ಮಡಿಕೇರಿ, ಜೂ. ೧೪: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ವೀರಾಜಪೇಟೆಯಲ್ಲಿ ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲೆಯ ಹಿಂದೂ ಮಲಯಾಳಿ ಸಮಾಜ ಬಾಂಧವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ, ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಸಲಹೆಗಾರ, ಟಿ.ಆರ್. ವಾಸುದೇವ್, ಟಿ.ಕೆ. ಸುಧೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ವೀರಾಜಪೇಟೆ ಮಲಯಾಳಿ ಸಮಾಜದ ಅಧ್ಯಕ್ಷ ವಿನೂಪ್, ಪ್ರಮುಖರಾದ ಕೆ. ಬಾಬು, ಪಿ.ಡಿ. ಪ್ರಕಾಶ್, ಕೆ.ವಿ. ಸುಬ್ರಮಣಿ, ಶರಂತ್ ಕಾಂತ್, ಎನ್.ಕೆ. ಅಜೀಶ್ ಕುಮಾರ್, ಶಾಜು, ದಿನೇಶ್, ಉಣ್ಣಿ, ರಾಜೇಶ್, ಸುಮೇಶ್, ಸದಾನಂದ, ಅಶೋಕ್ ಕುಮಾರ್, ನಂದಾ ಹಾಗೂ ವಿವಿಧ ಭಾಗಗಳ ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳು ಇದ್ದರು.