ಮಡಿಕೇರಿ, ಜೂ. ೧೬: ಹಿಂದೂ ಪತ್ರಿಕೆ ಆಶ್ರಯದಲ್ಲಿ ಮಡಿಕೇರಿಯಲ್ಲಿ ತಾ. ೧೭ ರಂದು (ಇಂದು) ಆಹಾರ ಸ್ಪರ್ಧೆ ನಡೆಯಲಿದೆ.

ನಗರದ ಕೊಹಿನೂರು ರಸ್ತೆಯಲ್ಲಿರುವ ರೆಡ್‌ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮನೆಯಲ್ಲಿ ತಮ್ಮ ಇಷ್ಟದ ಪದಾರ್ಥಗಳನ್ನು ತಯಾರಿಸಿ ಇಲ್ಲಿ ಸ್ಪರ್ಧೆಗೆ ತರಬಹುದಾಗಿದ್ದು, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಹಾಗೂ ಸುಚಿತ್ರಾ ಮುರಳಿ ಇವರುಗಳು ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ.

ಆಯ್ಕೆಯಾಗುವ ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಗೆ ಆಹ್ವಾನಿಸಲಾಗುವುದು. ಅಂತಿಮ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ೧ ಲಕ್ಷ, ಎರಡನೇ ಬಹುಮಾನ ೬೦ ಸಾವಿರ, ಮೂರನೇ ಬಹುಮಾನ ೪೦ ಸಾವಿರ ನೀಡಲಾಗುವುದು.

ತಾ. ೧೭ ರಂದು (ಇಂದು) ಬೆಳಿಗ್ಗೆ ೧೦.೩೦ ರಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ ೯೬೦೬೪೭೪೯೭೩, ೯೬೦೬೪೭೪೯೭೪ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.