ಮಡಿಕೇರಿ, ಜೂ. ೧೫: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯ ಬಿಸಿಯ ನಡುವೆ ವಿವಿಧ ಉತ್ಪನ್ನಗಳಿಗೂ ಬೆಲೆ ಹೆಚ್ಚಳವಾಗುತ್ತಿದ್ದು, ಗ್ರಾಹಕರಿಗೆ ಮತ್ತೊಂದು ಹೊಡೆತ ಎದುರಾಗುತ್ತಿದೆ.

ದಿನನಿತ್ಯದ ಅಗತ್ಯತೆಗಳಾದ ತರಕಾರಿ, ದಿನಸಿ ಪದಾರ್ಥ, ಹಣ್ಣು ಹಂಪಲುಗಳ ಬೆಲೆ ದಿನೇ ದಿನೇ ಹೆಚ್ಚಳ ಕಾಣುತ್ತಿದ್ದು, ರಾಜ್ಯದಲ್ಲಿ ಜನತೆ ಬೆಲೆ ಏರಿಕೆಯ ಬಿಸಿಯಿಂದಾಗಿ ಪರಿತಪಿಸುವಂತಾಗಿದೆ. ಬೇಡಿಕೆಯಿರುವಷ್ಟು ಉತ್ಪನ್ನಗಳು ಪ್ರಸ್ತುತ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಮಳೆಯ ಕೊರತೆ ಎದುರಾಗಿರುವುದು ಸೇರಿದಂತೆ ಈ ಹಿಂದಿನ ಕೊರೊನ ಪರಿಸ್ಥಿತಿ ವಾತಾವರಣದಲ್ಲಿನ ಅಸಹಜತೆಯಿಂದಲೂ ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಪ್ರಸ್ತುತ ವಿವಿಧ ತರಕಾರಿಗಳು, ದಿನಸಿ ಪದಾರ್ಥಗಳು, ಹಣ್ಣು-ಹಂಪಲುಗಳ ಬೆಲೆ ಹೆಚ್ಚಳವಾಗುತ್ತಿದೆ. ಹಲವು ಉತ್ಪನ್ನಗಳ ಧಾರಣೆ ದುಪ್ಪಟ್ಟಾಗಿದೆ. ಕೆಲ ದಿನಗಳ ಹಿಂದೆ ಕೆ.ಜಿ.ಗೆ ರೂ. ೮೦-೧೦೦ ರಷ್ಟಿದ್ದ ಬೀನ್ಸ್ ಇದೀಗ ರೂ. ೧೦೦-೧೨೦ರಷ್ಟು ಹೆಚ್ಚಳವಾಗಿದೆ, ರೂ.೨೦ ಇದ್ದ ಟೊಮೊಟೊ ರೂ.೪೦, ಕ್ಯಾಪ್ಸಿಕಂ ರೂ.೬೦ ರಿಂದ ರೂ.೧೨೦, ಕ್ಯಾರೆಟ್ ರೂ. ೭೦ ರಿಂದ ರೂ.೧೦೦, ನುಗ್ಗೆ ರೂ.೬೦ ರಿಂದ ರೂ.೧೨೦, ಅಲಸಂಡೆ ರೂ.೩೦ ರಿಂದ ರೂ.೬೦ ಈ ರೀತಿಯಾಗಿ ದುಬಾರಿಯಾಗಿದೆ. ಹಸಿಮೆಣಸು ಕೂಡ ರೂ.೪೦ ರಿಂದ ರೂ.೮೦ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ವಿವಿಧ ದಿನಸಿ ಪದಾರ್ಥಗಳಾದ ತೊಗರಿಬೇಳೆ, ಹೆಸರು ಕಾಳು, ಕಪ್ಪುಬೆಲ್ಲ ಸೇರಿದಂತೆ ವಿವಿಧ ಕಾಳು-ಕಡ್ಡಿಗಳ ಬೆಲೆಯೂ ಏರಿಕೆ ಕಂಡಿದೆ.

ಹಣ್ಣು-ಹAಪಲುಗಳಾದ ಸೇಬು, ದಾಳಿಂಬೆ, ಮಾವು, ಮೂಸಂಬಿ, ಕರ್ಜೂರ, ಕಲ್ಲಂಗಡಿಯAತಹ ವಸ್ತುಗಳ ಬೆಲೆಯಲ್ಲೂ ಹೆಚ್ಚಳವಾಗಿರುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಪ್ರಸ್ತುತ ಕೋಳಿ ಮಾಂಸದ ಧಾರಣೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಮಳೆಗಾಲ ಎದುರಾಗುತ್ತಿರುವುದರಿಂದ ಕೋಳಿ ಸಾಕಾಣಿಕೆ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಗೆ ಧಾರಣೆ ಹೆಚ್ಚುತ್ತಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಇನ್ನು ತರಕಾರಿ-ದಿನಸಿ-ಹಣ್ಣಹಂಪಲುಗಳಿಗೆ ಸಂಬAಧಿಸಿದAತೆ ಮಳೆಯ ಕೊರತೆ ಎದುರಾಗಿರುವುದು ಕಾರಣ ಎನ್ನಲಾಗುತ್ತಿದೆ. ಇದಲ್ಲದೆ ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಕಂಡು ಬಂದ ಪ್ರವಾಹ ಪರಿಸ್ಥಿತಿಯೂ ವಿವಿಧ ಉತ್ಪನ್ನಗಳ ಕುಂಠಿತಕ್ಕೆ ಕಾರಣವಾಗಿದ್ದು, ಇದೂ ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಡಿಕೇರಿಯ ವ್ಯಾಪಾರಿಗಳಾದ ಲೋಕೇಶ್, ರವಿ, ವೇಣು ಅವರುಗಳು ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಜನಸಾಮಾನ್ಯರ ಬದುಕು ವಿವಿಧ ರೀತಿಯಲ್ಲಿ ಹೆಚ್ಚುತ್ತಿರುವ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಬೆಲೆ, ಇಂಧನದ ಬೆಲೆ ಹೆಚ್ಚಳ ಮತ್ತಿತರ ಕಾರಣಗಳಿಂದ ದುಸ್ತರವೆನಿಸುತ್ತಿದೆ.