ಸೋಮವಾರಪೇಟೆ, ಜೂ. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಗುಡ್ಡೆಹೊಸೂರು ವಲಯದ ಕೊಡಗರಹಳ್ಳಿ ಕಾರ್ಯ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮಡಿಕೇರಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂಗಪ್ಪ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾರ್ಯದರ್ಶಿ ರೂಬಿ, ಸೋಮವಾರಪೇಟೆ ತಾಲೂಕಿನ ಉದ್ಯೋಗ ಖಾತ್ರಿ ಉಪ ನಿರ್ದೇಶಕ ರವೀಶ್, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಕಾರ್ಯದರ್ಶಿ ಮಂಜುನಾಥ್, ಶಾಲೆಯ ಮುಖ್ಯೋಪಾಧ್ಯಾಯರಾದ ಭಾಗೀರಥಿ, ಯೋಜನೆಯ ವಲಯದ ಮೇಲ್ವಿಚಾರಕ ಯತೀಶ್, ಕೃಷಿ ಮೇಲ್ವಿಚಾರಕ ರಾಜಣ್ಣ, ೭ನೇ ಹೊಸಕೋಟೆ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಜರಿದ್ದರು.