ಸೋಮವಾರಪೇಟೆ, ಜೂ. ೧೩: ಬರೋಬ್ಬರಿ ೧೫ ವರ್ಷಗಳ ತರುವಾಯ ಸೋಮವಾರಪೇಟೆ ಯಲ್ಲಿರುವ ಶಾಸಕರ ಕಚೇರಿ ಹೊರ ಭಾಗದಲ್ಲಿರುವ ನಾಮಫಲಕದಲ್ಲಿ ಶಾಸಕರ ಹೆಸರು ಬದಲಾವಣೆಯಾಗಿದೆ.
ಕ್ಷೇತ್ರ ಪುನರ್ವಿಂಗಡಣೆಯ ನಂತರ ಸೋಮವಾರಪೇಟೆ ವಿಧಾನ ಸಭಾ ಕ್ಷೇತ್ರವು ಮಡಿಕೇರಿ ವಿಧಾನ ಸಭಾ ಕ್ಷೇತ್ರವೆಂದು ನಾಮಾಂಕಿತ ಗೊಂಡ ನಂತರ ನಡೆದ ೨೦೦೮, ೨೦೧೩ ಹಾಗೂ ೨೦೧೮ರಲ್ಲಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಎಂ.ಪಿ. ಅಪ್ಪಚ್ಚು ರಂಜನ್ ಅವರೇ ಗೆಲುವು ಸಾಧಿಸಿದ್ದರು.
ಈ ಹಿನ್ನೆಲೆ ಸೋಮವಾರ ಪೇಟೆಯಲ್ಲಿರುವ ಶಾಸಕರ ಕಚೇರಿಯ ಹೊರಭಾಗದಲ್ಲಿರುವ ನಾಮಫಲಕ ದಲ್ಲಿ ಅವರ ಹೆಸರೇ ಇರುತಿತ್ತು. ಆದರೆ ಈ ಸಾಲಿನ ಚುನಾವಣೆಯಲ್ಲಿ ಅಪ್ಪಚ್ಚು ರಂಜನ್ ಅವರು ಪರಾಭವ ಗೊಂಡಿದ್ದು, ಕಾಂಗ್ರೆಸ್ನ ಡಾ. ಮಂಥರ್ಗೌಡ ಅವರು ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆ ಶಾಸಕರ ಕಚೇರಿ ಹೊರಭಾಗದಲ್ಲಿರುವ ನಾಮಫಲಕ ಬದಲಾಗಿದೆ.
ಕಳೆದ ೧೫ ವರ್ಷಗಳಿಂದ ನಾಮಫಲಕದಲ್ಲಿದ್ದ ‘ಶ್ರೀ ಎಂ.ಪಿ. ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ವಿಧಾನ ಸಭಾ ಕ್ಷೇತ್ರ-ಸೋಮವಾರಪೇಟೆ ಕಚೇರಿ’ ಬದಲಿಗೆ ಇದೀಗ ‘ಶ್ರೀ ಡಾ. ಮಂಥರ್ ಗೌಡ, ಶಾಸಕರು, ಮಡಿಕೇರಿ ವಿಧಾನ ಸಭಾ ಕ್ಷೇತ್ರ, ಸೋಮವಾರಪೇಟೆ ಕಚೇರಿ’ ಎಂದು ಬದಲಾವಣೆಯಾಗಿದೆ. ಇದರೊಂದಿಗೆ ಶಾಸಕರ ಕಚೇರಿ ಯನ್ನೂ ನವೀಕರಣಗೊಳಿಸ ಲಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿಯೇ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.