ಸೋಮವಾರಪೇಟೆ, ಜೂ. ೧೪: ಕಾಲೇಜು ವಿದ್ಯಾರ್ಥಿಗಳ ನಡುವೆ ಬಸ್ನಲ್ಲಿ ಏರ್ಪಟ್ಟ ಗಲಾಟೆಯೊಂದು, ಮಾದಾಪುರ ಪಟ್ಟಣದಲ್ಲಿ ಎರಡು ಗುಂಪಿನ ಯುವಕರ ನಡುವೆ ಪ್ರಕ್ಷುಬ್ಧತೆಗೆ ಕಾರಣವಾದ ಘಟನೆ ಇಂದು ಸಂಜೆ ೮ ರ ಸುಮಾರಿಗೆ ನಡೆದಿದೆ.
ಮಾದಾಪುರ ಸಮೀಪದ ಗರಗಂದೂರು ಚೆÀನ್ನಮ್ಮ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಒಂದು ಗುಂಪಿನ ವಿದ್ಯಾರ್ಥಿಗಳು ಮತ್ತೊಂದು ಗುಂಪಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಚಾರಿಸಲೆಂದು ಹಲ್ಲೆಗೊಳಗಾದ ವಿದ್ಯಾರ್ಥಿಯ ಸಂಬAಧಿಕರು ಕಾಲೇಜಿಗೆ ತೆರಳಿ ಉಪನ್ಯಾಸಕರೊಂದಿಗೆ ಮಾತುಕತೆ ನಡೆಸಿ, ಮುಂದೆ ಹೀಗಾಗದಂತೆ ಸೂಚಿಸಬೇಕೆಂದು ತಾಕೀತು ಮಾಡಿ ಬಂದಿದ್ದಾರೆ.
ಇದೇ ವಿಷಯಕ್ಕೆ ಸಂಬAಧಿಸಿದAತೆ ಸಂಜೆ ೮ ರ ಸುಮಾರಿಗೆ ಮಾದಾಪುರ ಪಟ್ಟಣದ ಆಟೋ ನಿಲ್ದಾಣಕ್ಕೆ ಆಗಮಿಸಿದ ಗುಂಪೊAದು ವಾಗ್ವಾದಕ್ಕಿಳಿದಿದ್ದು, ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದೆ ಎನ್ನಲಾಗಿದೆ. ಈ ಸಂದರ್ಭ ಎರಡು ಗುಂಪಿನ ಯುವಕರ ನಡುವೆ ಘರ್ಷಣೆ ಸಂಭವಿಸಿದೆ. ತಕ್ಷಣ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಗುಂಪು ಚದುರಿಸಿದ್ದಾರೆ. ಘಟನೆಯಿಂದ ಗಾಯಗೊಂಡ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.