ಅಮ್ಮನ ಗರ್ಭದಲ್ಲಿರುವಾಗಲೇ ಮಗುವಿಗೆ ಹೇಳುತ್ತಿದ್ದ ಪರಿಸರದ ಮಾಹಿತಿ ಮತ್ತು ಬಾಲ್ಯದಲ್ಲಿ ಹೇಳುತ್ತಿದ್ದ ಕಾಡಿನ ಕುರಿತ ಕಥೆಗಳೇ ಈ ಮಕ್ಕಳು ಇಂದು ಜೀವಂತವಾಗಿರಲು ಕಾರಣ ಎಂದು ಕೊಲಂಬಿಯಾ ದೇಶದ ರಾಷ್ಟಿçÃಯ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಕಾರಣವಾದ ಘಟನೆ ಜಗತ್ತಿನಲ್ಲಿ ಹೊಸದ್ದೊಂದು ಸಂಚಲನಕ್ಕೆ ಕಾರಣವಾಗಿದೆ. ಬಾಲ್ಯದಲ್ಲಿರುವಾಗಲೇ ಮಕ್ಕಳಿಗೆ ಹೇಳುವ ಕಥೆಗಳು ಎಷ್ಟು ಮಹತ್ವಪೂರ್ಣ ಎಂಬುದನ್ನು ಈ ಘಟನೆ ನಿರೂಪಿಸಿದೆ.

ಆ ಘಟನೆ ಯಾವುದೆಂದರೆ..?

ಅದು ಕೊಲಂಬಿಯಾ ದೇಶ. ಈ ದೇಶದ ಸ್ಯಾನ್ ದೇಸ್ ಡೆಲ್ ಎಂಬಾಕೆ ಮೇ ೧ ರಂದು ತನ್ನ ನಾಲ್ಕು ಮಕ್ಕಳ ಜೊತೆ ಪುಟ್ಟ ವಿಮಾನದಲ್ಲಿ ಹೋಗುತ್ತಿದ್ದಳು. ಆದರೆ ಈಕೆಯಿದ್ದ ವಿಮಾನ ಗಗನದಲ್ಲಿಯೇ ಆಕಸ್ಮಿಕ ದುರಂತಕ್ಕೀಡಾಗಿ ನೆಲಕ್ಕುರುಳುತ್ತದೆ. ಅದೂ ವಿಶ್ವದ ದಟ್ಟ ಕಾಡು ಎನಿಸಿರುವ ಅಮೆಝಾನ್ ಕಾಡಿನಲ್ಲಿ ಈ ವಿಮಾನ ಉದುರಿ ಬೀಳುತ್ತದೆ.

ವಿಮಾನ ದುರಂತಕ್ಕೀಡಾಗಿ ೩ ದಿನಗಳ ಬಳಿಕವೇ ವಿಮಾನ ಕಾಣೆಯಾಗಿದೆ. ನಿಗದಿತ ಗುರಿ ತಲುಪಿಲ್ಲ ಎಂಬುದು ತಿಳಿಯುತ್ತದೆ. ಕೂಡಲೇ ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತದೆ. ದಟ್ಟ ಅರಣ್ಯವಾದ ಅಮೆಜಾನ್‌ನಲ್ಲಿ ೧೦ ದಿನ ಸತತ ಕಾರ್ಯಾಚರಣೆಯ ಬಳಿಕ ಕೊಲಂಬಿಯಾದ ಸೈನಿಕರಿಗೆ ದುರಂತದಲ್ಲಿ ತಾಯಿ, ಅವಳ ಬಂಧು ಮತ್ತು ಪೈಲೆಟ್ ಸತ್ತು ಬಿದ್ದಿರುವುದು ಕಾಣುತ್ತದೆ.

ಆದರೆ, ಇವರ ಜತೆಗಿದ್ದ ಆ ನಾಲ್ಕು ಮಕ್ಕಳು ಎಲ್ಲಿ? ದೊಡ್ಡವರು ಸತ್ತು, ಹೆಣವಾಗಿರುವಾಗ ಅವರೊಂದಿಗಿದ್ದ ಪುಟಾಣಿಗಳೆಲ್ಲಿ..? ಅವರ ಮೃತದೇಹಗಳಾದರೂ ಕಾಣಬೇಕಲ್ಲ.. ಇದೇ ಪ್ರಶ್ನೆ ಮುಂದಿಟ್ಟುಕೊAಡು ಸೈನಿಕರು ಕಾಡು ಜಾಲಾಡತೊಡಗುತ್ತಾರೆ.

ವಿಮಾನ ಅಪಘಾತದಲ್ಲಿ ಅಮೆಜಾನ್ ಕಾಡಿನಲ್ಲಿ ನಿಗೂಢವಾಗಿ ಕಾಣೆಯಾದ ಮಕ್ಕಳಲ್ಲಿ ದೊಡ್ಡವಳಿಗೆ ೧೩ ವರ್ಷ. ಎರಡನೆಯವಳಿಗೆ ೯, ಮೂರನೆಯವಳು ೪ ವರ್ಷದ್ದು. ನಾಲ್ಕನೇ ಮಗು.. ಇನ್ನೂ ಒಂದು ವರ್ಷ ತುಂಬಿರದ ಕಂದಮ್ಮ! ದೊಡ್ಡವಳು ಐesಟಥಿ ಒuಛಿuಣuಥಿ, ಎರಡನೆಯವಳು Soಟeiಟಿಥಿ, ಮೂರನೆಯವಳು ಖಿieಟಿ ನಾಲ್ಕನೆಯವಳು ಅಡಿisಣiಟಿ.

ಮಕ್ಕಳಿಗಾಗಿ ಹುಡುಕಾಟ

ಕೊಲಂಬಿಯಾ ದೇಶ ಬೆಚ್ಚಿ ಬೀಳುತ್ತದೆ. ಸೇನೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರೂ ಮಕ್ಕಳ ಹುಡುಕಾಟಕ್ಕಾಗಿ ಸೇನೆಯ ಜತೆ ಕಾಡಿನಲ್ಲಿ ಅಲೆದಾಟ ಪ್ರಾರಂಭಿಸುತ್ತಾರೆ.

ಮಕ್ಕಳು ಜೀವಂತ ಇದ್ದಾರೆ ಎಂಬ ಬಲವಾದ ಸಂಶಯ ಸೈನಿಕರಲ್ಲಿರುತ್ತದೆ. ಹೀಗಾಗಿಯೇ ದಟ್ಟ ಕಾಡಿನಲ್ಲಿ ಸೈನಿಕರು ಮಕ್ಕಳಿಗಾಗಿ ಹುಡುಕಾಟ ಮುಂದುವರೆಸುತ್ತಾರೆ. ವಿಮಾನ ಅಪಘಾತವಾದ ಪ್ರದೇಶದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಸೇನಾ ಹೆಲಿಕಾಪ್ಟರ್ ಹಾರಾಟ ಕೈಗೊಂಡು ಹೆಲಿಕಾಪ್ಟರ್‌ನಿಂದ ಕಾಡಿನ ಅಲ್ಲಲ್ಲಿ ನೀರಿನ ಬಾಟಲಿ, ತಿಂಡಿಯ ಪೊಟ್ಟಣಗಳನ್ನು ಉದುರಿಸಲಾಗುತ್ತದೆ. ಇದರೊಂದಿಗೆ ಮತ್ತೊಂದು ಮಹತ್ವದ ಪ್ರಯತ್ನಕ್ಕೆ ಸೈನಿಕರು ಮುಂದಾಗುತ್ತಾರೆ. ಈ ಮಕ್ಕಳ ಅಜ್ಜಿ ಇದ್ದಾಳಲ್ಲ. ಅವರಿಂದ ಧ್ವನಿಮುದ್ರಣ ಮಾಡಿಸಲಾಗುತ್ತದೆ.

‘ಮಕ್ಕಳೇ ಹೆದರಬೇಡಿ.. ಕಾಡಿನಲ್ಲಿ ನಿಮ್ಮನ್ನು ಹುಡುಕಾಡುತ್ತಿದ್ದೇವೆ. ನೀರು ಕುಡಿಯುತ್ತಾ, ಹಣ್ಣು ತಿನ್ನುತ್ತಾ ಧೈರ್ಯದಿಂದಿರಿ ಮುದ್ದು ಮಕ್ಕಳೇ’ ಎಂಬ ಸಂದೇಶವನ್ನು ಆಗಿಂದಾಗ್ಗೆ ಹೆಲಿಕಾಪ್ಟರ್ ಮೂಲಕ ಜೋರಾಗಿ ಕಾಡಿನ ಮೇಲ್ಬದಿ ಸಾರಲಾಗುತ್ತದೆ. ಮಕ್ಕಳು ಈ ಸಂದೇಶ ಕೇಳಿ ಧೈರ್ಯ ಪಡೆದಾರು ಎಂಬ ನಂಬಿಕೆ ಸೈನ್ಯದ್ದಾಗಿರುತ್ತದೆ.

ಈ ಮಕ್ಕಳು ಮೂಲತಃ ಹುಯಿಟೋಟೊ ಎಂಬ ಬುಡಕಟ್ಟು ಸಮುದಾಯದವರು. ಆದಿವಾಸಿಗಳು ಅಥವಾ ಕಾಡಿನ ಮಕ್ಕಳು ಎನ್ನುತ್ತೇವಲ್ಲ ಅಂತಹ ಸಮುದಾಯದ ಮಕ್ಕಳಿವರು. ಈ ಜನಾಂಗಕ್ಕೆ ಕಾಡು ಎಂದರೆ ಹೆದರಿಕೆ ಇಲ್ಲ. ಹೀಗಾಗಿ ಮಕ್ಕಳು ಜೀವಂತವಾಗಿದ್ದರೂ ಹೇಗೋ ಕಾಡಿನಲ್ಲಿ ಇರುತ್ತಾರೆ ಎಂಬ ಪ್ರಬಲವಾದ ನಂಬಿಕೆ ಎಲ್ಲರಲ್ಲಿಯೂ ಇತ್ತು. ಆದರೂ, ಕಾಡು ಎಂದರೆ ಬರೀ ಮರ, ಗಿಡ, ಜಿಂಕೆ, ಮೊಲ ಮಾತ್ರ ಇರುವುದಲ್ಲವಲ್ಲ. ಹುಲಿ, ಚಿರತೆ, ಕಾಡೆಮ್ಮೆ, ಹಾವುಗಳು ಕೂಡ ಇಲ್ಲಿಯೇ ಇರುತ್ತದೆಯಲ್ಲ. ಇಂತಹವುಗಳಿಗೆ ಮಕ್ಕಳು ಆಹಾರವಾಗಿಬಿಡುತ್ತಾರೆ ಎಂಬ ಆತಂಕ ಕೊಲಂಬಿಯಾ ನಿವಾಸಿಗಳನ್ನು ಸಹಜವಾಗಿ ಕಾಡತೊಡಗಿತು.

ನೋಡನೋಡುತ್ತಲೇ... ವಿಮಾನ ದುರಂತ ನಡೆದು ೪೦ ದಿನಗಳೇ ಆಗಿಬಿಟ್ಟವು. ಮಕ್ಕಳು ಇಷ್ಟೂ ದಿನಗಳು ದಟ್ಟಡವಿಯಲ್ಲಿ ಜೀವಂತವಾಗಿರುವುದು ಅಸಾಧ್ಯ ಎಂಬ ನಂಬಿಕೆ ಜನತೆಯಲ್ಲಿ ಬೇರೂರತೊಡಗಿತು. ಬಹುಷ ಮಕ್ಕಳು ಕಾಡುಮೃಗಗಳಿಗೆ ಆಹಾರವಾಗಿರಬೇಕು ಎಂದು ಜನ ಭಾವಿಸಲಾರಂಭಿಸಿದರು.

ಅಷ್ಟರಲ್ಲಿಯೇ ಪವಾಡದಂತೆ .. ನಾಲ್ಕೂ ಹೆಣ್ಣು ಮಕ್ಕಳು ಪತ್ತೆಯಾದರು.. ಅದೂ ಜೀವಂತವಾಗಿ..!!ಭೀಕರ ವಿಮಾನ ದುರಂತದಲ್ಲಿ ಪುಟಾಣಿಗಳು ಜೀವಂತವಾಗಿ ಬದು ಕುಳಿದರು ಮಾತ್ರವಲ್ಲ... ಕಾಡಿನೊಳಗೆ ತಿರುಗಾಡಿಕೊಂಡು ವನ್ಯಮೃಗಗಳಿಂದ ಪಾರಾಗಿ, ಹಸಿವು ನೀಗಿಸಿಕೊಂಡು ಜೀವ ಉಳಿಸಿಕೊಂಡಿದ್ದರು. ಇದಕ್ಕಿಂತ ಪವಾಡ ಬೇರೇನಿದೆ ಎಂದು ಕೊಲಂಬಿಯಾ ದೇಶವೇ ನಿಬ್ಬೆರ ಗಾಯಿತು. ತಮ್ಮ ಮನೆಯ ಮಕ್ಕಳೇ ಸಿಕ್ಕಿದಷ್ಟು ಸಂಭ್ರಮ ಕೊಲಂಬಿಯಾ ನಿವಾಸಿಗಳಲ್ಲಿ ಮನೆ ಮಾಡಿತ್ತು.

ನೆನಪಿರಲಿ.. ಮೂರು ಮಕ್ಕಳು ಸ್ವಲ್ಪ ತಿಳುವಳಿಕೆ ಇರುವಂಥವು. ಆದರೆ ನಾಲ್ಕನೇಯದ್ದು ಇದೆಯಲ್ಲ. ಇನ್ನೂ ೧೨ ತಿಂಗಳು ತುಂಬದ ಪುಟ್ಟ ಮಗು ಅದು. ಆ ಕಂದಮ್ಮ ಕೂಡ ಜೀವ ಉಳಿಸಿಕೊಂಡಿತ್ತು. ಉಳಿದ ಮೂರು ಮಕ್ಕಳು ತಮ್ಮ ಕಿರಿಯ ತಮ್ಮನನ್ನು ಹೆಗಲೇರಿಸಿಕೊಂಡು ಕಾಡು ಸುತ್ತಿ ಜೀವ ಉಳಿಸಿಕೊಂಡಿದ್ದರು..!!

ಕೊಲAಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ಸೇರಿದಂತೆ ಸೇನಾಧಿಕಾರಿಗಳು ಮಕ್ಕಳು ಜೀವಂತವಾಗಿ ಸಿಕ್ಕಿದ ಫೋಟೋ ಕಂಡಾಕ್ಷಣ ಸಂತೋಷದಿAದ ನರ್ತಿಸಿದ್ದೂ ಆಯಿತು..

"ಖಿhese ಛಿhiಟಜಡಿeಟಿ ಚಿಡಿe ಣoಜಚಿಥಿ ಣhe ಛಿhiಟಜಡಿeಟಿ oಜಿ ಠಿeಚಿಛಿe ಚಿಟಿಜ ಣhe ಛಿhiಟಜಡಿeಟಿ oಜಿ ಅoಟombiಚಿ." ಅಂತ ಕೊಲಂಬಿಯಾ ದೇಶದ ಜನತೆ ಸಂಭ್ರಮಿಸಿದರು.

ಹೇಗೆ ಬದುಕಿದರು...?

ಎಲ್ಲಾ ಸರಿ... ಅಮೆಝಾನ್ ದಟ್ಟ ಕಾಡಿನೊಳಗೆ ಆ ನಾಲ್ಕು ಪುಟ್ಟ ಮಕ್ಕಳು ನಲುವತ್ತು ದಿನ ಹೇಗೆ ಬದುಕಿದರು? ಅದೇ ನೋಡಿ ಸ್ವಾರಸ್ಯ.. ವಿಮಾನ ಪತನಗೊಂಡ ಬಳಿಕ ನಾಲ್ಕೂ ಮಕ್ಕಳು ಅವಶೇಷಗಳಡಿಯಿಂದ ಎದ್ದು ಹೊರಗೆ ಬರುತ್ತಾರೆ. ಮಕ್ಕಳ ಪೈಕಿ ದೊಡ್ಡವಳು ಐesಟಥಿ ಒuಛಿuಣuಥಿ, ಮಹಾ ಜಾಣೆ. ಈಕೆಯ ಸಮಯ ಪ್ರಜ್ಞೆ ಮತ್ತು ಜ್ಞಾನದಿಂದಾಗಿಯೇ ಉಳಿದ ಮೂರೂ ಮಕ್ಕಳು ಜೀವ ಉಳಿಸಿಕೊಳ್ಳುತ್ತಾರೆ. ಅವಳು ವಿಮಾನದ ಪೆಟ್ಟಿಗೆಯಲ್ಲಿದ್ದ ಮರಗೆಣಸಿನ ಹಿಟ್ಟಿನ ಪೊಟ್ಟಣಗಳನ್ನು, ನೀರಿನ ಬಾಟಲಿಗಳನ್ನು, ಹಣ್ಣಿನ ಚೀಲವನ್ನು ಹೊರತೆಗೆದಳು. ಅಲ್ಲಿದ್ದ ಪುಟ್ಟ ಬ್ಯಾಗ್‌ಗೆ ತುಂಬಿಸಿಕೊAಡು ಬೆನ್ನಿಗೆ ಬ್ಯಾಗ್ ಸಿಲುಕಿಸಿಕೊಂಡಳು. ಮುಂದಿನ ೪೦ ದಿನಗಳು ಈ ಮಗುವೇ ಉಳಿದ ಮೂವರಿಗೆ ಹಗಲು-ರಾತ್ರಿ ತಾಯಿಯೇ ಆದಳು. ಹಸಿವಾದಾಗಲೆಲ್ಲಾ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರ ನೀಡುತ್ತಾ ಸಮತೋಲನ ಕಾಯ್ದುಕೊಂಡಳು.

ಯಾವಾಗ ಪೊಟ್ಟಣಗಳಲ್ಲಿದ್ದ ತಿಂಡಿಗಳು ಖಾಲಿ ಆದವೋ ಮಕ್ಕಳು ಕಾಡಿನೊಳಗೆ ಸಿಕ್ಕ ಹಣ್ಣುಗಳು, ಬೀಜಗಳನ್ನು ಆಯ್ದು ತಿನ್ನತೊಡಗಿದರು. ಅದೃಷ್ಟಕ್ಕೆ ಅಮೆಝಾನ್ ಕಾಡಿನಲ್ಲಿ ಹಣ್ಣುಗಳು ತುಂಬಿತುಳುಕುವ ಸಮಯವಿದು, ಅಮೆಜಾನ್ ಈ ಮಕ್ಕಳನ್ನು ನಿಜಕ್ಕೂ ಮಮತೆಯಿಂದ ಕಾಯಿತು.

ರಾಷ್ಟಿçÃಯ ಹಬ್ಬಾಚರಣೆ

ಇನ್ನೊಂದು ವಿಶೇಷ ಕೂಡ ನಡೆಯಿತು. ಈ ಮಕ್ಕಳು ಕಾಡಿನಲ್ಲಿ ಕಳೆದುಹೋದರಲ್ಲ. ಅಂತಹ ಒಂದು ದಿನ ಮೂರನೇವಯವಳ ಹುಟ್ಟು ಹಬ್ಬ ಕೂಡ ಇತ್ತು. ಅದೂ ಕಾಡಿನಲ್ಲಿಯೇ ಕಳೆದುಹೋಯಿತು. ಅಯ್ಯೋ.. ಅವಳದ್ದು ಒಬ್ಬಳದ್ದೇನೂ.. ನಮ್ಮ ದೇಶ ಈ ನಾಲ್ಕೂ ಮಕ್ಕಳ ಹುಟ್ಟು ಹಬ್ಬವನ್ನೂ ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸುತ್ತೇವೆ ಎಂದು ಕೊಲಂಬಿಯಾ ಅಧ್ಯಕ್ಷರು ಘೋಷಿಸಿದ್ದಾರೆ.

ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕಾಡಿನಲ್ಲಿ ಸೊಳ್ಳೆ, ಕೀಟಗಳು ಕಚ್ಚಿ ಮೈಕೈ ತುಂಬಾ ಕಜ್ಜಿಗಳಾಗಿವೆ. ಮೈ ಒಂದಿಷ್ಟು ಊದಿಕೊಂಡಿದೆ. ನಮಗೆ ಓದಲು ಪುಸ್ತಕ ಬೇಕು. ಚಾಕೋಲೇಟ್ ಕೊಡಿ ಅಂತೆಲ್ಲಾ ಪುಟಾಣಿಗಳು ಬೇಡಿಕೆ ಇರಿಸಿದ್ದಾರೆ.

ಒಂದು ತಿಂಗಳ ಕಾಲ ಮಿಲಿಟರಿ ಮತ್ತು ಆದಿವಾಸಿಗಳು ೧೬೫೦ ಕಿ.ಮೀ. ವಿಸ್ತೀರ್ಣದಷ್ಚು ಅರಣ್ಯ ಜಾಲಾಡಿದ್ದಾರೆ. ಆದರೆ, ವಿಮಾನ ಪತನಗೊಂಡ ಸ್ಥಳದಿಂದ ಐದು ಕಿಲೋಮೀಟರ್ ದೂರದಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ. ಇದು ಕೂಡ ವಿಸ್ಮಯದಂತಿದೆ.

ಹಾA.. ನೆನಪಿರಲಿ.. ಈ ಮಕ್ಕಳನ್ನು ಕೊನೆಗೂ ಹುಡುಕಿಕೊಟ್ಟದ್ದು ಸೇನಾ ಪಡೆಯ ಪರಿಣಿತ ಶ್ವಾನದಳ. ಕಾಡಿನೊಳಗೆ ಮಂಕಾಗಿ ಕುಳಿತಿದ್ದ ಮಕ್ಕಳನ್ನು ಶ್ವಾನಗಳು ಕಂಡು ಹುಡುಕಿದವು. ವಿಪರ್ಯಾಸ ಎಂದರೆ ಈ ಶ್ವಾನ ದಳದ ಪೈಕಿ ಒಂದು ಶ್ವಾನ ಕಾಡಿನಲ್ಲಿಯೇ ಕಳೆದುಹೋಗಿದೆ. ಅದನ್ನು ಮತ್ತೆ ಯಾರು ಪತ್ತೆ ಮಾಡುತ್ತಾರೆಯೋ? ಈ ೩೦ ದಿನಗಳ ಸೇನಾ ಕಾರ್ಯಾಚರಣೆಗೆ ಕೊಲಂಬಿಯಾ ಸೇನೆ ಇಟ್ಟ ಚಂದದ ಹೆಸರೇ.. ಔಠಿeಡಿಚಿಣioಟಿ ಊoಠಿe! ಎಷ್ಟು ಅರ್ಥಪೂರ್ಣ ಅಲ್ಲವೇ?

ಅಂದ ಹಾಗೆ... ನಿನಗೆ ದಟ್ಟ ಕಾಡಿನಲ್ಲಿ ಹೀಗೊಂದು ಸುತ್ತಾಡಲು ಇಷ್ಟು ಧೈರ್ಯ ಹೇಗೆ ಬಂತು ಎಂದು ದೊಡ್ಡವಳಾದ ಐesಟಥಿ ಒuಛಿuಣuಥಿಳನ್ನು ವೈದ್ಯರು ಕೇಳಿದರೆ ಆಕೆ ನೀಡಿದ ಉತ್ತರ..

ಚಿಕ್ಕಂದಿನಲ್ಲಿ ನನ್ನ ಅಮ್ಮ ಪರಿಸರದ ಕಥೆ ಹೇಳುತ್ತಿದ್ದಳು. ಅಲ್ಲಿ ಕಾಡು, ವನ್ಯ ಮೃಗಗಳ ಬಗ್ಗೆ ಮಾಹಿತಿ ಇರುತ್ತಿತ್ತು. ಕಾಡಿನೊಳಗೆ ಹೇಗೆ ಜೀವಿಸುತ್ತಾರೆ ಎಂಬುದನ್ನೂ ಅಮ್ಮ ಕಥೆಯ ಮೂಲಕ ಹೇಳಿಕೊಟ್ಟಿದ್ದಳು. ಅಮ್ಮ ಹೇಳುತ್ತಿದ್ದ ಕಥೆ ನೆನಪಾಗಿತ್ತು. ಅದನ್ನೇ ಯೋಚಿಸಿಕೊಂಡು ತಂಗಿಯರೊAದಿಗೆ ಕಾಡಿನಲ್ಲಿ ದಿನ ಕಳೆದೆ.

ಎಂಥ ಅದ್ಭುತ ಸಂದೇಶವಿದು..?!

ಆದರೆ, ಇಂತಹ ಕಥೆ ಹೇಳಿದ ಅಮ್ಮ ಮಾತ್ರ ವಿಮಾನದೊಂದಿಗೇ ಕಳೆದುಹೋಗಿದ್ದಾಳೆ.. ಅಮ್ಮನ ಕಥೆ ಮಾತ್ರ ಜೀವಂತವಾಗಿ.. ನಾಲ್ಕೂ ಮಕ್ಕಳ ಜೀವ ಉಳಿಸಿದೆ. ಗ್ರೇಟ್.. ವಿಶ್ವವೇ ಸಂಭ್ರಮಿಸಬೇಕಾದ ಘಟನೆಯಿದು.. ಹೌದಲ್ಲ?

- ಅನಿಲ್ ಎಚ್.ಟಿ.