ಮಡಿಕೇರಿ, ಜೂ.೧೪: ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋ ಜಿಸಿದ್ದ ‘ಸೆಲ್ಫಿ ಕಂಟೆಸ್ಟ್' ಸ್ಪರ್ಧೆ ವಿಜೇ ತರಿಗೆ ಬಹುಮಾನ ವಿತರಿಸಲಾಯಿತು.
ಮೇ ೧೦ ರಂದು ನಡೆದ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಂದು ಮತದಾನ ಮಾಡಿದ ಬಳಿಕ ಮತದಾನ ಕೇಂದ್ರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಕಳುಹಿಸುವಂತೆ ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಸ್ಪರ್ಧೆಯ ನಿಯಮಾನುಸಾರ ಸೆಲ್ಫಿ ಕಳುಹಿಸಿ ವಿಜೇತರಾದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವಿಜೇತರಿಗೆ ಜಿ.ಪಂ.ಸಿಇಓ ಡಾ. ಎಸ್.ಆಕಾಶ್ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಪ್ರಥಮ ಬಹುಮಾನವನ್ನು ಕಾರ್ಯಪ್ಪ, ದ್ವಿತೀಯ ಬಹುಮಾನ ವನ್ನು ಬಾನಂಡ ಆಶಾ ಸೂದನ್, ತೃತೀಯ ಬಹುಮಾನವನ್ನು ಗಿರಿ ಕುಮಾರ್ ಪಡೆದುಕೊಂಡರು. ಜಿ.ಪಂ. ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ತಾ.ಪಂ. ಇಓ ಅಪ್ಪಣ್ಣ ಇತರರು ಇದ್ದರು.