ಮಡಿಕೇರಿ, ಜೂ. ೧೩: ಮಡಿಕೇರಿಗೆ ಮುಂಗಾರು ಕಾಲಿಟ್ಟಂತಿದೆ. ಮೋಡ ವಾತಾವರಣ ದೊಂದಿಗೆ ಆಗಾಗ್ಗೆ ಮಳೆಯ ಸಿಂಚನವೂ ಆಗುತ್ತಿದೆ. ಮಳೆ ಶುರುವಾಗುತ್ತಿದ್ದಂತೆ ಎಂದಿನ ಸಂಪ್ರದಾಯದAತೆ ಮಡಿಕೇರಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳೂ ಆರಂಭವಾಗಿವೆ. ಪೆನ್ಷನ್ ಲೇನ್, ಗೌಳಿ ಬೀದಿ ರಸ್ತೆಗಳನ್ನುö ಡಾಂಬರು ಹಾಕಿ ದುರಸ್ತಿ ಮಾಡಲಾಗಿದ್ದು, ಕಾಮಗಾರಿಯ ಗುಣಮಟ್ಟ ಎರಡೇ ದಿನಗಳಲ್ಲಿ ಬಯಲಾಗಿದೆ, ರಸ್ತೆಯಲ್ಲಿ ನಡೆದಾಡಿದರೆ ಸಾಕು ಡಾಂಬರು ಪಾದುಕೆಯೊಂದಿಗೆ ಕಿತ್ತು ಬರುತ್ತಿದೆ..!

ಮಡಿಕೇರಿಯ ಪೆನ್ಷನ್ ಲೇನ್ ಹಾಗೂ ಗೌಳಿ ಬೀದಿಯಿಂದ ರಾಜಾಸೀಟ್‌ಗೆ ತೆರಳುವ ಹದಗೆಟ್ಟಿದ್ದ ರಸ್ತೆಗಳನ್ನು ಡಾಂಬರು ಹಾಕಿ ದುರಸ್ತಿ ಪಡಿಸಲಾಗಿದೆ. ಬೇಸಿಗೆಯಲ್ಲಿ ಯಾವದೇ ಕಾಮಗಾರಿಗಳನ್ನು ಕೈಗೊಳ್ಳದೆ ಇದೀಗ ಮಳೆಗಾಲ ಆರಂಭವಾಗುತ್ತಿದ್ದAತೆ ದಿಢೀರಾಗಿ ರಸ್ತೆಗಳಿಗೆ ಡಾಂಬರು ಸುರಿಯಲಾಗುತ್ತಿದ್ದು, ಕಾಮಗಾರಿ ಮುಗಿದ ಎರಡೇ ದಿನಗಳಲ್ಲಿ ರಸ್ತೆಗೆ ಹಾಕಿದ ಜೆಲ್ಲಿ ಕಲ್ಲುಗಳು ಪುಡಿ ಪುಡಿಯಾಗಿ ಕಿತ್ತು ಬರುತ್ತಿವೆ. ಮಡಿಕೇರಿಯಲ್ಲಿ ಕೈಗೊಳ್ಳಲಾಗಿದ್ದ ಬಹುತೇಕ ಕಾಮಗಾರಿಗಳನ್ನು ನೂತನ ಸರಕಾರ ಬಂದ ಬಳಿಕ ತಡೆ ಹಿಡಿಯಲಾಗಿತ್ತು. ಆದರೆ, ಇದೀಗ ಈ ವಿಭಾಗದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಇನ್ನೆರಡು ಮಳೆ ಬಂದಲ್ಲಿ ರಸ್ತೆಗೆ ಹಾಕಿರುವ ಡಾಂಬರು ಎಲ್ಲವೂ ಕಿತ್ತು ಬಂದು ಮಳೆ ನೀರಿನೊಂದಿಗೆ ಚರಂಡಿ ಸೇರಿ ನೀರಿಗೆ ಹೋಮ ಹಾಕಿದಂತಾಗುವದAತೂ ಖಂಡಿತಾ..! ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

-ಅನಿಲ್