ಸಿದ್ದಾಪುರ, ಜೂ. ೧೩: ಮಹಿಳೆಯೊಬ್ಬರು ಮಂಗಳವಾರ ಆಟೋರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಸಿದ್ದಾಪುರ ಸಮೀಪದ ನಡಿಕೇರಿಯಂಡ ತೋಟದ ಕಾರ್ಮಿಕ ಪ್ರಶಾಂತ್ ಎಂಬವರ ಪತ್ನಿ ತುಳಸಿ (೨೮) ಎಂಬವರೆ ಆಟೋರಿಕ್ಷಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದವರಾಗಿದ್ದಾರೆ.

ಪ್ರಶಾಂತ್ ಅವರ ಸಂಬAಧಿಯೊಬ್ಬರು ಸಾವನ್ನಪ್ಪಿದ್ದರಿಂದ ಪಕ್ಕದ ಮನೆಯ ಇಬ್ಬರು ಮಹಿಳೆಯರಿಗೆ ತನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳುವಂತೆ ಹೇಳಿ ಮಂಗಳವಾರ ಬೆಳಿಗ್ಗೆ ಪ್ರಶಾಂತ್ ಸಂಬAಧಿ ಮನೆಗೆ ತೆರಳಿದ್ದರು. ಪ್ರಶಾಂತ್ ಮನೆಯಿಂದ ತೆರಳಿದ ಕೆಲವು ಸಮಯಗಳ ನಂತರ ತುಳಸಿಗೆ ಹೆರಿಗೆ ನೋವು ಪ್ರಾರಂಭವಾಗಿದೆ. ಕೂಡಲೇ ಗರ್ಭಿಣಿಯ ಜೊತೆಗಿದ್ದವರು ಆಟೋರಿಕ್ಷಾ ಮೂಲಕ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಿದ್ದAತೆ ತುಳಸಿ ಆಟೋರಿಕ್ಷಾದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ ಮತ್ತು ಮಗು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯವಾಗಿದ್ದಾರೆ.

ವರದಿ: ವಾಸು