ಗೋಣಿಕೊಪ್ಪ, ಜೂ. ೧೩: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯುಷ್ಮಾನ್ ಹೆಲ್ತ್ ಕಾರ್ಡ್ (ಅಭ) ಉಚಿತ ನೋಂದಣಿ ಕಾರ್ಯಕ್ರಮ ನಡೆಯಿತು. ಸುಮಾರು ೨೮೦ ಜನರು ನೋಂದಣಿ ಮಾಡಿಸಿಕೊಂಡರು. ಸಿಎಸ್‌ಸಿ-ವಿಎಲ್‌ಇ ಸೆಂಟರ್ ಕಾರ್ಯಕರ್ತರಾದ ಪಿ. ಜಿ. ಸಬಿತಾ, ಟಿ.ಆರ್. ಮನೋಜ್ ಕುಮಾರ್ ನಡೆಸಿಕೊಟ್ಟರು.
ಸಮಾಜದ ಅಧ್ಯಕ್ಷ ಅಮೃತ್ ರಾಜನ್, ಉಪಾಧ್ಯಕ್ಷರಾದ ಎಂ. ಎಸ್. ಸುಬ್ರಮಣಿ, ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ವಿ.ವಿ. ಅರುಣ್‌ಕುಮಾರ್, ಕಾರ್ಯದರ್ಶಿ ವಿ.ಎನ್. ರೀನಾ, ನಿರ್ದೇಶಕರಾದ ಶ್ರೀಜಾ ಪ್ರದೀಪ್, ಬಿಂದು ಶಾಜಿ, ಸೌಮ್ಯಕೃಷ್ಣ, ಶೈಲಾ ಮೋಹನ್ ಇತರರಿದ್ದರು.