ಶನಿವಾರಸಂತೆ, ಜೂ. ೯: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ಪುರಾತನ ಹಾರಳ್ಳಿ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಲ್ಲದೇ ತ್ಯಾಜ್ಯವನ್ನೂ ತಂದು ಸುರಿಯುತ್ತಿದ್ದಾರೆ. ಈ ಒತ್ತುವರಿಯನ್ನು ತೆರವುಗೊಳಿಸಿ ತ್ಯಾಜ್ಯ ಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ.

ಏ. ೪ ರಂದು ಶಕ್ತಿ ದಿನಪತ್ರಿಕೆಯಲ್ಲಿ ಈ ಸಂಬAಧ ಪ್ರಕಟವಾಗಿದ್ದು ವರದಿಯಿಂದ ಎಚ್ಚೆತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಗ್ರಾಮಸ್ಥರ ಸಮಕ್ಷಮ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಆದರೆ, ಇದೀಗ ೨ ತಿಂಗಳಾದರೂ ಚುನಾವಣೆ ಮುಗಿದಿದ್ದರೂ ಅಧಿಕಾರಿಗಳು ಯಾರೂ ಸ್ಪಂದಿಸದೆ ನಿರ್ಲಕ್ಷö್ಯ ತೋರುತ್ತಿದ್ದಾರೆ. ಮನವಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಸ ಸಮಸ್ಯೆ ಬಗೆಹರಿಸಲಿಲ್ಲ. ಏರಿ ಜಾಗದ ಸುತ್ತ ಬೇಲಿಯನ್ನೂ ನಿರ್ಮಿಸಿಲ್ಲ. ನುಡಿದಂತೆ ನಡೆಯಲಿಲ್ಲ. ಎಂದಿನAತೆಯೇ ಕೆರೆ ಏರಿಯ ಸುತ್ತಮುತ್ತಲಿನ ೬೦-೭೦ ಮನೆಯವರು ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸಲಿಲ್ಲ ಎಂದು ದೂರಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಶತಮಾನಕ್ಕೂ ಹಿಂದಿನ ಪುರಾತನ ಕೆರೆಯ ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಡಬೇಕು. ಸಮಸ್ಯೆಯ ಕುರಿತು ಶಾಸಕ ಡಾ. ಮಂಥರ್ ಗೌಡರ ಗಮನಕ್ಕೂ ತರಲಾಗುವುದು ಎಂದು ತಿಳಿಸಿ ಗ್ರಾಮ ಪ್ರಮುಖರಾದ ಹೆಚ್.ಎಂ. ಹೂವಯ್ಯ, ಹೆಚ್.ಎಲ್. ರಘು, ರವಿ, ಗಣೇಶ್, ಜಯಂತ್, ಮಧು, ಹೆಚ್.ಸಿ. ದೇವರಾಜ್, ಹೆಚ್.ಕೆ. ರುದ್ರಪ್ಪ ಕ್ರಮಕ್ಕೆ ಆಗ್ರಹಿಸಿದ್ದಾರೆ.