ಮಡಿಕೇರಿ, ಜೂ. ೮: ಮಗು ಹುಟ್ಟಿದ ಬಳಿಕ ಜನನ ಪ್ರಮಾಣ ಪತ್ರ ಹಾಗೂ ಯಾರಾದರೂ ಸಾವನ್ನಪ್ಪಿದರೆ ಮರಣ ಪ್ರಮಾಣ ಪತ್ರವನ್ನು ಪಡೆಯಲು ಇನ್ನು ಮುಂದಕ್ಕೆ ವಾರಸು ದಾರರು ಆಸ್ಪತ್ರೆಗೆ ಅಲೆದಾಡಬೇಕಾಗಿಲ್ಲ., ಬದಲಿಗೆ ವಾರಸುದಾರರ ಮನೆ ಬಾಗಿಲಿಗೆ ತಲಪಿಸುವ ಹೊಸತೊಂದು ಯೋಜನೆಯನ್ನು ಭಾರತೀಯ ಅಂಚೆ ಕಚೇರಿ ಜಾರಿಗೆ ತಂದಿದೆ.
ಸಾಮಾನ್ಯವಾಗಿ ಒಂದು ಮಗು ಹುಟ್ಟಿದಾಗ ಹಾಗೂ ಯಾರಾದರೂ ಮೃತಪಟ್ಟಾಗ ದೃಢೀಕರಣಕ್ಕಾಗಿ ಪ್ರಮಾಣ ಪತ್ರಗಳು ಅತ್ಯವಶ್ಯ. ಈ ಪ್ರಮಾಣ ಪತ್ರಗಳನ್ನು ನಿಗದಿತ ಕಾಲಮಾನದೊಳಗಡೆ ಸರಕಾರಿ ಆಸ್ಪತ್ರೆಗಳಿಂದ ಹಾಗೂ ನಂತರದಲ್ಲಿ ಸಂಬAಧಿಸಿದ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಂದ ಪಡೆದುಕೊಳ್ಳಬೇಕಾಗಿದೆ.
(ಮೊದಲ ಪುಟದಿಂದ) ಇದಕ್ಕಾಗಿ ಸಂಬAಧಿಸಿದ ವಾರಸುದಾರರು ಕನಿಷ್ಟ ಎರಡು-ಮೂರು ದಿನಗಳಾದರೂ ಅಲೆದಾಡಬೇಕಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಂಚೆ ಇಲಾಖೆ ವಾರಸುದಾರರ ಮನೆ ಬಾಗಿಲಿಗೆ ಅಂಚೆ ಮೂಲಕ ತಲಪಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಮಂಗಳೂರಿನಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಎರಡನೇ ಹಂತವಾಗಿ ಕೊಡಗು ಜಿಲ್ಲೆಯಲ್ಲಿ ಜಾರಿಗೊಳ್ಳಲಿದೆ.
ಏನಿದು ಯೋಜನೆ..?
ಈ ಯೋಜನೆಯನ್ವಯ ಅಂಚೆ ಇಲಾಖೆಯಿಂದ ನಿಯೋಜಿಸಲ್ಪಟ್ಟವರು ಪ್ರತಿನಿತ್ಯ ಆಸ್ಪತ್ರೆಗಳಿಗೆ ತೆರಳಿ ಜನಿಸುವ ಮಗು ಹಾಗೂ ಸಾವನ್ನಪ್ಪುವವರ ವಿವರಗಳನ್ನು ಕಲೆ ಹಾಕಿ, ಅವರುಗಳಿಗೆ ಸಂಬAಧಿಸಿದ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ‘ಸ್ಪೀಡ್ ಪೋಸ್ಟ್’ ಮೂಲಕ ವಾರಸುದಾರರ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ವಾರಸುದಾರರು ಪತ್ರ ತಲಪಿದಾಗ ಅಂಚೆ ವೆಚ್ಚ ಭರಿಸಿ ಮನೆಯಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಭಾರತ ದೇಶದೊಳಗಡೆ ಯಾವದೇ ಪ್ರದೇಶದಲ್ಲಿ ವಾಸವಿದ್ದರೂ ಅವರ ವಿಳಾಸಕ್ಕೆ ತಲಪಿಸುವ ಯೋಜನೆ ಇದಾಗಿದೆ.
ಒಂದು ವೇಳೆ ಪ್ರಮಾಣ ಪತ್ರಗಳನ್ನು ಕಳೆದುಕೊಂಡಲ್ಲಿ ಅಂತಹವರು ಆಸ್ಪತ್ರೆಗೆ ಮರು ಅರ್ಜಿ ಸಲ್ಲಿಸಿದಲ್ಲೂ ತಲಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ವ್ಯವಸ್ಥೆ ಆರೋಗ್ಯ ಇಲಾಖೆಗೆ ಸಂಬAಧಿಸಿದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಜಾರಿಯಾಗಲಿದ್ದು, ಪ್ರಥಮವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಾಲನೆಗೆ ಬರಲಿದೆ. ನಂತರದಲ್ಲಿ ತಾಲೂಕುವಾರು ಆಸ್ಪತ್ರೆಗಳಲ್ಲೂ ಆರಂಭಿಸಲಾಗುವದೆAದು ಯೋಜನೆಯ ಉಸ್ತುವಾರಿ, ಅಂಚೆ ಇಲಾಖೆಯ ಸುದರ್ಶನ್ ಮಾಹಿತಿ ನೀಡಿದರು. ಈ ಯೋಜನೆ ತಾ.೯ರಂದು (ಇಂದು) ಜಿಲ್ಲಾ ಆಸ್ಪತ್ರೆಯಲ್ಲಿ ಜಾರಿಗೊಳ್ಳಲಿದೆ. ಇದೊಂದು ಉತ್ತಮ ಜನೋಪಯೋಗಿ ಯೋಜನೆಯಾಗಿದ್ದು, ಸಾರ್ವಜನಿಕರಿಗೆ ಬಹುಪಯೋಗವಾಗಲಿದೆ.
? ಸಂತೋಷ್