ಡಾ. ಮಂಥÀರ್ ಗೌಡ
ಕೊಡ್ಲಿಪೇಟೆ, ಜೂ. ೧೦: ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ದ್ವೇಷದ ರಾಜಕರಣ ಮಾಡುವುದಿಲ್ಲವೆಂದು ನೂತನ ಶಾಸಕ ಡಾ. ಮಂಥರ್ ಗೌಡ ಅಭಿಮತ ವ್ಯಕ್ತಪಡಿಸಿದರು.
ಅವರು ಕೊಡ್ಲಿಪೇಟೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದಂತಹ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು. ಈಗ ವಿಜಯೋತ್ಸವ ಮಾಡುತ್ತಿಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಿಮ್ಮ ಊರಿನ ಅಭಿವೃದ್ಧಿ ಮಾಡಿದಾಗ ಕರೆದು ಸಿಹಿ ನೀಡಿ ವಿಜಯೋತ್ಸವ ಮಾಡಿ ಎಂದರು. ಜಿಲ್ಲೆಯ ಗಡಿಭಾಗವಾದ ಈ ಹೋಬಳಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳನ್ನು ಪೂರ್ತಿಗೊಳಿಸಲು ಮತ್ತು ಆಗಬೇಕಾದ ಕೆಲಸಗಳ ಕಡೆ ಗಮನಹರಿಸಿ ಹಂತಹAತವಾಗಿ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಪ್ರಾಸ್ತಾವಿಕ ನುಡಿಗಳ ನ್ನಾಡಿದರು, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಬಿ.ಇ. ಜಯೇಂದ್ರ, ಕೆ.ಪಿ.ಸಿ.ಸಿ. ಸದಸ್ಯ ಯಾಕೂಬ್, ಮುಖಂಡರಾದ ಶಾಂತವೇರಿ ವಸಂತ್, ಹಣಕೋಡು ಸುರೇಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಲಯ ಅಧ್ಯಕ್ಷ ಔರಂಗಜೇಬ್, ಜಿಲ್ಲಾ ಮುಖಂಡ ಡಾ. ಉದಯ್ ಕುಮಾರ್, ಎಸ್.ಕೆ.ವೀರಪ್ಪ, ತಾ.ಪಂ. ಮಾಜಿ ಸದಸ್ಯ ಜೆ.ಆರ್.ಪಾಲಕ್ಷ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್.ಜನಾರ್ದನ್, ಬ್ಯಾಡಗೊಟ್ಟ ವಲಯಾಧ್ಯಕ್ಷ ಸುಲೈಮಾನ್, ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಪ್ರಸನ್ನ, ನಿರ್ದೇಶಕರಾದ ತೇಜ್ಕುಮಾರ್, ಅಶೋಕ್, ರಾಜು, ಗ್ರಾ.ಪಂ. ಅಧ್ಯಕ್ಷೆ ಯಶೋದಮ್ಮ, ಉಪಾಧ್ಯಕ್ಷೆ ನಗೀನಾ ಭಾನು, ಸದಸ್ಯರಾದ ವಹಾಬ್, ಪ್ರಸನ್ನ, ಬೂತ್ ಸಮಿತಿಯ ಅಧ್ಯಕ್ಷರುಗಳು ಮುಂತಾದವರಿದ್ದರು.
ಕಾರ್ಯಕ್ರಮ ಪ್ರಾರಂಭಕ್ಕೆ ಮುನ್ನ ಶಾಸಕರನ್ನು ಕೆರಗನಹಳ್ಳಿ ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಹೊಸ ಮುನ್ಸಿಪಾಲ್ಟಿ ಗಣಪತಿ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.