ಸುಂಟಿಕೊಪ್ಪ, ಜೂ. ೧೪: ಕೊಡಗಿನ ಉಸ್ತುವಾರಿ ಸಚಿವರಾಗಿ ಆಗಮಿಸಿದ್ದ ಭೋಸರಾಜು ಅವರಿಗೆ ಸುಂಟಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಸುಂಟಿಕೊಪ್ಪ ಕಾರು ನಿಲ್ದಾಣದ ಬಳಿಯಲ್ಲಿ ಶಾಸಕ ಮಂಥರ್ ಗೌಡ ಹಾಗೂ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರು ಶಾಲು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ರಫೀಕ್ ಖಾನ್ ಮತ್ತಿತರು ಇದ್ದರು.