ಸುಂಟಿಕೊಪ್ಪ, ಜೂ. ೧೦: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗದ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ೪ ಕಡೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಕಂಬಕ್ಕೆ ಬಳ್ಳಿಯೊಂದು ಹಬ್ಬಿ ವಿದ್ಯುತ್ ತಂತಿಯನ್ನು ಆವರಿಸಿದೆ. ರಾಷ್ಟಿçÃಯ ಹೆದ್ದಾರಿ ಯಿಂದ ಗುಡ್ಡಪ್ಪ ರೈ ಬಡಾವಣೆ, ಒಂದನೇ ವಿಭಾಗ ಮತ್ತು ನಾಕೂರು -ಶಿರಂಗಾಲಕ್ಕೆ ಸಂಪರ್ಕ ರಸ್ತೆಯಲ್ಲಿ ಈ ಕಂಬವಿದ್ದು, ಸಾರ್ವಜನಿಕರು ಶಾಲಾ ಮಕ್ಕಳು ಈ ಕಂಬದ ಸಮೀಪ ಹಾದು ಹೋಗುತ್ತಾರೆ. ಇದರಿಂದ ವಿದ್ಯುತ್ ಸ್ಪರ್ಶವಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ವಿದ್ಯುತ್ ಇಲಾಖೆಯವರು ಕೂಡಲೇ ಕಂಬಕ್ಕೆ ಹಬ್ಬಿರುವ ಕಾಡು ಬಳ್ಳಿಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.