ಶನಿವಾರಸಂತೆ, ಜೂ. ೧೬: ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ೨೦೨೨-೨೩ ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ತಾ. ೧೭ ರಿಂದ ೨೩ ರವರೆಗೆ ಚಿಕ್ಕಕೊಳತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ತಾ. ೧೭ ರಂದು (ಇಂದು) ಮಧ್ಯಾಹ್ನ ೨-೩೦ ಗಂಟೆಗೆ ಶಿಬಿರವನ್ನು ಸೋಮವಾರಪೇಟೆ ಬಿಟಿಸಿಜಿ ಕಾಲೇಜಿನ ಉಪನ್ಯಾಸಕ ಎಂ.ಎಸ್. ಸುನೀಲ್ ಉದ್ಘಾಟಿಸಲಿದ್ದಾರೆ. ವಿದ್ಯಾಸಂಸ್ಥೆ ಅಧ್ಯಕ್ಷ ಪಿ. ಶೇಷಾದ್ರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಂ.ಯು. ಮಹಮ್ಮದ್ ಪಾಷ, ಕಾರ್ಯದರ್ಶಿ ಕೆ.ಎಂ. ಜಗನ್ ಪಾಲ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈ.ಎಂ. ದಯಾನಂದ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಚ್.ಬಿ. ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮರಿಯಮ್ಮ, ದುಂಡಳ್ಳಿ ಪಿಡಿಓ ಸಿ.ಕೆ. ರಾಜೇಂದ್ರ, ಪತ್ರಕರ್ತ ಸುರೇಶ್ ಚೆರಿಯಮನೆ ಹಾಗೂ ಉಪನ್ಯಾಸಕ ಎಸ್.ಎಸ್. ಮೋಹನ್ ಕುಮಾರ್ ಪಾಲ್ಗೊಲಿದ್ದಾರೆ.
ತಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಸ್.ಮಹಾಂತೇಶ್, ಎಂ.ಡಿ. ದೇವರಾಜ್, ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ, ಆಶಾ ಕಾರ್ಯಕರ್ತೆ ನಂದಿನಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕೈರುನ್ನೀಸಾ, ಜಯಲಕ್ಷಿö್ಮÃ, ಉಪನ್ಯಾಸಕ ಬಿ.ಎಂ. ಪೊನ್ನಪ್ಪ ಭಾಗವಹಿಸಲಿದ್ದಾರೆ ಎಂದು ಶಿಬಿರಾಧಿಕಾರಿ ಯೋಜನಾಧಿಕಾರಿ ಎಂ.ಎನ್. ಹರೀಶ್ ಹಾಗೂ ಸಹ ನಿರ್ದೇಶಕಿ ಟಿ.ಜೆ. ಶೋಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.