ನಾಪೋಕ್ಲು, ಜೂ. ೧೩: ಶೌರ್ಯ ವಿಪತ್ತು ನಿರ್ವಹಣಾ ಘಟಕದ ನಾಪೋಕ್ಲು, ಮಡಿಕೇರಿ, ಮರಗೋಡು ಘಟಕಗಳ ಸಹಯೋಗದಲ್ಲಿ ತನಲ್ ಕೂರ್ಗ್ ನೆರಳಿನ ಮನೆ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ಶ್ರಮದಾನ ಮಾಡಿದರು.
೩ ತಂಡವನ್ನು ಮಾಡಿಕೊಂಡು ಒಂದು ತಂಡ ಮಳೆಗಾಲಕ್ಕೆ ಬೇಕಾಗುವ ಸೌದೆ ಕೆಲಸ, ಇನ್ನೊಂದು ತಂಡ ಆಶ್ರಮದ ಬದಿಯಲ್ಲಿ ಇದ್ದ ಬಿದಿರು ಮತ್ತು ಗಿಡಗಂಟಿ-ಕಾಡುಗಳನ್ನು ಕಡಿದು ಮಳೆಗಾಲಕ್ಕೆ ಯಾವುದೇ ತೊಂದರೆ ಆಗದಂತಹ ಕೆಲಸ, ಮತ್ತೊಂದು ತಂಡ ಆಶ್ರಮದ ಸುತ್ತು ಹೂಗಿಡ ಮತ್ತು ಹಣ್ಣಿನ ಗಿಡ ನೆಟ್ಟು ಸೇವೆಯನ್ನು ಮಾಡಿತು.
ಈ ಸಂದರ್ಭ ೩ ಶೌರ್ಯ ತಂಡದ ಸಂಯೋಜಕಿಯರಾದ ಮಮತಾ, ದಿವ್ಯ, ರೋಹಿಣಿ, ಸದಸ್ಯರಾದ ಲತಾ, ಗೀತಾ, ರಮ್ಯಾ, ಹರೀಶ್, ಸುನೀತಾ, ಸುಂದರಿ, ಐತಪ್ಪ, ಧನಂಜಯ, ಕುಮಾರ್, ರಮೇಶ್, ಭಾಸ್ಕರ, ತಾರಾಮಣಿ, ಲೀಲಾ ಶೇಷಮ್ಮ, ಪ್ರೇಮ, ಮುನೀರ್, ಹರಿ ಣಾಕ್ಷಿ, ದಿಲೀಶ್, ಶಂಕರ್, ಶರವಣ, ಉಮಾಲಕ್ಷಿö್ಮ, ಗೀತಾ, ಚಂದ್ರಕಲಾ, ಆಶಾ ಇನ್ನಿತರರು ಹಾಜರಿದ್ದರು.