ಮಡಿಕೇರಿ, ಜೂ. ೧೧: ಹಾಕಿ ಇಂಡಿಯಾ ವತಿಯಿಂದ ಒಡಿಶಾದ ರಾರ್ಕೆಲಾದಲ್ಲಿ ತಾ.೧೨ರಿಂದ (ಇಂದಿನಿAದ) ಆರಂಭಗೊಳ್ಳಲಿರುವ ೧೩ನೇ ಜೂನಿಯರ್ ಮೆನ್ ನ್ಯಾಷನಲ್ ಚಾಂಪಿಯನ್‌ಶಿಪ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಹಲವರು ಸ್ಥಾನ ಪಡೆದಿದ್ದಾರೆ.

ತಂಡದ ನಾಯಕನಾಗಿ ಜಿಲ್ಲೆಯ ಬಿಪಿನ್ ಬಿ.ಆರ್ ಸೇರಿದಂತೆ ತರುಣ್ ಗಣಪತಿ ಕೆ.ಕೆ, ಉಜ್ವಲ್ ಅಪ್ಪಚ್ಚು ಪಿ.ಎಸ್, ವಚನ್ ಹೆಚ್.ಎ, ಮೋಕ್ಷಿತ್, ಲಿವಿನ್ ಸಿ.ಪಿ, ಆರ್ಯನ್ ಉತ್ತಪ್ಪ ಎಂ.ಟಿ, ಯಶಸ್ ಪೊನ್ನಪ್ಪ ಪಿ.ಡಿ, ಸಪನ್ ಅಯ್ಯಪ್ಪ ಹಾಗೂ ಧನುಷ್ ಕಾವೇರಪ್ಪ ತಂಡದಲ್ಲಿರುವ ಕೊಡಗಿನ ಆಟಗಾರರಾಗಿದ್ದಾರೆ. ಇವರುಗಳಲ್ಲದೆ ತಂಡದ ಕೋಚ್ ಆಗಿ ವಿ.ಎಸ್. ವಿನಯ್, ಕೆ.ಎಸ್. ಅಪ್ಪಣ್ಣ ಹಾಗೂ ಟೀಂ ಮೆಂಟರ್ ಆಗಿ ಎಸ್.ವಿ. ಸುನಿಲ್ ಕಾರ್ಯನಿರ್ವಹಿಸಲಿದ್ದು, ಇವರುಗಳೂ ಜಿಲ್ಲೆಯವರಾಗಿದ್ದಾರೆ.