ವೀರಾಜಪೇಟೆ, ಜೂ. ೯: ಸಮೀಪದ ಕದನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಪ್ರತಿಷ್ಠಾಪನಾ ಅಷ್ಟಮಂಗಲ ಮಹೋತ್ಸವ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ವಾಸ್ತುಹೋಮ, ವಾಸ್ತುಬಲಿ, ವಾಸ್ತು, ಕಲಶ ಪೂಜೆಗಳು, ಗಣಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವಕಲಶ, ಬಿಂಬಶುದ್ಧಿ ಕಲಶ ಪೂಜೆ, ಕಲಾವೃದ್ಧಿ ಹೋಮ ಹಾಗೂ ಕಲಾಹೋಮ, ಮಂಡಲ ಪೂಜೆಗಳು ನಡೆದವು.

ಮಹೋತ್ಸವದ ಅಂಗವಾಗಿ ಎರಡೂ ದಿನಗಳು ಭಕ್ತರಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಅಧ್ಯP್ಷÀ ಅಮ್ಮುಣಿಚಂಡ ಎನ್. ರವಿ ಉತ್ತಪ್ಪ, ಆಡಳಿತ ಮಂಡಳಿಯ ಪೆಮ್ಮಂಡ ಪ್ರಸಾದ್, ಪಾಲೇಕಂಡ ಉಮೇಶ್, ಸರ್ವ ಸದಸ್ಯರು ಸೇರಿದಂತೆ ಊರಿನ ಭಕ್ತಾದಿಗಳು ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.