ವೀರಾಜಪೇಟೆ, ಜೂ. ೧೭ : ಸ್ನೇಹಿತರ ಬಳಿಯಿಂದ ಚೆಕ್ ನೀಡಿ ಹಣವನ್ನು ಸಾಲವಾಗಿ ಪಡೆದಿದ್ದ ಮರ ವ್ಯಾಪಾರಿಯ ಚೆಕ್ ಬೌನ್ಸ್ ಪ್ರಕರಣ ಸಂಬAಧ ಆರೋಪಿಗೆ ನ್ಯಾಯಾಲಯ ಶಿಕ್ಷೆ ನೀಡಿ ತೀರ್ಪು ನೀಡಿದೆ.
ವೀರಾಜಪೇಟೆ ನಗರದ ಪಂಜರಪೇಟೆ ನಿವಾಸಿ ಸೈನುದ್ದೀನ್ ಲತೀಫ್ ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಸೈನುದ್ದೀನ್ ಮರ ಮತ್ತು ಇತರ ಸಾಮಗ್ರಿಗಳನ್ನು ಖರೀದಿ ಮಾಡುವ ಮತ್ತು ಮಾರಾಟ ಮಾಡುವ ವ್ಯಾಪಾರಿಯಾಗಿದ್ದರು. ನಗರದಲ್ಲಿ ಹಲವು ವರ್ಷಗಳಿಂದ ಹಳೆ ಮರ ವ್ಯಾಪಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ವೀರಾಜಪೇಟೆ ತೆಲುಗರ ಬೀದಿ ನಿವಾಸಿ ಮಹೇಶ್ ಟಿ.ಪಿ ಎಂಬವರಿAದ ಸಾಲವಾಗಿ ವ್ಯಾಪಾರದ ಉದ್ದೇಶದಿಂದ ೩೦-೧೨-೨೦೧೬ ರಂದು ಎಸ್.ಬಿ.ಐ ಬ್ಯಾಂಕಿನ ಚೆಕ್ ನೀಡಿ ಸುಮಾರು ೧೦ ಲಕ್ಷ ರೂ.ಗಳನ್ನು ಪಡೆದಿದ್ದರು. ತದ ನಂತರದಲ್ಲಿ ಹಣ ನೀಡಿದ ವ್ಯಕ್ತಿಯು ಹಲವು ಬಾರಿ ಸಂಪರ್ಕಿಸಿದರು ಸೈನುದ್ದೀನ್ ಹಣ ಹಿಂದಿರುಗಿಸಿರಲಿಲ್ಲ. ಮಹೇಶ್ ಅವರು ಸೈನುದ್ದೀನ್ ಅವರು ನೀಡಿರುವ ಚೆಕ್ ನಗದೀಕರಿಸಲು ಕರ್ನಾಟಕ ಬ್ಯಾಂಕ್ ಮುಖಾಂತರ ಬ್ಯಾಂಕ್ಗೆ ನೀಡಿದ್ದರು. ನೀಡಿರುವ ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್ ಅಮಾನ್ಯವಾಗಿತ್ತು. ೧೭-೦೫-೨೦೧೭ರಲ್ಲಿ ವೀರಾಜಪೇಟೆ ನಗರ ಠಾಣೆಯಲ್ಲಿ ಎನ್.ಐ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟ್ಟಿಲೇರಿತ್ತು. ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಮುರ್ತಿ ಸಂತೋಷ್ ಕೊಟಾರಿ ಅವರು ವಿಚಾರಣೆ ನಡೆಸಿ ಪ್ರಕರಣ ಆರೋಪಿ ದೂರುದಾರರಿಗೆ ರೂ. ೧೨ ಲಕ್ಷ ಮತ್ತು ರೂ. ೧೦ ಸಾವಿರ ಸರ್ಕಾರಕ್ಕೆ ಪಾವತಿ ಮಾಡುವಂತೆ ತಪ್ಪಿದಲ್ಲಿ ೬ ತಿಂಗಳು ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.