ಮಡಿಕೇರಿ, ಜೂ. ೧೧: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿರುವ ಶಕ್ತಿ ಯೋಜನೆಗೆ ಜಿಲ್ಲೆಯಲ್ಲೂ ಚಾಲನೆ ದೊರೆಯಿತು.
ಸೋಮವಾರಪೇಟೆ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಪ್ರಪ್ರಥಮವಾಗಿ ಅನುಷ್ಠಾನಗೊಂಡ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಮಧ್ಯಾಹ್ನ ೧.೩೦ಕ್ಕೆ ಸೋಮವಾರಪೇಟೆಯಿಂದ ಮೈಸೂರು ಮಾರ್ಗವಾಗಿ ಮದ್ದೂರಿಗೆ ತೆರಳುವ ಸರ್ಕಾರಿ ಬಸ್‌ಗೆ ಮಹಿಳೆಯರು ಏರುವ ಮೂಲಕ, ಶಕ್ತಿ ಯೋಜನೆಯ ಫಲಾನುಭವಿಗಳಾದರು. ಇಂದಿನಿAದ ಸರ್ಕಾರಿ ಬಸ್‌ಗಳಲ್ಲಿ ನಮಗೆ ಉಚಿತ ಪ್ರಯಾಣ ಇರುವುದರಿಂದ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಮೈಸೂರಿನಲ್ಲಿರುವ ಮಗಳ ಮನೆಗೆ ಹೊರಟಿದ್ದ ಶಾಂತಳ್ಳಿ ಗ್ರಾಮದ ಸಾವಿತ್ರಿ ಅವರು ಹರ್ಷ ವ್ಯಕ್ತಪಡಿಸಿದರು.
ಶಕ್ತಿ ಯೋಜನೆಯಡಿ ಸೋಮವಾರಪೇಟೆಯಿಂದ ಹೊರಟ ಪ್ರಥಮ ಬಸ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸ್ವಾಗತ ಕೋರಿದರು. ನಗರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬೇಟು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್, ನಗರ ಕಾಂಗ್ರೆಸ್‌ನ ಜೇಕಬ್ ಸೈಮನ್, ಭುವನೇಂದ್ರ ಸೇರಿದಂತೆ ಇತರರು ಪಕ್ಷದ ಬಾವುಟವನ್ನಿಡಿದು ಮಹಿಳಾ ಪ್ರಯಾಣಿಕರಿಗೆ ಶುಭ ಕೋರಿದರು. ದೂರದ ಗ್ರಾಮೀಣ ಭಾಗದಿಂದ ಬಸ್ ನಿಲ್ದಾಣಕ್ಕೆ ೩ಐದನೇ ಪುಟಕ್ಕೆ