ಪೊನ್ನಂಪೇಟೆ, ಜೂ. ೧೦: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ೬೨ ವಿಶೇಷಚೇತನರಿಗೆ ಶೇ.೫ ರ ಮೀಸಲಾತಿಯಡಿ ಸಹಾಯಧನ ಚೆಕ್ ಹಾಗೂ ವೀಲ್ ಚೇರ್ ವಿತರಣೆ, ವಿಶೇಷಚೇತನರೊಬ್ಬರ ಚಪ್ಪಲಿ ಅಂಗಡಿಯನ್ನು ದುರಸ್ತಿಪಡಿಸಿದ ವೆಚ್ಚ ಪಾವತಿ ಒಳಗೊಂಡAತೆ ಒಟ್ಟು ಎರಡು ಲಕ್ಷದ ಇಪ್ಪತ್ತೆöÊದು ಸಾವಿರ ರೂಗಳ ಮೊತ್ತದ ಸಹಾಯಧನ ನೀಡಲಾಯಿತು. ಈ ಸಂದರ್ಭ ಎಲ್ಲಾ ವಿಶೇಷಚೇತನರಿಗೆ ಆರೋಗ್ಯ ಅಮೃತ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಡಿ. ವಿ. ದಶಮಿ, ಸದಸ್ಯರಾದ ಅಣ್ಣೀರ ಹರೀಶ್, ರಸಿಕ, ಕೆ.ಎ. ವಿಜಯಕುಮಾರ್, ಪಿ.ಕೆ. ನೇತ್ರಾವತಿ, ಮೂಕಳೇರ ಜಿ. ಸುಮಿತ, ಎಂ.ಕೆ. ಮಧುಕುಮಾರ್, ರಾಮಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಜೆ. ಪುಟ್ಟರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.