ಸೋಮವಾರಪೇಟೆ, ಜೂ. ೧೬: ಜಿಲ್ಲಾ ಜೇನು ಕುರುಬರ ಸಂಘದ ಸಭೆ ಜಿಲ್ಲಾಧ್ಯಕ್ಷ ಬಿ.ಕೆ. ಧರ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಮಾಲಂಬಿ ಹಾಡಿಯಲ್ಲಿ ನಡೆಯಿತು.
ಸಭೆಯಲ್ಲಿ ನೂತನವಾಗಿ ಸೋಮವಾರಪೇಟೆ ತಾಲೂಕು ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಜೆ.ಜೆ. ರಮೇಶ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೆ.ಜೆ. ಪ್ರವೀಣ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜೆ.ಎಲ್. ವಸಂತ ಹಾಗೂ ಸಮಿತಿ ಸದಸ್ಯರಾಗಿ ಜೆ.ಆರ್. ರಮೇಶ, ಜೆ.ಎಂ. ಬಸಪ್ಪ, ಜೆ.ಕೆ. ಶಿವಣ್ಣ, ಜೆ.ಎ. ಅಪ್ಪಣಿ, ಜೆ.ಆರ್. ಧರ್ಮ, ಜೆ.ಬಿ. ವೇಣು, ಜೆ.ಸಿ. ಸತೀಶ, ಜೆ.ಆರ್. ತಮ್ಮಯ್ಯ, ಜೆ.ಆರ್. ಕುಮಾರ, ಜೆ.ಆರ್. ಹರೀಶ. ಜೆ.ಕೆ. ನಿತಿನ್, ಜೆ.ಎಸ್. ಲೋಕೇಶ ನೇಮಕಗೊಂಡರು. ಸಭೆಯಲ್ಲಿ ತಾಲೂಕಿನ ೨೮ ಹಾಡಿಯ ಮುಖಂಡರು ಉಪಸ್ಥಿತರಿದ್ದರು.