ಹೆಬ್ಬಾಲೆ, ಜೂ. ೧೬ : ಬೆಟ್ಟದಪುರ - ಕಿತ್ತೂರು ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೊಲೆರೋ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ತೊರೆನೂರು ಗ್ರಾಮದ ಮಂಜುನಾಥ (೫೦) ಮತ್ತು ಸುನಿತಾ (೪೨) ಎಂಬ ದಂಪತಿ ಮೃತಪಟ್ಟಿರುವ ಘಟನೆ ನಡೆದಿದೆ.

ಕೊತ್ತವಳ್ಳಿ ಗ್ರಾಮದ ಸಂಬAಧಿಕರ ಮನೆಗೆ ತೆರಳಿ ತಮ್ಮ ಸ್ವಗ್ರಾಮವಾದ ತೊರೆನೂರು ಗ್ರಾಮಕ್ಕೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ,

ದ್ವಿಚಕ್ರ ವಾಹನ ಸವಾರ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಗಾಯಗೊಂಡಿದ್ದ ಸುನಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಸುನಿತಾ ಅವರ ಸಹೋದರ ವಿಶ್ವನಾಥ್ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.