ವೀರಾಜಪೇಟೆ, ಜೂ. ೧೫: ವೀರಾಜ ಪೇಟೆಯ ಬಾಳು ಗೋಡು ಗ್ರಾಮದಲ್ಲಿ ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲ ಯದ ನ್ಯಾಯಾಧೀಶ ಎ.ಎಸ್. ಬೋಪಣ್ಣ ಅವರು ನೂತನ ನ್ಯಾಯಾಲಯಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂಬAಧ ಉಚ್ಚನ್ಯಾಯಲ ಯದ ರಿಜಿಸ್ಟಾರ್ ಜನರಲ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ನ್ಯಾಯಾಧೀಶ ಪುಟ್ಟರಂಗಸ್ವಾಮಿ ಅವರು ವೀರಾಜಪೇಟೆ ನ್ಯಾಯಾಲ ಯದ ಸಂಕೀರ್ಣದಲ್ಲಿ ಸಭೆ ನಡೆಸಿ ದರು. ವೀರಾಜಪೇಟೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವೀರಾಜಪೇಟೆ ತಹಶೀಲ್ದಾರ್ ಹನು ಮಂತಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿ ನಿಯರ್ ಚಂದ್ರೇಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು. ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಿದ ಜಾಗದ ಸುತ್ತಲೂ ಬೇಲಿ ನಿರ್ಮಾಣ ಮಾಡಲು ನ್ಯಾಯಾಧೀಶರು ಸೂಚಿಸಿದರು.

ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ ೮ ರಂದು ಜರುಗಲಿರುವ ಲೋಕ ಆದಾಲತ್ ವಿಚಾರವಾಗಿ ವೀರಾಜಪೇಟೆ ವಕೀಲರ ಸಂಘ ದೊಂದಿಗೆ ಚರ್ಚಿಸಿದರು.

ಈ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪ್ರಸಾದ್, ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಎಸ್. ಸುಜಾತ, ಹಿರಿಯ ಸಿವಿಲ್ ನ್ಯಾಯಾಧೀಶ ಎ. ನಾಗೀರೆಡ್ಡಿ, ಸಿವಿಲ್ ನ್ಯಾಯಾಧೀಶರು ಗಳಾದ ಸಂತೋಷ್ ಕೊಠಾರಿ, ಪ್ರದೀಪ್ ಪೊಟದಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.