ಚೆಯ್ಯಂಡಾಣೆ, ಜೂ. ೧೬: ನಾಪೋಕ್ಲು ಮೂರ್ನಾಡು ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ನೆರವು ನೀಡಲಾಯಿತು.
ಕೊಕೇರಿ ಗ್ರಾಮದ ಎಚ್. ಕೆ. ಸುದೀಪ್ ಚಿಕಿತ್ಸೆಗಾಗಿ ನಾಪೋಕ್ಲು ವಾಹನ ಚಾಲಕರ ಸಂಘ ಮತ್ತು ಸಾರ್ವಜನಿಕರ ಸಹಾಯದಿಂದ ಸಂಗ್ರಹಿಸಲಾದ ೨೧,೬೭೦ ರೂ. ಗಳನ್ನು ಯುವಕನ ತಾಯಿ ಸವಿತಾ ಅವರಿಗೆ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ನೇತೃತ್ವದಲ್ಲಿ ನಾಪೋಕ್ಲುವಿನ ಸಂಘದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯರಾದ ರಾಶಿದ್, ಸುನಿಲ್, ಪ್ರಕಾಶ್, ಶಕೀಲ್, ಜಗದೀಶ್ ಮತ್ತಿತರರು ಹಾಜರಿದ್ದರು.