ಶ್ರೀಮಂಗಲ, ಜೂ. ೧೮: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಭಾನುವಾರ ಸಂಜೆ ಮೇಯಲು ಗದ್ದೆಯಲ್ಲಿ ಕಟ್ಟಿದ್ದ ಎಮ್ಮೆ ಹುಲಿ ದಾಳಿಗೆ ಬಲಿಯಾಗಿದೆ.

ಗ್ರಾಮದ ಅಮ್ಮತ್ತಿರ ಚಂದ್ರಶೇಖರ್ ಅವರಿಗೆ ಸೇರಿದ ಎಮ್ಮೆಯನ್ನು ಸಂಜೆ ೪ ಗಂಟೆ ವೇಳೆಗೆ ಗದ್ದೆಯಲ್ಲಿ ಕಟ್ಟಿದ್ದ ವೇಳೆ ದಾಳಿ ಮಾಡಿದ್ದು, ಎಮ್ಮೆ ಅರಚಾಡುವ ಸದ್ದಿಗೆ ಸುತ್ತಮುತ್ತಲಿನ ಜನರು ಕಿರುಚಾಡಿದ ಹಿನ್ನಲೆ ಹುಲಿ ಸಮೀಪದ ಕಾಫಿ ತೋಟದಲ್ಲಿ ಮರೆಯಾಗಿದೆ.

ಸ್ಥಳಕ್ಕೆ ಶ್ರೀಮಂಗಲ ಮತ್ತು ಬಿರುನಾಣಿ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ ಪರಿಶೀಲಿಸಿದ್ದು, ಹುಲಿ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.