ಸೋಮವಾರಪೇಟೆ, ಜೂ. ೧೬: ಇಲ್ಲಿನ ಮೊಗೇರ ಯುವ ವೇದಿಕೆ ವತಿಯಿಂದ ಮೊಗೇರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಸ್ಥಳೀಯ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇದಿಕೆ ಅಧ್ಯಕ್ಷ ಸುರೇಶ ವಹಿಸಿದ್ದರು. ವೇದಿಕೆಯ ಗೌರವ ಅಧ್ಯಕ್ಷ ಪಿ.ಕೆ. ಚಂದ್ರು, ಜಿಲ್ಲಾ ಮಾಜಿ ಅಧ್ಯಕ್ಷ ಪಿ.ಎಂ. ರವಿ, ತಾಲೂಕು ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ದೇವರಾಜು, ಮಾಜಿ ಜಿಲ್ಲಾ ಕಾರ್ಯದರ್ಶಿ ಜನಾರ್ದನ, ತಾಲೂಕು ಮಾಜಿ ಅಧ್ಯಕ್ಷ ದಾಮೋದರ್, ವೆಂಕಪ್ಪ, ನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.