ಸುಂಟಿಕೊಪ್ಪ, ಜೂ. ೧೩: ಖಾಸಗಿ ಬಸ್ ಮತ್ತು ಟ್ರಾö್ಯಕ್ಟರ್ ನಡುವೆ ಅಪಘಾತ ಸಂಭವಿಸಿ ಟ್ರಾö್ಯಕ್ಟರ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಸಮೀಪದ ಮಾದಾಪುರ ಪೆಟ್ರೋಲ್ ಬಂಕ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸುಂಟಿಕೊಪ್ಪ ಮಾರ್ಗವಾಗಿ ಮಾದಾಪುರದಿಂದ ಸೋಮವಾ ರಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದಕ್ಕೆ ಟ್ರಾö್ಯಕ್ಟರ್ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಟ್ರಾö್ಯಕ್ಟರ್ ಚಾಲಕ ಪ್ರಾಣಾಪಾ ಯದಿಂದ ಪಾರಾಗಿದ್ದಾನೆ. ಮಾದಾ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.