ವೀರಾಜಪೇಟೆ, ಜೂ. ೧೩: ಮದರ್ ತೆರೇಸಾ ಸೇವಾ ಕೇಂದ್ರ ವೀರಾ ಜಪೇಟೆ ಇವರ ವತಿಯಿಂದ ವೀರಾ ಜಪೇಟೆಯ ಸಂತ ಅನ್ನಮ್ಮ ಧರ್ಮ ಕೇಂದ್ರದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ವಂದನೀಯ ಗುರುಗಳಾದ ಐಸಾಕ್ ರತ್ನಾಕರ್ ಮದರ್ ತೆರೆಸಾ ಸೇವಾ ಕೇಂದ್ರದ ಸೇವಾ ಕಾರ್ಯಗಳನ್ನ ಶ್ಲಾಘಿಸುತ್ತಾ ರೂಪಾಯಿ ೧೦,೦೦೦ ದೇಣಿಗೆಯನ್ನು ನೀಡಿದರು. ವಂದನೀಯ ಗುರುಗಳಾದ ಯೇಸು ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಿಗೆ ದೊರೆತ ಅವಕಾಶ ಗಳನ್ನು ಬಳಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಮದರ್ ತೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಸದಸ್ಯರಾದ ಜಾನಿ ಮೆನೆಜೆಸ್, ಚಾರ್ಲ್ಸ್ ಡಿಸೋಜಾ, ಇಂದಿರಾ ಅಲ್ಫೋನ್ ಸಾ, ಅನಿತಾ ನರೋನ್ಹ, ಅರುಣ ಡಿಸೋಜಾ, ಚೋಪಿ ಜೋಸೆಫ್, ಜೋಕಿಮ್ ರೋಡ್ರಿಗಸ್, ಮರ್ವಿನ್ ಲೋಬೊ ಪುರಸಭೆ ಸದಸ್ಯ ಬೆನ್ನಿ ಅಗಸ್ಟಿನ್ ಹಾಜರಿದ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ-ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಖಜಾಂಚಿ ಜೇಮ್ಸ್ ಹಾಗೂ ಸದಸ್ಯರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.