ಕಣಿವೆ, ಜೂ. ೧೭: ಕುಶಾಲನಗರ ತಾಲೂಕಿನ ಆನೆಕಾಡು ಅರಣ್ಯ ದಂಚಿನ ಹೆದ್ದಾರಿ ಬದಿಯಲ್ಲಿ ಬಳಸಿ ಬಿಸಾಕಿದ್ದ ಹಾಸಿಗೆ, ಹೊದಿಕೆ ಹಾಗೂ ತಲೆದಿಂಬುಗಳನ್ನು ವಾಹನದಲ್ಲಿ ತಂದು ಬಿಸಾಕಿದ್ದಾರೆ.

ಅದಿರಲಿ, ಆನೆಕಾಡು ಅರಣ್ಯದ ಹೆದ್ದಾರಿ ಬದಿ ಇಂತಹ ಮಂದಿಗೆ ‘ಡಸ್ಟ್ ಬಿನ್’ ಆಗಿ ಮಾರ್ಪಟ್ಟಿ ರುವುದು ಮಾತ್ರ ವಿಪರ್ಯಾಸ. ಕೂಡಲೇ ಅರಣ್ಯಾಧಿಕಾರಿಗಳು ಇಂತಹ ಮಂದಿಯನ್ನು ಪತ್ತೆ ಹಚ್ಚುವ ಮೂಲಕ ತಕ್ಕ ಎಚ್ಚರಿಕೆ ನೀಡಬೇಕಿದೆ.

ಕಾಡು ಪ್ರಾಣಿಗಳು ಇರುವ ಇಲ್ಲಿ ಹತ್ತಿ ಹಾಗೂ ಬಟ್ಟೆಗಳಿಂದ ಮಾಡಿರುವಂತಹ ಈ ಹಾಸಿಗೆ ತಲೆದಿಂಬುಗಳನ್ನು ಬಿಸಾಕುವ ಮೂಲಕ ಪರಿಸರಕ್ಕೆ ಮಾರಕವಾಗುವಂತಹ ಕೃತ್ಯ ಎಸಗಿದ್ದಾರೆ.

ಹಾಗೆಯೇ ಹೆದ್ದಾರಿಯುದ್ದಕ್ಕೂ ಹಳೇ ತ್ಯಾಜ್ಯಗಳು, ಮಾಂಸದ ತ್ಯಾಜ್ಯಗಳು, ಮದ್ಯದಂಗಡಿಗಳಲ್ಲಿ ಸಂಗ್ರಹವಾಗುವ ಕಸ, ಪ್ಲಾಸ್ಟಿಕ್ ಮೊದಲಾದವುಗಳನ್ನು ತಂದು ಇಲ್ಲಿ ಬಿಸಾಕುವ ಕೆಲಸ ನಿರಂತರವಾಗಿ ನಡೆಯುತ್ತಿರುವುದರಿಂದ ಅರಣ್ಯ ಸಿಬ್ಬಂದಿಗಳು ಕೂಡಲೇ ಇಂತಹವರ ವಿರುದ್ಧ ಮೊಕದ್ದಮೆ ದಾಖಲಿಸ ಬೇಕೆಂದು ಏಳನೇ ಹೊಸಕೋಟೆಯ ಅಬ್ದುಲ್ ರಜಾಕ್, ಎ.ಪಿ.ರಮೇಶ್ ಮೊದಲಾದವರು ಒತ್ತಾಯಿಸಿದ್ದಾರೆ.

ವರದಿ : ಕೆ.ಎಸ್.ಮೂರ್ತಿ