ಮಡಿಕೇರಿ, ಜೂ. ೧೧: ಕಾಂಗ್ರೆಸ್ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರನ್ನು ಮಡಿಕೇರಿಯ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೋಸರಾಜ್ ಮತ್ತು ಮಿಟ್ಟು ಚಂಗಪ್ಪ ಬಹಳ ವರ್ಷಗಳಿಂದ ಆಪ್ತರಾಗಿದ್ದು, ಇದೀಗ ಕೊಡಗು ಉಸ್ತುವಾರಿ ಸಚಿವರಾಗಿ ಆಗಮಿಸಿದ ಭೋಸರಾಜ್ ಅವರನ್ನು ಮಿಟ್ಟು ಚಂಗಪ್ಪ ಆತ್ಮೀಯವಾಗಿ ಸ್ವಾಗತಿಸಿದರು. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚಂದ್ರಮೌಳಿ ಹಾಜರಿದ್ದರು.