ಸೋಮವಾರಪೇಟೆ, ಜೂ. ೧೬: ಮುನಿಸಿಪಲ್ ಡಾಟಾ ಸೊಸೈಟಿಯ ಆದೇಶದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆ ಹಾಗೂ ಸ್ವತ್ತುಗಳ ಪರಿವೀಕ್ಷಣೆ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ಸಂಬAಧಿಸಿದ ಮಾಹಿತಿಯನ್ನು ಸಂಬAಧಿಸಿದ ಸಿಬ್ಬಂದಿಗಳಿಗೆ ನೀಡಬೇಕೆಂದು ಮುಖ್ಯಾಧಿಕಾರಿ ನಾಚಪ್ಪ ಅವರು ತಿಳಿಸಿದ್ದಾರೆ.
ಪ್ರತಿ ಮನೆಯ ಆಸ್ತಿ ವಿವರಗಳನ್ನು ಆಸ್ತಿ ಕಣಜ ತಂತ್ರಾAಶದಲ್ಲಿ ದಾಖಲಾತಿ ಮಾಡಲು ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಸ್ವತ್ತು ತೆರಿಗೆ ರಿಜಿಸ್ಟರ್ನ್ನು ಕಾಲೋಜಿತಗೊಳಿಸುವ ಉದ್ದೇಶಕ್ಕಾಗಿ ಸ್ವತ್ತಿನ ಪರಿವೀಕ್ಷಣೆ ಮಾಡಲು ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ಸ್ವತ್ತಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕೆಂದು ಸೂಚಿಸಿದ್ದಾರೆ.
ಒಂದು ವೇಳೆ ಸ್ಥಳಕ್ಕೆ ಬರುವ ಸಿಬ್ಬಂದಿಗಳಿಗೆ ದಾಖಲಾತಿಗಳನ್ನು ನೀಡಲು ಅಸಾಧ್ಯವಾಗಿದ್ದಲ್ಲಿ ತಮ್ಮ ಮನೆಯ ಭಾವಚಿತ್ರ, ಮಾಲೀಕರ ಭಾವಚಿತ್ರ, ಮತದಾರರ ಗುರುತಿನ ಚೀಟಿ, ರೇಖಾಂಶ ಮತ್ತು ಅಕ್ಷಾಂಶ, ಸ್ವತ್ತಿನ ಅಳತೆ, ಮನೆಯ ಮೂಲ ದಾಖಲಾತಿ, ಕಟ್ಟಡ ಪರವಾನಗಿ, ಕಂದಾಯ ಪಾವತಿ ರಶೀದಿ, ಜಿಪಿಎಸ್ ಭಾವಚಿತ್ರವನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ಸಲ್ಲಿಸಬೇಕೆಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.