ವೀರಾಜಪೇಟೆ, ಜೂ. ೮ : ಕೆಲವು ತಿಂಗಳುಗಳಿAದ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಕುಟ್ಟಂದಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ನಗರದ ಬಂಗಾಳಿ ಬೀದಿ ಕಾವೇರಿ ಕಲ್ಯಾಣ ಮಂಟಪದ ಸನಿಹ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆಲೆಯಡ ದಿ. ನಾಣಯ್ಯ ಮತ್ತು ಸರಸ್ವತಿ (ಸರಸು) ದಂಪತಿಯ ದ್ವಿತೀಯ ಪುತ್ರಿ ಗೋಣಿಕೊಪ್ಪಲು ಡಿಜಿಟಲ್ ೩ ಸುದ್ದಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೀಕ್ಷಿತಾ (೨೧) ಎಂಬಾಕೆಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ.
ದೀಕ್ಷಿತಾ ಹಲವು ತಿಂಗಳುಗಳಿAದ ತೀವ್ರ ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ನಿತ್ಯ ಕರ್ತವ್ಯಕ್ಕೆ ತೆರಳುತ್ತಿದ್ದ ಆಕೆ ಇಂದು ಕೆಲಸಕ್ಕೆ ಗೈರುಹಾಜರಾಗಿ ಮನೆಯಲ್ಲಿದ್ದಳು. ಮೃತಳ ತಾಯಿ ಮತ್ತು ಅಕ್ಕ ಮತ್ತು ಬಾವ ಸಂಬAಧಿಕರ ಮದುವೆಗೆ ತೆರಳಿದ್ದ ಸಂದರ್ಭ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತಳ ತಾಯಿ ಸರಸ್ವತಿ ಅವರು ನೀಡಿದ ದೂರಿನನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. - ಕಿಶೋರ್ ಶೆಟ್ಟಿ