ಸಮ್ಯಕ್ಕೃತಮ್ ಸಂಸ್ಕೃತಮ್ ಎಂದರೆ ಚೆನ್ನಾಗಿ ಮೂಡಿರುವುದು. ಭಾಷೆಗಳಲ್ಲಿ ಮುಖ್ಯವಾದ, ಮಧುರವಾದ, ದಿವ್ಯವಾದ ಭಾಷೆ ಎಂದರೆ ಸಂಸ್ಕೃತ ಭಾಷೆ. ಸಂಸ್ಕೃತA ನಾಮ ದೈವೀವಾಕ್(ದೇವನಾಗರೀ).
‘‘ಭಾಷಾಸು ಮುಖ್ಯ ಮುಧುರಾ ದಿವ್ಯಾಗೀರ್ವಾಣ ಭಾರತೀ” ಈ ಭಾಷೆಯು ಎಲ್ಲಾ ಭಾಷೆಗಳಿಗಿಂತ ಪ್ರಾಚೀನ ಭಾಷೆಯಾಗಿದ್ದು. ಬಹಳ ಸತ್ವ ಪೂರ್ಣವಾದ ಮತ್ತು ಪರಿಪಕ್ವವಾದ ಭಾಷೆಯಾಗಿದೆ. ಎಲ್ಲಾ ಭಾಷೆ ಗಳಿಗೂ ಮಾತೃ ಭಾಷೆಯಾಗಿದೆ. ಇದು ವ್ಯಾಕರಣ ಬದ್ಧವಾಗಿ ರಚಿತವಾದ ಹಾಗೂ ಮನುಷ್ಯನಿಗೆ ಶೋಭೆಯನ್ನು ಉಂಟು ಮಾಡುವ ದೇವ ಭಾಷೆ ಯೆಂದು ಅನಾದಿಕಾಲದಿಂದ ಬೆಳೆದು ಬಂದ, ಸರಳವಾದ ರಸಭರಿತವಾದ ಶಬ್ಧಗಳಿಂದ ಸಕಲ ಶೃಂಗಾರಗಳಿAದ ಸುಶೋಭಿತವಾಗಿರುವ ಏಕತ್ವದಿಂದ ಅನೇಕತ್ವವನ್ನು ತೋರಿಸುವ ದಿವ್ಯ ಜ್ಞಾನವನ್ನು ನೀಡುವ ಭಾಷೆ ಯಾಗಿದೆ. ಸಂಸ್ಕೃತ ಪದಗಳು ಜ್ಞಾನ-ಅಂತರ್ಜ್ಞಾನವನ್ನು ತೋರಿಸು ತ್ತವೆ. ಅನೇಕ ಭಾಷೆಗಳಲ್ಲಿ ಶೇ. ೪೦ ರಿಂದ ೯೦ ರಷ್ಟು ಸಂಸ್ಕೃತ ಪದಗಳು ಇರುವುದನ್ನು ನಾವು ಕಾಣಬಹುದು. ಅಪಾರವಾದ ಜ್ಞಾನ, ವಿಜ್ಞಾನ, ಅಧ್ಯಾತ್ಮಿಕ ವಿಚಾರಗಳ ಹಾಗೂ ಉತ್ತಮ ಜನಜೀವನಕ್ಕೆ ಮಾರ್ಗದರ್ಶನ ವೀಯುತ್ತಾ ಸಕಲ ರೀತಿಯಿಂದಲೂ ಶುದ್ಧರಾಗಲಿಕ್ಕೆ ಅಮೃತವಾಣಿಯಾಗಿರು ವುದು ಸಂಸ್ಕೃತವಾಗಿದೆ. ಗ್ರೀಕ್, ರಶಿಯನ್, ದ್ರಾವಿಡ ಭಾಷೆಗಳಿಗೂ ಸಂಸ್ಕೃತಕ್ಕೂ ತುಂಬಾ ಸಾದೃಶ್ಯವುಂಟು. ಭಾರತೀಯ ಭಾಷೆಗಳು ಸಂಸ್ಕೃತದ ಮಕ್ಕಳಿದ್ದಂತೆ, ಯಾವ ಭಾರತೀಯ ಭಾಷೆಗೆ ನಿಂದನೆಯಾದರು ಅದು ಸಂಸ್ಕೃತ ಭಾಷೆಗೆ ನಿಂದಿಸಿದAತೆ. ಸಂಸ್ಕೃತ ಭಾಷೆ ನಾಶವಾದರೆ ಭಾರತೀಯ ಭಾಷೆಗಳೆಲ್ಲಾ ಅವನತಿ ಹೊಂದಿದAತಾಗುತ್ತದೆ.
ಮನುಕುಲದ ಉದ್ಧಾರಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅಪಾರ. ವೇದಗಳು, ಮಹಾಪುರಾಣಗಳು, ಸಾಹಿತ್ಯ ದರ್ಪಣಗಳು, ಗಣಿತ, ವಿಜ್ಞಾನದ ಸಾಧನೆಗಳು ವಿಶ್ವಕ್ಕೆ ದಿಕ್ಸೂಚಿಗಳಾಗಿವೆ. ನಮ್ಮ ರ್ಯ ಸಂಸ್ಕೃತಿಯ ಮೂಲಾಧಾರವಾದ ವೇದಜ್ಞಾನ ಸಂಸ್ಕೃತ ಭಾಷೆಯಲ್ಲಿಯೇ ಮೂಡಿದೆ. ವೇದಜ್ಞಾನವು ಪರಿಸರದ ವಿಕೋಪದಿಂದ ಅಂಧಕಾರದಲ್ಲಿ ಸಿಲುಕಿಕೊಂಡಿತ್ತು. ಆಗಿಂದಾಗ್ಗೆ ಜರುಗಿದ ಪರಕೀಯ ಆಕ್ರಮಣವು ಭಾರತೀಯರನ್ನು ಹೇಡಿಗಳನ್ನಾಗಿ ಮಾಡಿತು. ರಾಜಕೀಯ ದರ್ಪ, ಆಥಿüðಕ ಒತ್ತಡ ಮತ್ತು ಮೋಹಗೊಳಿಸುವ ಪರ ಧರ್ಮದ ಭಯಂಕರ ಅಲೆಗಳು ಪ್ರಾಚೀನವೂ, ಪವಿತ್ರವೂ, ಪ್ರಬುದ್ಧಮಾನವೂ ಆದ ಮೂಲ ಸಂಸ್ಕೃತಿ ಮತ್ತು ಭಾಷಾ ಸಾಹಿತ್ಯವನ್ನಷ್ಟೆ ಅಲ್ಲ, ಸಾಮಾಜಿಕ ಧಾರ್ಮಿಕ ವ್ಯವಸ್ಥೆಗಳನ್ನು ಬುಡಮೇಲು ಮಾಡಿದವು. ಅಧ್ಯಾತ್ಮಿಕ ಪವಿತ್ರದರ್ಶನ ತತ್ವಗಳು ಮೂಲೆ ಗುಂಪಾದವು. ಕಲಿಕೆಯ ಹೆಸರಿನಲ್ಲಿ ಸಮಾಜ ವ್ಯವಸ್ಥೆಗಳು ಕಲಬೆರಕೆಯಾದವು. ಸುವಿಚಾರ ಗಳೆಲ್ಲವೂ ಸಂಕೋಲೆಗಳಿAದ ಕಟ್ಟಲ್ಪಟ್ಟವು. ಸ್ವಾರ್ಥ ರಾಜಕೀಯದಾಹವು ಹೊಸದನ್ನುಕಾಣುತ್ತಲೇ ಹಸಿದ ಹೆಬ್ಬುಲಿಯಂತಾಗಿ ಕಬಳಿಸಲಾರಂಭಿಸಿತು. ಕ್ರಮೇಣವಾಗಿ ಕಾಡ್ಗಿಚ್ಚಿನಂತೆ ಹರಡುತ್ತಾ ಬಂದ ಪರಕೀಯ ಎಲ್ಲ ಪ್ರಭಾವವನ್ನು ತಡೆಯಲಿಕ್ಕಾಗಿ ಗೀತೆಯಲ್ಲಿ ಹೇಳಿದ್ದಂತೆ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ಎಂಬAತೆ ಅನೇಕ ಭಾರತದ ಮಹನೀಯರು ಭಾರತೀಯರಲ್ಲಿ ಶುದ್ಧ ಮತು ಪವಿತ್ರ ವಿಚಾರಗಳನ್ನು ತುಂಬಲಾರAಭಿಸಿ ದರು. ಕೇವಲ ಮಹನೀಯರ ಅವಿರತ ಪರಿಶ್ರಮದಿಂದ ಭಾರತವು ಜಾಗೃತಗೊಂಡು ದೇಶವು ರಾಜಕೀಯವಾಗಿ ಸ್ವತಂತ್ರ ಗಣರಾಜ್ಯವಾಯಿತು. ಆದರೆ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕೃತ ಭಾಷಾ ಬೆಳವಣಿಗೆ ಮುಂದುವರಿಯಲಿಲ್ಲ. ಹೀಗಾಗಿ ರಾಷ್ಟçದ ಆರ್ಥಿಕ ಸ್ವಾವಲಂಬನೆ, ಜ್ಞಾನ- ವಿಜ್ಞಾನದ ಪ್ರಚಂಡರೂಪ ಸಾಮಾಜಿಕ ಕ್ಷೇತ್ರದಲ್ಲಿ ಅನ್ಯರ ಪ್ರಭಾವ, ಧರ್ಮಾಚರಣೆಯಲ್ಲಿ ಹಸ್ತಕ್ಷ್ಷೇಪ ಮುಂತಾದ ಪಿಡುಗುಗಳನ್ನು ತಡೆಯಲು ಅಸಮರ್ಥತೆ ಉಂಟಾಯಿತು.
ನಾವು ಭಾರತೀಯರೆಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುವವರು ಈಗಲೂ ಅದನ್ನೇ ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಅನುಸರಿಸುತ್ತಿದ್ದೇವೆ. ಹೀಗಿರುವಾಗ ನಮ್ಮ ಪವಿತ್ರ ವಿಚಾರಗಳ, ಪ್ರಾಚೀನ ಪ್ರಭಾವಗಳ, ಆಧ್ಯಾತ್ಮಿಕ ಸಂಪತ್ತಿನ ಭಾಷೆಯಾದ ಸಂಸ್ಕೃತ ಬಗ್ಗೆ ಚಿಂತನೆ ಎಂದು ! ಸಾಮಾನ್ಯ ಜನರಿಂದ ಮಂತ್ರಿಗಳ ವರೆಗೂ, ಅಧ್ಯಯನದಿಂದ ಉಪಾಧ್ಯಾಯನದ ವರೆಗೂ, ಊಟ-ಬಟ್ಟೆ, ಉಡಿಗೆ-ತೊಡಿಗೆ, ಆವಾಸ-ನಿವಾಸ, ನಡೆ-ನುಡಿಗಳಲ್ಲೆಲ್ಲ ಹೊಸತನದ ಹೆಸರಿನಲ್ಲಿ ಕಲಬೆರಕೆ. ಮನೆಯ ಮೃಷ್ಟಾನ್ನ ಬೇಡ, ಪರರದ್ದು ಹಳಸಿದ್ದಾದರೂ ಚಿಂತೆಯಿಲ್ಲ ಸ್ವೀಕರಿಸ ಬೇಕೆನ್ನುವ ಮನೋಭಾವನೆ. ಹೀಗೆ ಪ್ರತಿಯೊಂದು ದೃಷ್ಠಿಯಲ್ಲೂ ಹೆಜ್ಜೆ ಹೆಜ್ಜೆಗೂ ಭಾರತೀ ಭಾವನೆಗಳು ಆಕ್ರಮಣಕ್ಕೊಳ ಗಾಗುತ್ತಿವೆ. ಇಂತಹ ವ್ಯಾಮೋಹಕ್ಕೆ ಸ್ವಾರ್ಥ ಮನೋಭಾವವು ತಿಮಿಂಗಿಲದAತೆ ಜನಜೀವನವನ್ನೇ ನಂಗುತ್ತಿದೆ. ಗ್ರಂಥಗಳಲ್ಲಿ ಮೊಟ್ಟ ಮೊದಲು ಪ್ರಚಾರವಾದ ಗ್ರಂಥಗಳೆAದರೆ ವೇದ. ಇವುಗಳನ್ನು ಪವಿತ್ರ ಗ್ರಂಥಗಳೆAದು ಪೂಜ್ಯಭಾವದಿಂದ ನೋಡುತ್ತೇವೆ. ಆದರೆ ಇವು ಸಂಸ್ಕೃತ ಭಾಷೆಯಲ್ಲಿರುವುದರಿಂದ ದೇವಸ್ಥಾನದಲ್ಲಿ ಸ್ಥಾಪಿತ ಮೂರ್ತಿಯಾಗಿ ಬಿಟ್ಟಿವೆ. ವೇದಾಂತಗಳು ಉತ್ಸವ ಮೂರ್ತಿಗಳಾಗಿ ಶೋಭಾಯಮಾನವಾಗಿ ಬಿಟ್ಟಿವೆ. ಇಂತಹ ವಿಚಾರಗಳನ್ನು ಮಂಥಿಸಲು ಸಂಸ್ಕೃತ ಭಾಷೆಯ ಅರಿವು ಬೇಕಾಗಿದೆ. ಸಂಸ್ಕೃತ ವಿದ್ಯಾಲಯಗಳು, ಸಂಸ್ಕೃತ ಭಾಷೆಯ ಪ್ರಚಾರ ಕೇಂದ್ರಗಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಜನ ಸಾಮಾನ್ಯರನ್ನು ತಲಪುವುದು ಕಷ್ಟಕರ ಸಂಗತಿಯಾಗಿದೆ. ಅಮೋಘ ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತç, ವೈದ್ಯಕೀಯ, ತಾಂತ್ರಿಕತೆ, ಪರಿಸರ, ಮಾನವೀಯ ಮೌಲ್ಯಗಳು ಸಂವೃದ್ಧಿಭರಿತವಾಗಿ ಸಂಸ್ಕೃತದಲ್ಲಿ ನಮ್ಮ ಪೂರ್ವಜರು ಬರೆದಿದ್ದಾರೆ. ಸುಲಭ ವಾಗಿ ಸಿಗುವ ಹಣ್ಣನ್ನು ಬಿಟ್ಟು ನಾವು, ಪರಕೀಯರು ನೀಡುವ ಹಣ್ಣಿನ ಕವಾಟಕ್ಕೆ ಕೈಚಾಚುತ್ತಿದ್ದೇವೆ. ವ್ಯಾಸ, ವಾಲ್ಮೀಕಿ, ಭಟ್ಟಾರಕ ಬಾಣ, ಭಿಕ್ಷÄ, ಭೀಮಸೇನ, ಕಾಳಿದಾಸ, ಕೃತವರ್ಮ, ಶಂಕರ, ಮಧ್ವಾಚಾರ್ಯ, ರಾಮಾನುಜ, ಚರಕ ಮುಂತಾದವರು ಸಂಸ್ಕೃತಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ನಾವುಗಳು ಇಂದು ಸದುಪಯೋಗಮಾಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ವಿಚಾರ ಮಂಥನವಾಗಬೇಕಾಗಿದೆ. ವಿದೇಶಿಯರು ಸಂಸ್ಕೃತವನ್ನು ಅಭ್ಯಾಸ ಮಾಡಿ ನಮ್ಮ ಉದ್ಗçಂಥಗಳನ್ನು ಓದಿ ಅರ್ಥೈಸಿ ಕೊಂಡು ಅದರಲ್ಲಿರುವ ಅಮೋಘ ವಿಜ್ಞಾನದ ಕೊಡುಗೆಯನ್ನು ತಾವುಗಳು ಆವಿಷ್ಕಾರ ಮಾಡಿದ್ದೇವೆಂದು ಹೇಳುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಉದಾಹರಣೆಗ ಹೇಳುವುದಾದರೆ ಶಸ್ತçಚಿಕಿತ್ಸೆ, ಮೋಡ ಬಿತ್ತನೆ, ವಿಮಾನ ಪರಿಕಲ್ಪನೆ, ಪ್ರನಾಳ ಶಿಶು, ಖಗೋಳ ಅಭ್ಯಾಸ ಇತ್ಯಾದಿ.
ಸಂಸ್ಕೃತ ಭಾಷೆಯ ಪರಿಪೂರ್ಣ ಜ್ಞಾನವು ಶಬ್ದಾರ್ಥದ ತಿಳುವಳಿಕೆ ಯಿಂದ ಗೊತ್ತಾಗುತ್ತದೆ. ಧಾತುವಿನಲ್ಲಿ ಪ್ರತ್ಯಯ ಅಥವಾ ಉಪಸರ್ಗವನ್ನು ಕೂಡಿಕೊಂಡಾಗ ಮಾತ್ರ ಅವು ಶಬ್ಧವಾಗುತ್ತದೆ. ಅಂದರೆ ಧಾತುವಿನ ಮೂಲಾರ್ಥವೇ ಶಬ್ದ ಮೂಲಾರ್ಥವಾಗಿರುತ್ತದೆ. ಉಪಸರ್ಗವನ್ನು ಸೇರಿಸಿ ದರೆ ಅದು ನಿಯಮಿತವಾಗಿ ಪ್ರತ್ಯಯದ ಮೂಲಕ ಸುಸಂಸ್ಕೃತವಾಗುತ್ತದೆ. ಹೀಗೆ ಕೂಡಿಕೊಂಡಾಗ ಮೇಲೆ ಲಿಂಗ, ವಚನ ಮತ್ತು ವಿಭಕ್ತಿ ಸಂಪರ್ಕಿತವಾಗಿ ಪ್ರಕಟವಾಗುತ್ತÀದೆ. ಉದಾಹರಣೆಗೆ ಶರೀರ-ಶರೀರ ಶಬ್ದವು ಶು (ನಷ್ಟ) ಎಂಬ ಧಾತುವಿನಿಂದ ಉಂಟಾಗಿದೆ. ಶರೀರವು ನಷ್ಟವಾಗುತ್ತಲೇ ಇರುತ್ತದೆ. ದಿನದಿನವೂ ನಷ್ಟಾಗುವುದನ್ನೇ ಶರೀರವೆನ್ನು ತ್ತೇವೆ. ಅನ್ನ-ಅದ್ (ತಿನ್ನು) ಎಂಬ ಧಾತುವಿನಿಂದ ಅನ್ನ ಶಬ್ದ ಉಂಟಾಗಿದೆ. ಅಂದರೆ ಯಾವುದನ್ನು ತಿನ್ನುವೆವೋ ಅದೇ ಅನ್ನ ಎನಿಸಿಕೊಳ್ಳುವುದು. ಸಂಸ್ಕೃತ ಭಾಷೆಯಲ್ಲಿ ಒಂದೇ ಶಬ್ದದ ಅನೇಕ ಹೆಸರುಗಳಿರುವುದನ್ನು ಅವಶ್ಯಕವಾಗಿ ತಿಳಿದುಕೊಳ್ಳಬೇಕು.
ಅಮರಕೋಶ: ‘ಅಷ್ಟಾಧ್ಯಾಯೀಜಗನ್ಮಾತಾ ಮರಕೋಶೋಜಗ್ ಪಿತಾ‘ಕೋಶವಾನ್ ಆಚಾರ್ಯ:’ ಎಂಬAತೆ ಕೋಶಜ್ಞಾನವು ಸಂಸ್ಕೃತ ಭಾಷಾ ಜ್ಞಾನಕ್ಕೆ ಅತ್ಯವಶ್ಯಕ. ಅಮರಸಿಂಹ ರಚಿತವಾದ ಈ ನಾಮಲಿಂಗಾನುಶಾಸನ ಕೋಶವು ಗ್ರಂಥಕಾರನ ಹೆಸರಿನಿಂದ ಅಮರಕೋಶವೆಂದೇ ಪ್ರಸಿದ್ಧವಾಗಿದೆ. ಇದರಲ್ಲಿ ಒಟ್ಟು ಮೂರು ಕಾಂಡಗಳಿದ್ದು ಸರಿಸುಮಾರು ೮೦೦೦ ನಾಮಪದಗಳಿವೆ. ಸಂಸ್ಕೃತ ಭಾಷೆಯ ಹೊರತು ಬೇರಾವ ಭಾಷೆಯಲ್ಲಿ ಈ ರೀತಿಯ ಪದ್ಯರೂಪವಾದ ಕೋಶವಿರುವುದಿಲ್ಲ. ಉದಾ ಪೃಥ್ವೀ: - ಗೋವು, ರಮೆ, ಜ್ಮಾ, ಕ್ಷಾö್ಮ, ಕ್ಷಮಾ, ಕ್ಷೆÆÃಣಿ, ಕ್ಷಿತಿ:, ಅವನಿ:, ಉರ್ವಿ,ಮಹೀರಿಪ:, ಪೃಥ್ವೀಅದಿತಿ:, ಇಳಾ, ನಿಋತಿ:, ಭೂ:, ಭೂಮಿ: , ಪೂಷಾ, ಗಾತು, ಗೋತ್ರಾ (೨೧ ಹೆಸರು ಗಳಿವೆ) ಸಂಸ್ಕೃತದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಬಹಳ ಸಮಯೋಚಿತವಾಗಿ ಮೂಡಿ ಬರುತ್ತವೆ. ಮನಸ್ಸಿಗೆ ಸಂತೋಷವನ್ನು ನೀಡುವ, ಮನಸ್ಸಿನ ದು:ಖ ದುಮ್ಮಾನಗಳನ್ನು ಹೋಗಲಾಡಿಸುವಂತ ಸನ್ನಿವೇಶಗಳು ಮೌಲ್ಯತೆಯುಳ್ಳ ಅಂಶಗಳು ಬಹಳವಾಗಿ ಬಳಸಲಾಗುತ್ತದೆ. ಯಾವುದೇ ವಿಚಾರವನ್ನು ಮಂಥಿಸುವಾಗ ಅದು ನಮ್ಮ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ವಿಷಯಗಳನ್ನು ನೀಡುತ್ತೇವೆಯೇ ಎಂಬುದು ಮುಖ್ಯವಾಗಿದೆ. ಸಂಸ್ಕೃತದಲ್ಲಿ ಇಂತಹ ಸನ್ನಿವೇಶಗಳು ಹೆಜ್ಜೆ-ಹೆಜ್ಜೆಗೂ ಸಿಗುತ್ತದೆ. ಒಂದು ಪ್ರಾರ್ಥನೆ ಶ್ಲೋಕವನ್ನು ತೆಗೆದುಕೊಂಡರೆ
ಪಾಯಾತ್ಕುಮಾರಜನಕ:ಶಶಿಖAಡಮೌಳಿ | ಶಂಖಪ್ರಹಶ್ಚನಿಧನಶ್ಚಗವೀಶಯಾನ: ||
ಗಂಗಾAಚಪನ್ನಗಧರಶ್ಛಉಮಾವಿಲಾಸ:ಆಧ್ಯಕ್ಷರೇಣ
ಸಹಿತೋರಹಿತೋದೇವ: ||
ಈ ಶ್ಲೋಕದಲ್ಲಿ “ಹರ-ಹರಿ” ಇವರೀರ್ವರ ಸ್ತುತಿಯನ್ನು ಮಾಡಲಾಗಿದೆ. ಗೆರೆ ಎಳೆದಿರುವ ಪದಗಳ ಅರ್ಥವನ್ನು ಪ್ರಾರ್ಥಿಸಿದರೆ ಅದು ಶಿವನ ಪ್ರಾರ್ಥನೆಯಾಗುತ್ತದೆ.
“ಷಣ್ಮುಖನ ತಂದೆಯಾದ, ಚಂದ್ರನನ್ನು ಧರಿಸಿರುವ, ಶಂಖದ ಬಣ್ಣವನ್ನು ಹೊಂದಿರುವ, ಲಯಕರ್ತನಾದ ಅಥವಾ ಹಣವಿಲ್ಲದ ಎತ್ತನ್ನು ವಾಹನ ವನ್ನಾಗಿ, ಗಂಗೆಯನ್ನು ಪಡೆದಿರುವ ಹಾವನ್ನು ಧರಿಸಿರುವ ಮತ್ತು ಉಮೆ ಯೊಂದಿಗೆ ಸಂತೋಷದಿAದಿರುವ ಶಿವನೇ ನಮ್ಮನ್ನು ಕಾಪಾಡು”. ಗೆರೆ ಎಳೆದಿರುವ ಪದಗಳ ಮೊದಲ ಅಕ್ಷರವನ್ನು ಬಿಟ್ಟು ಅರ್ಥವನ್ನು ಪ್ರಾರ್ಥಿಸಿದರೆ ಅದು ವಿಷ್ಣುವಿನ ಪ್ರಾರ್ಥನೆಯಾಗುತ್ತದೆ.
“ಮನ್ಮಥನ ತಂದೆಯಾದ, ನವಿಲುಗರಿಯನ್ನು ಜಟೆಯಲ್ಲಿ ಧರಿಸಿರುವ, ಆಕಾಶದ ಬಣ್ಣವುಳ್ಳ, ಹಣವುಳ್ಳ, ಗರುಡನನ್ನು ವಾಹನವನ್ನಾಗಿ, ಗೋವು ಗಳನ್ನು ಸಲುಹಿದ, ಗೋವರ್ಧನಗಿರಿಯನ್ನು ಎತ್ತಿಕೊಂಡಿರುವ ಮತ್ತು ಲಕ್ಷಿö್ಮಯೊಂದಿಗೆ ಸಂತೋಷದಿAದಿರುವ ವಿಷ್ಣುವೇ (ನಮ್ಮನ್ನು) ಕಾಪಾಡು. ಇಂತಹ ವಿಶೇಷತೆ ಬೇರೆಯಾವ ಭಾಷೆಯಲ್ಲೂ ಇಲ್ಲ. ಸಂಸ್ಕೃತದಲ್ಲಿ ಹ್ಯಾಸದಲ್ಲೂ ಮೌಲ್ಯಗಳನ್ನು ಕಾಣುತ್ತೇವೆ. ಸಾಮಾನ್ಯವಾಗಿ ಗಣಿತ ಎಲ್ಲಾ ಮಕ್ಕಳಿಗೂ ತಲೆನೋವು ತರಿಸುತ್ತದೆ. ಆದರೆ ಲೆಕ್ಕಗಳನ್ನು ಹೇಳುವಾಗ ನಗುವಿನೊಡನೆ ತಿಳಿಸಿದರೆ ಮಕ್ಕಳಿಗೆ ಸುಲಭವಾಗುತ್ತದೆ.
ಎಕೋನ ವಿಂಶತಿ ಸ್ತಿçà ಸ್ನಾನಾರ್ಥಂ ಸರಯೂಗತಾ |
ವಿಂಶತಿ ಪುನರಾಯಾತಾ ಏಕೋ ವ್ಯಾಘ್ರೇಣ ಭಕ್ಷಿತ: ||
೧೯ ಮಂದಿ ಸ್ತಿçÃಯರು ಸ್ನಾನಕ್ಕಾಗಿ ಸರಯೂ ನದಿಯ ಬಳಿಗೆ ಹೋದರು, ಅಲ್ಲಿ ಹುಲಿಯಿಂದ ಒಬ್ಬಳು ತಿನ್ನಲ್ಪಟ್ಟರೂ ೨೦ ಮಂದಿ ಪುನ: ಹಿಂತಿರುಗಿ ಬಂದರು.” ಈ ಲೆಕ್ಕವನ್ನು ಕೇಳಿದರೆ ಸ್ವಲ್ಪ ಕಸಿವಿಸಿಯಾಗು ತ್ತದೆ. ಎಲ್ಲರ ಉತ್ತರ ೧೮ ಮಂದಿ ಬರುತ್ತಾರೆ ಎಂದು ಹೇಳುತ್ತಾರೆ. ಅದು ಸಹಜವಾಗಿರುವ ಉತ್ತರ. ಆದರೆ ಲೆಕ್ಕದಲ್ಲಿರುವ ಏಕೋನ ಎಂಬ ಶಬ್ದವನ್ನು “ಏಕ: ನ ಎಂದು ಬಿಡಿಸಿಕೊಂಡರೆ ಒಬ್ಬ ಪುರುಷ ವಿಂಶತಿ ಎಂದರೆೆ ೨೦ ಮಂದಿ ಸ್ತಿçÃಯರು ಸ್ನಾನಕ್ಕಾಗಿ ಸರಯೂ ನದಿಗೆ ಹೋದರು. ಅಲ್ಲಿ ಹುಲಿಯಿಂದ ಪುರುಷನು ತಿನ್ನಲ್ಪಟ್ಟನು. ಉಳಿದ ಇಪ್ಪತ್ತು ಸ್ತಿçÃಯರು ಹಿಂತಿರುಗಿ ಬಂದರು ಎಂದು ಅರ್ಥೈಸುತ್ತದೆ.
ಹೀಗೆ ಬಹಳ ಕಠಿಣವಾದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಸುವಂತ ಸಂತೋಷ ದಾಯಕವಾದ ಚಮತ್ಕಾರ ನಮ್ಮ ಸಂಸ್ಕೃತ ಭಾಷೆಯಲ್ಲಿವೆ. ಇಂತಹ ಸತ್ವಭರಿತವಾದ ಸಂಸ್ಕೃತ ಭಾಷೆಯನ್ನು ನಾವುಗಳು ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಉಳಿಸಿ ಬೆಳೆಸಬೇಕಾಗುತ್ತದೆ. ಸಂಸ್ಕೃತವು ಆಧುನಿಕ ಭಾರತದ ಭಾಷೆಯಾಗ ಬೇಕು ಎಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಆಶಯವಾಗಿತ್ತು. ದಿನನಿತ್ಯ ಮನೆ, ದೇವಸ್ಥಾನಗಳಲ್ಲಿ ನಾವುಗಳು ಮಂತ್ರ, ಸ್ತೋತ್ರಗಳನ್ನು ಪಠಣ ಮಾಡುತ್ತಿದ್ದೇವೆ. ಆದರೆ ಅದರಲ್ಲಿರುವ ಅರ್ಥವನ್ನು ಅರ್ಥೈಸಿಕೊಳ್ಳಲಾಗದೆ ನಾವೇ ಮೂಢತ್ವವನ್ನು ಬೆಳಸುತ್ತಿದ್ದೇವೆ. ಅರ್ಥ ತಿಳಿದು ಅಭ್ಯಾಸ ಮಾಡುವುದರಿಂದ ಅದರ ಪ್ರಯೋಜನ ಸಾರ್ಥಕವಾಗುತ್ತದೆ. ಹೀಗಿರುವಾಗ ಅದರ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಮೂಡಿಸಲು ಪ್ರಚಾರ ಕೇಂದ್ರಗಳು, ವಿಶ್ವವಿದ್ಯಾಲಯಗಳು, ಸಂಘ-ಸAಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ಮುಂದಾಗಬೇಕಾಗಿದೆ. ಸರ್ಕಾರವು ನಮ್ಮ ಪ್ರಾಚೀನ ಭಾಷೆಯ ಅವನತಿಯನ್ನು ತಡೆಯಲು ಕಾರ್ಯಪ್ರವೃತ್ತರಾಗ ಬೇಕಾಗಿದೆ.
-ಶ್ರೀನಾಥ ಜಿ., ಶಿಕ್ಷಕರು
ಸರ್ಕಾರಿ ಇಂಜಿನಿಯರಿAಗ್ ಕಾಲೇಜು,
ಕುಶಾಲನಗರ,
ಮೊ :೯೪೪೮೬೬೧೪೭೦