ಮಡಿಕೇರಿ, ಜೂ. ೧೦: ಸೂರ್ಲಬ್ಬಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಡಿಕೇರಿಯ ಉದ್ಯಮಿ ಕೂರ್ಗ್ ಕುಸಿನ್ ಮಾಲೀಕ ಕಣ್ಣಚಂಡ ಗಿರೀಶ್ ಪೆಮ್ಮಯ್ಯ ಅವರು ಅಂದಾಜು ರೂ. ೧ ಲಕ್ಷ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕಳೆದ ವರ್ಷ ಇವರ ಪುತ್ರ ಸ್ವರೂಪ್ ಅಯ್ಯಪ್ಪ ಅವರು ಅವಘಡವೊಂದರಲ್ಲಿ ಮೃತಪಟ್ಟಿದ್ದು, ಇವರ ಹೆಸರಿನಲ್ಲಿ ಗಿರೀಶ್ ಪೆಮ್ಮಯ್ಯ ಕುಟುಂಬದವರು ಶಾಲೆಗೆ ಪ್ರಿಂಟರ್ ಮೆಷಿನ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಾದ ನೋಟ್ ಪುಸ್ತಕ, ಪೆನ್, ಪೆನ್ಸಿಲ್, ಶಾಲಾ ಬ್ಯಾಗ್, ರೈನ್ಕೋಟ್, ಟ್ರಾö್ಯಕ್ ಸೂಟ್ಗಳನ್ನು ಉಚಿತವಾಗಿ ವಿತರಿಸಿದರು.
ಸರಳ ಕಾರ್ಯಕ್ರಮದಲ್ಲಿ ಗಿರೀಶ್ ಪೆಮ್ಮಯ್ಯ, ಪುಷ್ಪಾ ಗಿರೀಶ್, ಪುತ್ರ ಸುಬ್ಬಯ್ಯ ಸೇರಿದಂತೆ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಪೋಷಕರು ಪಾಲ್ಗೊಂಡಿದ್ದರು.