ಸುಂಟಿಕೊಪ್ಪ, ಜೂ. ೧೪: ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಕಂಪೆನಿಯ ವತಿಯಿಂದ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಾದಾಪುರ ಗ್ರಾಮಗಳ ಜನರಿಗೆ ಪಡಿತರ ಕಿಟ್, ನೈರ್ಮಲ್ಯ ಕಿಟ್, ಶಿಕ್ಷಣ ಸಾಮಗ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭ ಸಿಸ್ಕೋ ಕಂಪೆನಿಯ ಬಾನಂಡ ಸಂಪತ್, ಜಾಗೃತಿ ಸಂಸ್ಥೆಯ ಕಣ್ಣನ್, ಶರಣ್, ನೋಯೇಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.