹ ನೆರಳಿನಲ್ಲಿ ಬೆಳೆಗಳು ಹುಲುಸಾಗಿ ಬರುವುದು ವಿರಳ. ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದ ಕೃಷಿಕ ಚಂದ್ರಶೇಖರ್ ತಮ್ಮ ತೋಟದಲ್ಲಿ ಕುಂಬಳ ಬಳ್ಳಿಗಳನ್ನು ಬೆಳೆದು ಇತರೇ ಕಳೆಯ ಗಿಡಗಳು ಬಾರದಂತೆ ಕ್ರಮ ವಹಿಸಿದ್ದಾರೆ.

ಮಾರುಕಟ್ಟೆಯಲ್ಲಿ ಒಂದಷ್ಟು ಲಾಭವೇ ಸಿಗುವ ಈ ಕುಂಬಳ ಫಸಲಿನ ಬಳ್ಳಿಗಳನ್ನು ಅಡಿಕೆ ತೋಟದಲ್ಲಿ ಬೆಳೆದಿರುವುದರಿಂದ ಅಡಿಕೆ ಹಾಗೂ ಕುಂಬಳ ಎರಡೂ ಫಸಲಿನ ನಿರ್ವಹಣೆ ಸುಗಮವಾಗಲಿದೆ ಎಂಬುದು ಕೃಷಿಕ ಚಂದ್ರಶೇಖರ್ ಅಭಿಪ್ರಾಯವಾಗಿದೆ. ಒಟ್ಟಾರೆ ಈ ಸಮಗ್ರ ಬೆಳೆ ನೋಡುಗರ ಗಮನ ಸೆಳೆಯುತ್ತಿದೆ.