ಪೊನ್ನಂಪೇಟೆ, ಜೂ. ೧೩: ಇದುವರೆಗೂ ಸೂಕ್ತ ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿರುವ ಜನಾಂಗದ ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಹ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನಿಯೋಗ ಶಾಸಕರನ್ನು ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿತು. ಇದುವರೆಗೂ ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿರುವ ಸಣ್ಣ ಸಣ್ಣ ಸಮುದಾಯಗಳನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಆದರೆ ಯಾವುದೇ ಜನಾಂಗದವರು ಸಮಾಜಘಾತುಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿ ನಂತರ ರಕ್ಷಣೆ ಬಯಸಿದರೆ ಸ್ವಪಕ್ಷದವರಾಗಿದ್ದರೂ ಅಂಥವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಮಂಥರ್ ತಿಳಿಸಿದರು.
ಜನಾಂಗದ ಸಾಮಾಜಿಕ ಅಭಿವೃದ್ಧಿಗೆ ಸಂಬAಧಿಸಿದAತೆ ಕೆಲವು ಬೇಡಿಕೆಗಳನ್ನು ಅಧ್ಯಕ್ಷ ಸೂಫಿ ಹಾಜಿ ಹಾಗೂ ಉಪಾಧ್ಯಕ್ಷ ಡಾ. ಎಂ. ಕುಂಞ ಅಬ್ದುಲ್ಲಾ ನೀಡಿದರು.
ನಿಯೋಗದಲ್ಲಿ ಸಂಸ್ಥೆಯ ಪೋಷಕರಾದ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಹಿರಿಯ ಉಪಾಧ್ಯಕ್ಷರಾದ ಆಲೀರ ಎ. ಅಹಮದ್ ಹಾಜಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ), ಕುವೆಂಡ ವೈ. ಆಲಿ, ಮೀತಲತಂಡ ಎಂ. ಇಸ್ಮಾಯಿಲ್, ಮಂಡೇಡ ಎ. ಮೊಯ್ದು, ಪುದಿಯಾಣೆರ ಎಂ. ಹನೀಫ್ ಮೊದಲಾದವರಿದ್ದರು.