ಎ.ಎಸ್ ಮುಸ್ತಫ ಸಿದ್ದಾಪುರ
ಸಿದ್ದಾಪುರ, ಜೂ. ೧೧ : ಹೃದಯ ಸಂಬAಧಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಯುವಕನೋರ್ವನ ಜೀವ ಉಳಿಸಲು ಸಹೃದಯ ಸಾವಿರಾರು ಮಂದಿ ಮುಂದಾಗುವ ಮೂಲಕ ಮಾನವೀಯತೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಯುವಕನ ಹೃದಯ ಕರಗುವ ವಿಡಿಯೋ ವನ್ನು ಒಂದೇ ದಿನ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಜತೆಗೆ ಯುವಕನ ಚಿಕಿತ್ಸಾ ವೆಚ್ಚವನ್ನು ಭರಿಸಲು ಮನವಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕನ ಹೃದಯ ಮರುಜೋಡಣೆ ಮಾಡಬೇಕಾಗಿದ್ದು, ಚಿಕಿತ್ಸೆಗೆ ಒಟ್ಟು ೨೫ಲಕ್ಷ ಹಣ ಬೇಕಾಗಿದೆ.
ಕೂಲಿ ಮಾಡುತ್ತಿದ್ದ ಸಿದ್ದಾಪುರದ ೩೭ರ ಅವಿವಾಹಿತ ಯುವಕ ಅಬ್ದುಲ್ ವಾಹಿದ್ ತನ್ನ ತಾಯಿ ಹಾಗೂ ಸಹೋದರರ ಜತೆಗೆ ವಾಸವಾಗಿದ್ದು, ಕಳೆದ ೧೨ ವರ್ಷಗಳಿಂದ ಹೃದಯ ಸಂಬAದಿ ಕಾಯಿಲೆಯಿಂದ ಬಳಲುತ್ತಿದ್ದು, ಆಗಿಂದಾಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ೯ ತಿಂಗಳ ಹಿಂದೆ ೨ ಲಕ್ಷ ವೆಚ್ಚ ಮಾಡಿ ಪೇಸ್ಮೇಕರ್ ಅಳವಡಿಸಲಾಗಿತ್ತು. ಆದರೆ ಕೇವಲ ೬ ತಿಂಗಳಲ್ಲಿ ಪೇಸ್ ಮೇಕರ್ ವಿಫಲವಾಯಿತು. ಬಳಿಕ ಆರೋಗ್ಯದಲ್ಲಿ ತೀವ್ರ ಏರುಪೇರಾಗಿರುವುದರಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಸುಧಾರಣೆ ಕಾಣಲಿಲ್ಲ. ಬಡ ಕುಟುಂಬ ಕಳೆದ ಮೂರು ತಿಂಗಳಲ್ಲಿ ೫ ಲಕ್ಷಕ್ಕೂ ಹೆಚ್ಚು ಹಣ ಆಸ್ಪತ್ರೆಗಳಲ್ಲಿ ಖರ್ಚು ಮಾಡಬೇಕಾಯಿತು. ಸ್ಥಳೀಯ ಕೆಲವು ಯುವಕರ ತಂಡ ಹಣ ಹೊಂದಿಸಲು ಒಂದಷ್ಟು ಸಹಾಯ ಮಾಡಿದ್ದರು. ಪರಿಸ್ಥಿತಿ ಕೈಮೀರಿದ್ದು ಯುವಕನ ಹೊಟ್ಟೆ ಉಬ್ಬರಿಸಿದ್ದು ಮೂತ್ರಕೋಶದಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಇದೀಗ ವಾಹಿದ್ ಮತ್ತೆ ಸುಧಾರಿಸಲು ಹೃದಯ ಮರುಜೋಡಣೆಯಿಂದ ಮಾತ್ರ ಸಾಧ್ಯ, ಇದಕ್ಕಾಗಿ ಕನಿಷ್ಟ ೨೫ ಲಕ್ಷ ರೂಪಾಯಿಗಳ ಅವಶ್ಯಕತೆ ಇದೆಯೆಂದು ಬೆಂಗಳೂರು ನಾರಾಯಣ ಹೃದಯಾಲಯದ ವೈದ್ಯರ ತಂಡ ತಿಳಿಸಿದೆ.
ಕಳೆದ ಮೂರು ತಿಂಗಳಿನಿAದ ಕಣ್ಣೀರಿನಲ್ಲಿ ದಿನ ದೂಡುತ್ತಿರುವ ಯುವಕನ ಕುಟುಂಬಕ್ಕೆ ಬಾರಿ ಮೊತ್ತದ ಹಣ ಕ್ರೋಢೀಕರಿಸಲು ತಂಡವೊAದು ಮುಂದಾಗಿದೆ. ನಾಪೋಕ್ಲುವಿನ ಜಾಬೀರ್ ನಿಜಾಮಿ ಹಾಗೂ ಫಯಾಜ್ ಮಡೂರು ವೀಡಿಯೋ ಮೂಲಕ ಸಾಮಾಜಿಕ ಜಾಲತಾಣವನ್ನು ಬಳಸಿ ಸಾರ್ವಜನಿಕರಲ್ಲಿ ನೆರವಿಗಾಗಿ ಮನವಿ ಮಾಡಿದ್ದಾರೆ. ಸೋಮವಾರ ಸಂಜೆ ಈ ಮನಕಲಕುವ ವೀಡಿಯೋ ಬಿಡುಗಡೆ ಮಾಡಿರುವ ತಂಡ ಯುವಕನ ಬ್ಯಾಂಕ್ ಖಾತೆ ಡಿಜಿಟಲ್ ಮೂಲಕ ಹಣ ವರ್ಗಾವಣೆ ಮಾಡಬಹುದಾದ ಮಾರ್ಗಗಳನ್ನು ಅನುಸರಿಸಿದೆ. ಸಾವಿರಾರು ಜನ ಜಾತಿ ಧರ್ಮವನ್ನು ಮೀರಿ ಯುವಕನ ಸಹಾಯಕ್ಕೆ ನಿಂತಿದ್ದಾರೆ.
ಸ್ಥಳೀಯ ಮಸೀದಿ ಸಮಿತಿಯ ಮುಖ್ಯಸ್ಥರು ಹಾಗೂ ಸ್ಥಳೀಯರ ಒಂದು ಸಮಿತಿಯ ನೇತೃತ್ವದಲ್ಲಿ ಯುವಕನ ಹೆಸರಿನಲ್ಲಿ ವೀರಾಜಪೇಟೆಯ ರಾಷ್ಟಿçÃಕೃತ ಬ್ಯಾಂಕ್ನಲ್ಲಿ ಖಾತೆ ತೆರೆದು ಹಣ ಕಳುಹಿಸುವವರು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ಖಾತೆಗೆ ಯುವಕನ ಚಿಕಿತ್ಸೆಗೆ ಅವಶ್ಯವಿರುವ ಹಣ ಜಮಾವಣೆಯಾದಕೂಡಲೇ ಖಾತೆಯನ್ನು ನಿಷ್ಕಿçಯಗೊಳಿಸುವ ಪ್ರಕ್ರಿಯೆಯನ್ನು ಮಾಡಲಾಗುವುದು ಹಾಗೂ ೧೦ ಲಕ್ಷ ಹೊಂದಿಕೆಯಾದ ಕೂಡಲೇ ಆಸ್ಪತ್ರೆಯಲ್ಲಿ ಈತನನ್ನು ದಾಖಲಿಸಲು ಸಾಧ್ಯ ಎಂದು ಸಮಿತಿಯ ನೇತೃತ್ವ ವಹಿಸಿರುವ ಅಸ್ಕರ್ ಮಾಹಿತಿ ನೀಡಿದರು.
ಕಳೆದ ೬ ತಿಂಗಳಿನಿAದ ಚಾರಿಟಿಯ ಮೂಲಕ ಬಡ ರೋಗಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಚಿಕಿತ್ಸೆಗೆ ಬೇಕಾಗಿರುವ ೨೫ ಲಕ್ಷ ಸಂಗ್ರಹವಾಗುವ ನಂಬಿಕೆಯಿದೆ ಎಂದು ನಾಪೋಕ್ಲುವಿನ ಚಾರಿಟಿ ಪ್ರಮುಖರಾದ ಜಾಬೀರ್ ನಿಜಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.