ಮಡಿಕೇರಿ, ಜೂ. ೧೩: ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಯೋಜನೆಯನ್ನು ನೂತನ ಸರಕಾರ ಜಾರಿಗೊಳಿಸಿದ ಬಳಿಕ ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಡಿಪೋದ ೯೧ ಮಾರ್ಗಕ್ಕೆ ಸಂಬAಧಿಸಿದAತೆ ಎರಡು ದಿನದಲ್ಲಿ ೯೪೪೮ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಭಾನುವಾರ ಅಪರಾಹ್ನದಿಂದ ಉಚಿತ ಪ್ರಯಾಣ ಜಾರಿಯಾಗಿದ್ದು, ಮೊದಲ ದಿನ ೧೦೮೦ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದಿದ್ದಾರೆ. ತಾ.೨೧ರ ಸೋಮವಾರ ಮಾಹಿತಿಯಂತೆ ಮಡಿಕೇರಿ ಡಿಪೋದ ಮೂಲಕ ಕಾರ್ಯಾಚರಿಸುವ ೯೧ ಮಾರ್ಗಗಳಲ್ಲಿ ೮೩೬೮ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಒಟ್ಟು ಆದಾಯ ೩.೫೮ ಲಕ್ಷದಷ್ಟಾಗಿದ್ದು, ಈ ವಿವರವನ್ನು ಮೇಲ್ಮಟ್ಟಕ್ಕೆ ಕಳುಹಿಸಲಾಗಿದೆ. ಸರಕಾರ ನಿಗಮಕ್ಕೆ ಈ ಮೊತ್ತವನ್ನು ನೀಡಬೇಕಿರುವುದಾಗಿ ಡಿಪೋ ವ್ಯವಸ್ಥಾಪಕಿ ಗೀತಾ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಡಿಕೇರಿ ಘಟಕದ ಮೂಲಕ ಮಾತ್ರ ಕಾರ್ಯಾಚರಿಸುವ ಮಾರ್ಗಗಳ ವಿವರ ಇದಾಗಿದೆ. ಉಳಿದಂತೆ ಇತರ ಜಿಲ್ಲೆ, ವಿಭಾಗಗಳ ಮೂಲಕವೂ ಸುಮಾರು ೪೦೦ ರಿಂದ ೫೦೦ ಬಸ್‌ಗಳು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಈ ವಿವರ ಮಡಿಕೇರಿ ಡಿಪೋಕ್ಕೆ ಲಭ್ಯವಾಗುವುದಿಲ್ಲ.